Site icon Vistara News

INDvsAUS : ನಾಗ್ಪುರ- ಡೆಲ್ಲಿ ಪಿಚ್​ಗೆ ಸಾಧಾರಣ ಪಿಚ್​ ಎಂಬ ರೇಟಿಂಗ್ಸ್​ ಕೊಟ್ಟ ಐಸಿಸಿ

Nagpur-Delhi pitch has been rated as average pitch by ICC

#image_title

ದುಬೈ: ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ನಡುವೆ ನಡೆಯುತ್ತಿರುವ (INDvsAUS) ಬಾರ್ಡರ್ – ಗವಾಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳು ನಡೆದ ನಾಗ್ಪುರ ಹಾಗೂ ನವ ದೆಹಲಿ ಪಿಚ್​ಗೆ ಅಂತಾರಾಷ್ಟ್ರೀಯ ಕ್ರಿಕಟ್ ಸಮಿತಿ (ಐಸಿಸಿ) ಸಾಧಾರಣ ಪಿಚ್​ ಎಂಬ ರೇಟಿಂಗ್ಸ್​ ಕೊಟ್ಟಿದೆ. ಎರಡೂ ಸ್ಟೇಡಿಯಮ್​ನಲ್ಲಿ ಪಂದ್ಯ ಎರಡೂವರೆ ದಿನಕ್ಕೆ ಮುಗಿದು ಹೋಗಿತ್ತು. ಹೀಗಾಗಿ ಸ್ಪರ್ಧಾತ್ಮಕ ಪಿಚ್​ ಆಗಿರಲಿಲ್ಲ ಎಂದು ಘೋಷಿಸಿದ ಐಸಿಸಿ ಸಾಧಾರಣ ರೇಟಿಂಗ್ಸ್​ ಕೊಟ್ಟಿದೆ. ಈ ಮಾದರಿಯ ರೇಟಿಂಗ್​ನಿಂದಾಗಿ ಭಾರತ ತಂಡಕ್ಕೆ ಹಿನ್ನಡೆ ಉಂಟಾಗುವುದಿಲ್ಲ.

ಪಂದ್ಯ ಆರಂಭವಾಗುವ ಮೊದಲೇ ಈ ಎರಡೂ ಪಿಚ್​ಗಳು ಸ್ಪಿನ್​ಗೆ ಪೂರಕವಾಗಿವೆ ಎಂಬ ಚರ್ಚೆಗಳು ಮೊದಲೇ ನಡೆದಿದ್ದವು. ಅದಕ್ಕೆ ಪೂರಕವಾಗಿ ಎರಡೂ ಪಂದ್ಯ ಸಣ್ಣ ಮೊತ್ತಕ್ಕೆ ಸಮಾಪ್ತಿಗೊಂಡಿತ್ತು. ಇದೀಗ ಐಸಿಸಿ ಕೂಡ ಪಿಚ್​ ಸಾಧಾರಣವಾಗಿತ್ತು ಎಂದು ಹೇಳಿದೆ.

ನಾಗ್ಪುರ್​ ಪಿಚ್​ನ ಗ್ರೌಂಡ್ ಸಿಬ್ಬಂದಿ ಪಂದ್ಯ ಅರಂಭಕ್ಕೆ ಮೊದಲು ಪಿಚ್​ನ ಕೆಲವು ಪ್ರದೇಶಕ್ಕೆ ನೀರು ಸುರಿದಿದ್ದಾರೆ. ಇದರಿಂದ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ಗಳಿಗೆ ಬ್ಯಾಟ್​ ಮಾಡಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿತ್ತು ಎಂಬುದಾಗಿ ಆಸ್ಟ್ರೇಲಿಯಾದ ಮಾಧ್ಯಮಗಳು ದೂರಿದ್ದವು. ಆದರೆ, ಭಾರತದ ಹಿರಿಯ ಕ್ರಿಕೆಟಿಗರು ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದರು. ಆದರೆ, ಬಿಸಿಸಿಐ ಉತ್ತರ ಕೊಟ್ಟಿರಲಿಲ್ಲ.

ಇದನ್ನೂ ಓದಿ : IPL 2023 | ಐಪಿಎಲ್​ನಲ್ಲಿ ನನಗೆ ಸಿಕ್ಕಿದ ದುಡ್ಡು ಜಾಸ್ತಿಯಾಯಿತು ಎಂದ ಕ್ಯಾಮೆರಾನ್​ ಗ್ರೀನ್​!

ಇಂದೋರ್ ಹಾಗೂ ಅಹಮದಾಬಾದ್​ನಲ್ಲಿ ಎರಡು ಹಾಗೂ ಮೂರನೇ ಪಂದ್ಯ ನಡೆಯಲಿದೆ. ಮಾರ್ಚ್​ 1 ಹಾಗೂ 9ರಂದು ಪಂದ್ಯಗಳು ಆರಂಭವಾಗಲಿವೆ. ಭಾರತ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸಿದೆ.

Exit mobile version