Site icon Vistara News

Natasa Stankovic: ಪಾಂಡ್ಯ ಜತೆಗಿನ ವಿಚ್ಛೇದನದ ಅಸಲಿ ಸತ್ಯ ಬಿಚ್ಚಿಟ್ಟ ನತಾಶ!

Natasa Stankovic

Natasa Stankovic: ‘Envy, dishonour, pride’: Reason for divorce with Hardik Pandya? Natasa’s cryptic post fans further speculations

ಲಂಡನ್​: ಜುಲೈನಲ್ಲಿ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ(Hardik Pandya) ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಆದರೆ, ಈ ಜೋಡಿಯ ವಿಚ್ಛೇದನಕ್ಕೆ ಏನು ಕಾರಣವಿರಬಹುದೆಂದು ಎಂಬ ಬಗ್ಗೆ ನಿರಂತರ ಊಹಾಪೋಹಗಳ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಇದೀಗ ನತಾಶ ಅವರೇ ತಮ್ಮ ವಿಚ್ಛೇದನಕ್ಕೆ ಕಾರಣ ಏನೆಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಮಾಡಿರುವ ನತಾಶ, “ಪ್ರೀತಿಯು ಇತರರನ್ನು ಎಂದಿಗೂ ಅವಮಾನಿಸುವುದಿಲ್ಲ.. ಪ್ರೀತಿ ಎಂದರೇ ದಯೆ ಮತ್ತು ತಾಳ್ಮೆ, ಇದು ಹೆಮ್ಮೆ ಅಥವಾ ಅಸೂಯೆಯಲ್ಲ. ಪ್ರೀತಿ ಎನ್ನುವುದು ಬೇಡಿಕೆಯ ವಸ್ತು ಆಗಬಾರದು. ಪ್ರೀತಿ ಎನ್ನುವುದು ರಕ್ಷಣೆ ನೀಡಬೇಕು. ನಿಜವಾದ ಪ್ರೀತಿ ಎಂದಿಗೂ ಸುಳ್ಳಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Natasa Stankovic : ‘ಹೊಸ ಹೆಸರನ್ನು ಪಡೆಯುತ್ತಿದ್ದೇನೆ’; ಕುತೂಹಲ ಮೂಡಿಸಿದ ನತಾಶಾ ಸ್ಟಾಂಕೊವಿಕ್​ ಹೊಸ ಪೋಸ್ಟ್​​​

ನತಾಶಾ ಅವರ ಈ ಪೋಸ್ಟ್ ನೋಡುವಾಗ ಪಾಂಡ್ಯ ಅವರು ನತಾಶ ಜತೆಗೆ ಸರಿಯಾಗಿ ಸಂವಹನ ಮತ್ತು ಅವರನ್ನು ಕೇರ್​ ಮಾಡುತ್ತಿರಲಿಲ್ಲ ಎನ್ನುವಂತಿದೆ. ಅಲ್ಲದೇ ನತಾಶಾಗೆ ಹಾರ್ದಿಕ್‌ ಅವರ ಕೆಲ ನಡುವಳಿಕೆ ಕೂಡ ಇಷ್ಟವಾಗದೇ ಅದನ್ನು ಸರಿಪಡಿಸಿಕೊಳ್ಳಲು ಹೇಳಿದ್ದರೂ ಪಾಂಡ್ಯ ಇದನ್ನು ಪಾಲಿಸಲು ನಿರಾಕರಿಸಿರಬಹುದು ಇದೇ ಕಾರಣಕ್ಕೆ ಇವರಿಬ್ಬರು ಬೇರೆಯಾದರು ಎನ್ನುವಂತಿದೆ.

ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಮಾಹಿತಿ ನೀಡಿತ್ತು. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳಕ್ಕೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು ಎಂದು ಆಪ್ತ ಮೂಲಗಳು ತಿಳಿಸಿತ್ತು. ಇದೀಗ ನತಾಶ ಕೂಡ ಪ್ರೀತಿಯ ಬಗ್ಗೆ ಬರೆದುಕೊಂಡಿರುವುದನ್ನು ನೋಡುವಾಗ ಆಪ್ತ ಮೂಲಗಳು ನೀಡಿದ ಮಾಹಿತಿ ಸತ್ಯ ಎನ್ನುವಂತಿದೆ.


ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ವಿಚ್ಛೇದನ ಪಡೆದರೂ ಕೂಡ ಇಬ್ಬರೂ ಪುತ್ರ ಅಗಸ್ತ್ಯನನ್ನು(Agastya) ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಯಲ್ಲಿ ಖಚಿತಪಡಿಸಿದ್ದಾರೆ.

Exit mobile version