ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು(Bangladesh Cricket Board) ಮೂರು ಮಾದರಿಯ ಕ್ರಿಕೆಟ್ಗೆ(Bangladesh captain) ನೂತನ ನಾಯಕನನ್ನು ನೇಮಕ ಮಾಡಿದೆ. ನಜ್ಮುಲ್ ಹೊಸೈನ್ ಶಾಂಟೊ(Najmul Hossain Shanto) ಅವರನ್ನು ಮುಂದಿನ ಒಂದು ವರ್ಷಕ್ಕೆ ಎಲ್ಲಾ ಸ್ವರೂಪಗಳ ಕ್ರಿಕೆಟ್ಗೆ ನಾಯಕರನ್ನಾಗಿ ನೇಮಿಸಿದೆ.
ಶೇರ್-ಎ-ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಅವರು ನೂತನ ನಾಯಕನ ಹೆಸರನ್ನು ಘೋಷಣೆ ಮಾಡಿದರು. ತಂಡದ ಹಿರಿಯ ಮತ್ತು ಅನುಭವಿ ಆಟಗಾರ ಶಕೀಬ್ ಅಲ್ ಹಸನ್(Shakib Al Hasan) ಅವರಿಗೆ ತಂಡದ ನಾಯಕತ್ವವನ್ನು ನೀಡಲು ಬಿಸಿಬಿ ನಿರ್ಧರಿಸಿತ್ತು. ಆದರೆ, ಶಕೀಬ್ ಕಣ್ಣಿನ ಸಮಸ್ಯೆಯಿಂದಾಗಿ ಬಳಲುತ್ತಿರುವ ಕಾರಣದಿಂದ ಅವರು ತಂಡಕ್ಕೆ ಮರಳುವುದು ಅನುಮಾನ ಎನ್ನಲಾಗಿದೆ. ಈ ಕಾರಣದಿಂದ 25 ವರ್ಷದ ನಜ್ಮುಲ್ ಹೊಸೈನ್ ಶಾಂಟೊಗೆ ನಾಯಕತ್ವದ ಪಟ್ಟ ನೀಡಲಾಗಿದೆ.
ಇದನ್ನೂ ಓದಿ IND vs ENG: ವೀಸಾ ವಿವಾದಕ್ಕೆ ಸಿಲುಕಿದ ಇಂಗ್ಲೆಂಡ್ ಆಟಗಾರ; ಸರಿಪಡಿಸಲು 24 ಗಂಟೆ ಕಾಲಾವಕಾಶ
“ನಜ್ಮುಲ್ ಹೊಸೈನ್ ಶಾಂಟೊ ಅವರ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ನಜ್ಮುಲ್ ಹೊಸೈನ್ ಶಾಂಟೊ ಬಾಂಗ್ಲಾದೇಶ ಪರ 25 ಟೆಸ್ಟ್ ಪಂದ್ಯಗಳನ್ನಾಡಿ 1449 ರನ್ ಬಾರಿಸಿದ್ದಾರೆ, ಏಕದಿನದಲ್ಲಿ 42 ಪಂದ್ಯಗಳಿಂದ 1202, ಟಿ20ಯಲ್ಲಿ 28 ಪಂದ್ಯವಾಡಿ 602 ರನ್ ಗಳಿಸಿದ್ದಾರೆ.
BREAKING: Najmul Hossain Shanto has been appointed Bangladesh men's captain for all three formats 🇧🇩 pic.twitter.com/2v54MpL6h9
— ESPNcricinfo (@ESPNcricinfo) February 12, 2024
ಬಾಂಗ್ಲಾ ನಾಯಕ ಶಕೀಬ್ ಅವರ ಎಡಗಣ್ಣಿನ ರೆಟಿನಾದಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್‌ನ ನಂತರ ಶಕೀಬ್, ಕಣ್ಣಿನಲ್ಲಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಅದನ್ನು ನೇತ್ರ ತಜ್ಞ ವೈದರ ಬಳಿ ತೊರಿಸಲಾಗಿತ್ತು. ಈ ವೇಳೆ ಅವರ ರೆಟಿನಾದಲ್ಲಿ ಸಮಸ್ಯೆ ಇದೆ ಎಂಬುದು ಬೆಳಕಿಗೆ ಬಂದಿದೆ.
ಈ ಕುರಿತು ಬಿಸಿಬಿಯ ಹಿರಿಯ ವೈದ್ಯ ದೇಬಾಶಿಶ್ ಚೌಧರಿ ಮಾಹಿತಿ ನೀಡಿದ್ದು, ಶಕೀಬ್ ಎಡಗಣ್ಣಿನ ಎಕ್ಸ್‌ಟ್ರಾಫೋವಲ್ ಸೆಂಟ್ರಲ್ ಸೆರೋಸ್ ಕೊರಿಯೊ ರೆಟಿನೋಪತಿ (ಸಿಎಸ್‌ಆರ್) ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ದೇಬಾಶಿಶ್ ಚೌಧರಿ, ಸೆಂಟ್ರಲ್ ಸೆರೋಸ್ ಕೊರಿಯೊ ರೆಟಿನೋಪತಿ ಸಮಸ್ಯೆಗೆ ತುತ್ತಾಗುವ ವ್ಯಕ್ತಿಯ ಕಣ್ಣುಗಳ ರೆಟಿನಾದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆ ವ್ಯಕ್ತಿಯ ದೃಷ್ಟಿ ಅಡಚಣೆಗಳಿಗೆ ಕಾರಣವಾಗುತ್ತದೆ ಎಂದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಕೀಬ್ ಸಿಂಗಾಪುರಕ್ಕೆ ತೆರಳುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಬೀಕ್ ಆಡುವುದು ಅನುಮಾನ.