ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ, ಮಾಜಿ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್(Narsingh Yadav) ಭಾರತೀಯ ಕುಸ್ತಿ ಫೆಡರೇಷನ್‌ನ(WFI) ಏಳು ಸದಸ್ಯರನ್ನು ಒಳಗೊಂಡ ಅಥ್ಲೀಟ್ ವಿಭಾಗದ(WFI’s seven-member athletes’ panel) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಒಕ್ಕೂಟದ ಏಳು ಹುದ್ದೆಗಳಿಗೆ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನರಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಾಹಿಲ್ (ದೆಹಲಿ), ಎ.ಎಸ್.ಸ್ಮಿತಾ (ಕೇರಳ), ಭಾರತಿ ಭಾಘೀ (ಉತ್ತರಪ್ರದೇಶ), ಖುಷ್ಬೂ ಎಸ್. ಪವಾರ್ (ಗುಜರಾತ್), ನಿಕ್ಕಿ (ಹರಿಯಾಣ) ಹಾಗೂ ಶ್ವೇತಾ ದುಬೇ (ಪಶ್ಚಿಮ ಬಂಗಾಳ) ಸಮಿತಿಗೆ ಆಯ್ಕೆಯಾದ ಇತರ ಸದಸ್ಯರು.
🚨Breaking: Narsingh Yadav becomes the new chairman of the WFI's Athletes Commission 🤼♂️
— Sportz Point (@sportz_point) April 24, 2024
.
.
.#WFI #Wrestling #wrestling #teamindia #WrestlerProtest #ParisOlympics #Paris2024 #indianathletes pic.twitter.com/BvxZcwm4bG
ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅವರು ಕುಸ್ತಿ ಒಕ್ಕೂಟಕ್ಕೆ ಆಯ್ಕೆಯಾದ ನಂತರ, ಸಂಸ್ಥೆ ಮೇಲಿರುವ ಅಮಾನತು ಆದೇಶವನ್ನು ತೆರವುಗೊಳಿಸುವಂತೆ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW) ಸಂಸ್ಥೆಯು ಅಥ್ಲೀಟ್ ಆಯೋಗವನ್ನು 2024ರ ಜುಲೈ 1ರೊಳಗಾಗಿ ರಚಿಸಬೇಕು ಎಂಬ ಷರತ್ತು ವಿಧಿಸಿತ್ತು. ಈ ಸಮಿತಿಯು ಕ್ರಿಯಾಶೀಲವಾಗಿರಬೇಕು. ಕಳೆದ ನಾಲ್ಕು ವರ್ಷದೊಳಗೆ ಕ್ರೀಡೆಯಿಂದ ನಿವೃತ್ತಿಪಡೆದ ಕ್ರೀಡಾಪಟುಗಳು ಮಾತ್ರ ಸಮಿತಿಯಲ್ಲಿರಬೇಕು ಎಂಬ ಷರತ್ತು ಕೂಡ ಹಾಕಿತ್ತು. ಅದರಂತೆಯೇ ಈ ಸಮಿತಿಯನ್ನು ಬುಧವಾರ ರಚನೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆಯು ಭಾರತೀಯ ಕುಸ್ತಿ ಫೆಡರೇಷನ್ ಅನ್ನು ಕಳೆದ ವರ್ಷ ಆಗಸ್ಟ್ 23ರಿಂದ ಅಮಾನತು ಮಾಡಿತ್ತು.
ಇದ್ನನೂ ಓದಿ WFI Suspension: ನೂತನ ಆಡಳಿತ ಮಂಡಳಿ ಅಮಾನತು ಪ್ರಶ್ನಿಸಿ ಮುಂದಿನ ವಾರ ಕೋರ್ಟ್ ಮೆಟ್ಟಿಲೇರಲಿದೆ ಕುಸ್ತಿ ಒಕ್ಕೂಟ
ನರಸಿಂಗ್ 74 ಕೆ.ಜಿ. ವಿಭಾಗದಲ್ಲಿ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದರು. ಅರ್ಜುನ ಪ್ರಶಸ್ತಿ ವಿಜೇತರಾಗಿರುವ ಇವರು 2010ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.
4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ನರಸಿಂಗ್
2016ರ ಒಲಿಂಪಿಕ್ಸ್ ಸಂದರ್ಭದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿದ್ದ ಸುಶೀಲ್ ಕುಮಾರ್ ಗಾಯದ ಸಮಸ್ಯೆ ಎದುರಿಸುತ್ತಿದ್ದರು. ಈ ವೇಳೆ ನರಸಿಂಗ್ ಅವರಿಗೆ ಅವಕಾಶ ಒದಗಿಬಂದಿತ್ತು. ಇದನ್ನು ಪ್ರಶ್ನಿಸಿ ಸುಶೀಲ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅದು ತಿರಸ್ಕೃತಗೊಂಡಿತ್ತು. ಹೀಗಾಗಿ ನರಸಿಂಗ್ ರಿಯೋ ಒಲಿಂಪಿಕ್‌ಗೆ ಪ್ರವೇಶ ಪಡೆದಿದ್ದರು. ಉದ್ದೀಪನಮದ್ದು ಸೇವನೆ ಪರೀಕ್ಷೆಯಲ್ಲಿ ಎರಡು ಬಾರಿ ವಿಫಲರಾಗಿದ್ದ ನರಸಿಂಗ್ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.