ನವದೆಹಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ ನೋಟಿಸ್ ನೀಡಿದೆ. ಡೋಪಿಂಗ್ ವಿರೋಧಿ ನಿಯಮಗಳ ಅಗತ್ಯತೆಗಳನ್ನು ಅನುಸರಿಸುವ ವಿಚಾರದಲ್ಲಿ ಸ್ಪಷ್ಟ ವೈಫಲ್ಯಕ್ಕಾಗಿ ನಾಡಾ(NADA) ನೋಡಿಸ್ ನೀಡಿದ್ದು ಈ ನೋಟಿಸ್ಗೆ ಪ್ರತಿಕ್ರಿಯಿಸಲು ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.
ಹಾಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ವಿನೇಶ್ ಫೋಗಟ್ ಅವರು ಗುರುವಾರ ಆರಂಭವಾದ ಬುಡಾಪೆಸ್ಟ್ ಶ್ರೇಯಾಂಕ ಸರಣಿ ಟೂರ್ನಿಯಲ್ಲಿ ಪಾಳ್ಗೊಂಡಿದ್ದಾರೆ ಎಂದು ವರದಿಯಾಗಿದೆ. ನಾಡಾ ನೀಡಿದ ನೋಟಿಸ್ನಲ್ಲಿ ಸ್ಪಷ್ಟವಾದ ವೈಫಲ್ಯದ ಬಗ್ಗೆ ಕಾರಣ ತಿಳಿಸುವಂತೆ ಸೋಚಿಸಿದೆ. ಒಂದೊಮ್ಮೆ ನಿಗಧಿತ ಸಮಯದಲ್ಲಿ ಸರಿಯಾದ ಕಾರಣವನ್ನು ನೀಡದಲ್ಲಿ ಕಠಿಣ ಕ್ರಮ ಜಾರಿ ಮಾಡಲಾಗುವುದು ಎಂದು ನಾಡಾ ತಿಳಿಸಿದೆ. ವಿನೇಶ್ ಫೋಗಟ್ಗೆ ನಾಡಾ ನೋಟಿಸ್ ನೀಡಿದ ಬೆನ್ನಲ್ಲೇ ಕೆಲವರು ಇದು ಬ್ರಿಜ್ ಭೂಷಣ್ ಅವರ ಪಿತೂರಿ ಎಂದು ಹೇಳಿದ್ದಾರೆ.
ಟ್ರಯಲ್ಸ್ ಪಂದ್ಯ ಗೆದ್ದರಷ್ಟೇ ವಿಶ್ವ ಚಾಂಪಿಯನ್ಶಿಪ್ಗೆ ಅವಕಾಶ
ಭಾರತ ಒಲಿಂಪಿಕ್ ಸಂಸ್ಥೆಯ ಅಡ್‌ಹಾಕ್ ಸಮಿತಿ ಕೈಗೊಂಡ ಕ್ರಮದಂತೆ, ಈ ಕುಸ್ತಿಪಟುಗಳು ಟ್ರಯಲ್ಸ್ ವಿಜೇತರ ವಿರುದ್ಧ ಗೆದ್ದರೆ ಈ ಎರಡು ಪ್ರತಿಷ್ಠಿತ ಕೂಟಗಳಿಗೆ ಆಯ್ಕೆಯಾಗಬಹುದು ಎಂದು ತಿಳಿಸಿದೆ. ವಿನೇಶ್ ಫೋಗಟ್(Vinesh Phogat), ಬಜರಂಗ್ ಪೂನಿಯಾ(Bajrang Punia), ಸಾಕ್ಷಿ ಮಲಿಕ್(Sakshi Malik), ಸಂಗೀತಾ ಫೋಗಟ್(Sangeeta Phogat), ಸತ್ಯವ್ರತ ಕಾದಿಯಾನ್(Satyawart Kadian) ಮತ್ತು ಜಿತೇಂದರ್ ಕಿನ್ಹಾ(Jitender Kumar) ಅವರಿಗೆ ಪೂರ್ವಭಾವಿ ಟ್ರಯಲ್ಸ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ. ಆಗಸ್ಟ್ 5 ರಿಂದ 15ರ ನಡುವೆ ನಡೆಯುವ ಟ್ರಯಲ್ಸ್‌ನಲ್ಲಿ ಆಯಾ ತೂಕ ವಿಭಾಗದ ವಿಜೇತರ ಎದುರು ಈ ಕುಸ್ತಿಪಟುಗಳು ಹೋರಾಟ ನಡೆಸಿದರಷ್ಟೇ ಸಾಕು ಎಂದು ಈ ಕುಸ್ತಿಪಟುಗಳಿಗೆ ಭಾರತ ಒಲಿಂಪಿಕ್ ಸಂಸ್ಥೆ ಭರವಸೆ ನೀಡಿದೆ.
ಇದನ್ನೂ ಓದಿ Wrestlers Protest: ಟ್ರಯಲ್ಸ್‌ನಿಂದ ಯಾವುದೇ ರಿಯಾಯಿತಿ ಪಡೆದಿಲ್ಲ; ಕುಸ್ತಿಪಟುಗಳ ಸ್ಪಷ್ಟನೆ
ಸರಿ ಸುಮಾರು 3 ತಿಂಗಳುಗಳ ಕಾಲ ಪ್ರತಿಭಟನೆಯ ಹಿಂದೆ ಬಿದ್ದಿದ್ದ ಈ ಕುಸ್ತಿಪಟುಗಳು ಯಾವುದೇ ಅಭ್ಯಾಸ ಮತ್ತು ಕುಸ್ತಿ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಆಗಸ್ಟ್‌ನಲ್ಲಿ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಈ ಕುಸ್ತಿಪಟುಗಳು ಕ್ರೀಡಾ ಸಚಿವಾಲಯವನ್ನು ಕೋರಿದ್ದರು. ಈ ಹಿಂದೆ ಹಲವು ಬಾರಿ ಬಜರಂಗ್ ಮತ್ತು ವಿನೇಶ್ ಅವರಿಗೆ ಪೂರ್ಣ ಪ್ರಮಾಣದ ಟ್ರಯಲ್ಸ್‌ನಿಂದ ವಿನಾಯಿತಿ ನೀಡಲಾಗಿತ್ತು.