Site icon Vistara News

Nathan Lyon: 500 ವಿಕೆಟ್​ ಪೂರ್ತಿಗೊಳಿಸಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಲಿಯಾನ್

Nathan Lyon

ಪರ್ತ್‌: ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್​ ನಾಥನ್ ಲಿಯಾನ್(Nathan Lyon) ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ಮೈಲುಗಲ್ಲೊಂದುನ್ನು ತಲುಪಿದ್ದಾರೆ. 500 ವಿಕೆಟ್​ಗಳ ಕ್ಲಬ್​ಗೆ ಸೇರ್ಪಡೆಗೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅವರು ಈ ದಾಖಲೆಯನ್ನು ನಿರ್ಮಿಸಿದ್ದಾರೆ.

ದೀರ್ಘಕಾಲ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ನಾಥನ್ ಲಿಯಾನ್ ಅವರು ಪಾಕಿಸ್ತಾನ ವಿರುದ್ಧದ ತವರಿನ ಟೆಸ್ಟ್​ ಪಂದ್ಯದಲ್ಲಿ ಆಡುವ ಮೂಲಕ ಮತ್ತೆ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ್ದರು. ಪಾಕ್​ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಫಹೀಮ್ ಅಶ್ರಫ್ ಅವರನ್ನು ಔಟ್ ಮಾಡುವ ಮೂಲಕ ಲಿಯಾನ್ ತಮ್ಮ ವೃತ್ತಿಜೀವನದ 500 ನೇ ಟೆಸ್ಟ್ ವಿಕೆಟ್ ಪಡೆದರು.

36 ವರ್ಷದ ಅನುಭವಿ ಬೌಲರ್​ ಲಿಯಾನ್ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಬೌಲರ್​ ಎನಿಸಿಕೊಂಡರು. ಉಳಿದ ಇಬ್ಬರೆಂದರೆ ಶೇನ್ ವಾರ್ನ್ (708) ಮತ್ತು ಗ್ಲೆನ್ ಮೆಕ್‌ಗ್ರಾತ್ (563).

ಲಿಯಾನ್ ತನ್ನ 500 ನೇ ವಿಕೆಟ್ ಡಿಆರ್​ಎಸ್​ ಪಡೆದು ಪೂರ್ಣಗೊಳಿಸಿದರು. ಎಲ್​ಬಿಡಬ್ಲ್ಯು ಆಗಿದ್ದ ಫಹೀಮ್ ಅವರನ್ನು ಫೀಲ್ಡ್​ ಅಂಪೈರ್​ ನಾಟ್​ಔಟ್​ ಎಂದು ತೀರ್ಪು ನೀಡಿದ್ದರು. ಆದರೆ ಮೂರನೇ ಅಂಪೈರ್​ಗೆ ಡಿಆರ್​ಎಸ್ ಮೂಲಕ ಮನವಿ ಸಲ್ಲಿಸಿದ ಆಸೀಸ್​ ಆಟಗಾರರು ಇದರಲ್ಲಿ ಯಶಸ್ಸು ಸಾಧಿಸಿದರು. ಚೆಂಡು ಪಿಚಿಂಗ್​ ಇನ್​ಸೈಡ್​ ಮತ್ತು ವಿಕೆಟ್​ಗೆ ಬಡಿದಿರುವುದು ಸ್ಪಷ್ಟವಾದ ಕಾರಣ ಅಂಪೈರ್​ ಔಟ್​ ನೀಡಿದರು. ಈ ವಿಕೆಟ್​ ಪಡೆಯುತ್ತಿದ್ದಂತೆ ಲಿಯಾನ್​ 500 ವಿಕೆಟ್​ಗಳನ್ನು ಕೂಡ ಪೂರ್ತಿಗೊಳಿಸಿದರು.

ದಾಖಲೆ ಮುರಳೀಧರನ್ ಹೆಸರಿನಲ್ಲಿದೆ

ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ದಾಖಲೆ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು ಸಾರ್ವಕಾಲಿಕ ದಾಖಲೆಯ 800 ವಿಕೆಟ್​ ಪಡೆದಿದ್ದಾರೆ. ದ್ವಿತೀಯ ಸ್ಥಾನ ಆಸೀಸ್​ನ ದಿವಂಗತ ಶೇನ್​ ವಾರ್ನ್​ ಹೆಸರಿನಲ್ಲಿದೆ. ವಾರ್ನ್​ 708 ವಿಕೆಟ್​ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಪ್ರಸ್ತುತ ಇಂಗ್ಲೆಂಡ್​ ಪರ ಆಡುವ ಜೇಮ್ಸ್​ ಆ್ಯಡಂರ್ಸನ್​ ಹೆಸರಿನಲ್ಲಿದೆ. ಅವರು ಸದ್ಯ 690 ವಿಕೆಟ್​ ಉರುಳಿಸಿದ್ದಾರೆ. 619 ವಿಕೆಟ್​ ಪಡೆದ ಭಾರತದ ಅನೀಲ್​ ಕುಂಬ್ಳೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Ind vs SA : ಭಾರತ ವಿರುದ್ಧ ಪಿಂಕ್​ ಡ್ರೆಸ್​ನಲ್ಲಿ ಕಣಕ್ಕೆ ಇಳಿಯಲಿದ್ದಾರೆ ದ. ಆಫ್ರಿಕಾ ಆಟಗಾರರು!

“ನಾನು ದಾಖಲೆಗಾಗಿ ಆಡುವ ಆಟಗಾರನಲ್ಲ. ನನಗೆ ಸಾಧ್ಯವಾದಷ್ಟು ಕಾಲ ಕ್ರಿಕೆಟ್ ಆಡಲು ಬಯಸುತ್ತೇನೆ. “ನಾನು ನಿಜವಾಗಿಯೂ ಆತ್ಮವಿಶ್ವಾಸವನ್ನು ಅನುಭವಿಸುತ್ತಿದ್ದೇನೆ. ಗಾಯದಿಂದ ಚೇತರಿಸಿಕೊಂಡು ಮತ್ತೆ ಕ್ರಿಕೆಟ್​ ಅಂಗಳಕ್ಕೆ ಮರಳಿದ್ದು ಸಂತಸ ತಂದಿದೆ” ಎಂದು ಪಂದ್ಯದ ಬಳಿಕ ಲಿಯಾನ್​ ಹೇಳಿದರು.

ಪಂದ್ಯ ಗೆದ್ದ ಆಸೀಸ್​

ಈ ಪಂದ್ಯವನ್ನು ಆಸ್ಟ್ರೇಲಿಯಾ ಬೃಹತ್​ ಮೊತ್ತದ ಅಂತರದಿಂದ ಗೆದ್ದು ಬೀಗಿತು. 360 ರನ್​ಗಳ ಭರ್ಜರಿ ಅಂತರದಿಂದ ಗೆದ್ದ ಆಸೀಸ್​ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಆಸ್ಟ್ರೇಲಿಯಾ ಪರ ಡೇವಿಡ್​ ವಾರ್ನರ್​ ಅವರು ಮೊದಲ ಇನಿಂಗ್ಸ್​ನಲ್ಲಿ ಶತಕ ಬಾರಿಸಿ ಮಿಂಚಿದ್ದರು. ಆದರೆ ದ್ವಿತೀಯ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು.

Exit mobile version