ಅಹಮದಾಬಾದ್: ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳ ಮಧ್ಯೆ ಕ್ರಿಕೆಟ್ ಸಮರಕ್ಕೆ ವೇದಿಕೆಯೊಂದು ಸಿದ್ಧಗೊಂಡಿದೆ. ಶನಿವಾರ ನಡೆಯುವ ವಿಶ್ವಕಪ್ನ(ICC world cup 2023) ಲೀಗ್ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿವೆ. ಇದು ಏಳು ವರ್ಷಗಳ ಬಳಿಕ ಪಾಕ್ ತಂಡ ಭಾರತದಲ್ಲಿ ಆಡುವ ಪಂದ್ಯವಾಗಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಾಗಿ ಇದೆ. ಈ ಪಂದ್ಯದ ಪಿಚ್ ರಿಪೋಟ್ ಮತ್ತು ಸಂಭಾವ್ಯ ತಂಡದ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ದೊಡ್ಡ ಮೊತ್ತವನ್ನು ಇಲ್ಲಿ ನಿರೀಕ್ಷೆ ಮಾಡಬಹುದು. ಉಭಯ ತಂಡಗಳಲ್ಲಿಯೂ ಸಮರ್ಥ ಆಟಗಾರರು ನೆಚ್ಚಿಕೊಂಡಿದ್ದಾರೆ. ಸ್ಲೋ ವೇಗಿಗಳಿಗೆ ಈ ಪಿಚ್ ಹೆಚ್ಚಿನ ನೆರವು ನೀಡುತ್ತದೆ. ಸ್ಪಿನ್ ಬೌಲಿಂಗ್ ಅಷ್ಟರ ಮಟ್ಟಿಗೆ ಇಲ್ಲಿ ಯಶಸ್ಸು ಕಾಣುವುದು ಕಷ್ಟ.
ಹವಾಮಾನ ವರದಿ
ಇದು ಏಳು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಆಡುತ್ತಿರುವ ಪಂದ್ಯವಾಗಿದೆ. ಈ ಪಂದ್ಯವನ್ನು ನೋಡಲು ಅಭಿಮಾನಿಗಳು ದುಪ್ಪಟ್ಟು ಹಣ ನೀಡಿ ಟಿಕೆಟ್ ಖರೀದಿಸಿದ್ದಾರೆ. ಸ್ಟೇಡಿಯಂ ಹೌಸ್ಫುಲ್ ಆಗುವುದರಲ್ಲಿ ಅನುಮಾನವೇ ಬೇಡ. IMDಯ ಮುನ್ಸೂಚನೆ ಪ್ರಕಾರ ಅಹಮದಾಬಾದ್ ನಗರದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಆದರೆ ಪಂದ್ಯಕ್ಕೆ ವರುಣನ ಅವಕೃಪೆ ಇರದು. ಶನಿವಾರ ಅಹಮದಾಬಾದ್ನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದೆ ಎಂದು ತಿಳಿಸಿದೆ. ಒಂದೊಮ್ಮೆ ಮಳೆ ಬಂದರೂ ವಿಶ್ವಕಪ್ನಲ್ಲಿ ಯಾವುದೇ ಲೀಗ್ ಪಂದ್ಯಕ್ಕೂ ಮೀಸಲು ದಿನ ಇಲ್ಲ. ಐಸಿಸಿ ನಿಯಮದ ಪ್ರಕಾರ ಸೆಮಿಫೈನಲ್ನ ಎರಡು ಪಂದ್ಯಗಳಿಗೆ ಮತ್ತು ಫೈನಲ್ಗೆ ಮಾತ್ರ ಮೀಸಲು ದಿನ ಇರಲಿದೆ. ಹೀಗಾಗಿ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗಲಿದೆ.
ಇದನ್ನೂ ಓದಿ IND vs PAK: ನವರಾತ್ರಿಗೂ ಮುನ್ನ ಪಾಕ್ ಸದೆಬಡಿದು ಗೆಲುವಿನ ನಗೆ ಬೀರಲಿ ಭಾರತ
ಬಿಗಿ ಬಂದೋಬಸ್ತ್
ಬಾಂಬ್ ದಾಳಿಯ ಬೆದರಿಕೆಯಿಂದ ಹೆಚ್ಚುವರಿ ಪೊಲೀಸ್ ಮತ್ತು ಆರ್ಮಿ ಪಡೆಯನ್ನು ಮೈದಾನ ಸುತ್ತಲೂ ನಿಯೋಗ ಮಾಡಲಾಗಿದೆ. ಮೈದಾನದ 100 ಮೀ. ಆವರಣದಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಪಂದ್ಯ ನಡೆಯುವ ದಿನ ಸ್ಟೇಡಿಯಂ ಹೌಸ್ಫುಲ್ ಆಗುವುದು ಖಚಿತವಾಗಿದೆ. ಒಂದೇ ಕಡೆ ಲಕ್ಷಾಂತರ ಜನರು ಸೇರುವ ಜಾಗದಲ್ಲಿ ಅನಾಹುತವಾದರೆ ಭಾರಿ ಎಡವಟ್ಟು ಸಂಭವಿಸುತ್ತದೆ. ಹೀಗಾಗಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಏಳು ಬಾರಿ ವಿಶ್ವ ಕಪ್ ಮುಖಾಮುಖಿ
ಭಾರತ ಮತ್ತು ಪಾಕ್ ಮೊದಲ ಬಾರಿಗೆ ಮಿಶ್ವ ಕಪ್ನಲ್ಲಿ ಮುಖಾಮುಖಿಯಾಗಿದ್ದು 1992ರಲ್ಲಿ ಆ ಬಳಿಕ 1996, 1999, 2003, 2011, 2015, 2019 ಈ ಎಲ್ಲ ಮುಖಾಮುಖಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ. ಈ ಬಾರಿಯೂ ಗೆದ್ದು ಪಾಕಿಗೆ ಎಂಟನೇ ಏಟು ನೀಡಲಿ ಎನ್ನುವುದು ಎಲ್ಲ ಭಾರತೀಯರ ಆಶಯವಾಗಿದೆ.
ಇದನ್ನೂ ಓದಿ IND vs PAK: ಪಾಕ್ ವಿರುದ್ಧ ಭಾರತ ಸೋಲಿಲ್ಲದ ಸರದಾರ; ದಾಖಲೆಯ ಪಟ್ಟಿ ಬಲು ರೋಚಕ
ಸಂಭಾವ್ಯ ತಂಡ
ಭಾರತ: ಇಶಾನ್ ಕಿಶನ್/ಶುಭಮನ್ ಗಿಲ್, ರೋಹಿತ್ ಶರ್ಮ(ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್, ರವೀಂದ್ರ ಜಡೇಜ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್.