Site icon Vistara News

Nathan Lyon: ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಬೌಲರ್​ ನಥಾನ್​ ಲಿಯೋನ್

Nathan Lyon

ವೆಲ್ಲಿಂಗ್ಟನ್​: ಆಸ್ಟ್ರೇಲಿಯಾದ ಸ್ಪಿನ್ನರ್​ ನಥಾನ್​ ಲಿಯೋನ್(Nathan Lyon)​ ಅವರು ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್​ನಲ್ಲಿ 41 ರನ್​ ಬಾರಿಸುವ ಮೂಲಕ ಒಂದೇ ಒಂದು ಅರ್ಧಶತಕವನ್ನು ಗಳಿಸದೆ 1,500 ಟೆಸ್ಟ್ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆಸ್ಟ್ರೇಲಿಯಾದ ದ್ವಿತೀಯ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಸ್ಟೀವನ್​ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್​ ಔಟಾದ ನಂತರ ನೈಟ್​ ವಾಚ್​ಮ್ಯಾನ್​ ಆಗಿ ಕ್ರೀಸ್​ಗಿಳಿದ ಲಿಯೋನ್​ 46 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 41 ರನ್ ಮಾಡಿದರು. ಸದ್ಯ ಲಿಯೋನ್​ 128 ಟೆಸ್ಟ್‌ಗಳು ಮತ್ತು 162 ಇನ್ನಿಂಗ್ಸ್‌ಗಳಲ್ಲಿ, 12.72 ರ ಸರಾಸರಿಯಲ್ಲಿ 1,501 ರನ್ ಗಳಿಸಿದ್ದಾರೆ. ಅವರ ವೈಯಕ್ತಿಕ ಉತ್ತಮ ಸ್ಕೋರ್ 47. ಈ ಪಂದ್ಯವನ್ನು ಆಸ್ಟ್ರೇಲಿಯಾ 172 ರನ್​ಗಳ ಅಂತರದಿಂದ ಗೆದ್ದು ಬೀಗಿತು.

ಇದನ್ನೂ ಓದಿ Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

ಬೌಲಿಂಗ್​ನಲ್ಲಿಯೂ ಪರಾಕ್ರಮ ತೋರಿದ ನಥಾನ್​ ಲಿಯೋನ್ 2 ಇನಿಂಗ್ಸ್​ ಸೇರಿ 10 ವಿಕೆಟ್​ ಉಡಾಯಿಸಿದರು. ಗಾಯದ ಸಮಸ್ಯೆಯಿಂದಾಗಿ ಕೆಲವು ವರ್ಷ ಕ್ರಿಕೆಟ್​ನಿಂದ ದೂರ ಉಳಿದಿದ್ದ ಅವರು ಇದೀಗ ಕಮ್​ಬ್ಯಾಕ್ ಮಾಡಿದ ಪಂದ್ಯದಲ್ಲಿ ವಿಕೆಟ್​ಗಳ ದಾಹ ತೀರಿಸುವಂತಿದೆ. ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್​ ಕಿತ್ತ ವೇಳೆ ಸ್ಟ್​ ಇಂಡೀಸ್​ ದಿಗ್ಗಜ ಬೌಲರ್​ ಕೊರ್ಟ್ನಿ ವಾಲ್ಶ್(Courtney Walsh) ಅವರ ಟೆಸ್ಟ್ ವಿಕೆಟ್ ದಾಖಲೆನ್ನು ಮುರಿದು ಅತ್ಯಧಿಕ ಟೆಸ್ಟ್​ ವಿಕೆಟ್ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದ್ದರು. ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ ಮತ್ತೆ 6 ವಿಕೆಟ್​ ಪಡೆಯುವ ಮೂಲಕ ವಿಕೆಟ್​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಟೆಸ್ಟ್​ನಲ್ಲಿ ಅವರು ಸದ್ಯ 527* ವಿಕೆಟ್​ ಕಲೆಹಾಕಿದ್ದಾರೆ. ಇನ್ನು 36 ವಿಕೆಟ್​ ಕಿತ್ತರೆ ತನ್ನದೇ ದೇಶದ ಗ್ಲೆನ್ ಮೆಕ್‌ಗ್ರಾತ್ ಅವರ ಟೆಸ್ಟ್​ ವಿಕೆಟ್​ಗಳ ದಾಖಲೆ ಮುರಿದು ಅತಿ ಹೆಚ್ಚು ಟೆಸ್ಟ್​ ವಿಕೆಟ್​ ಕಿತ್ತ ಸಾಧಕರ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಲಿದ್ದಾರೆ.

​​ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿ

ಆಟಗಾರದೇಶವಿಕೆಟ್​
ಮುತ್ತಯ್ಯ ಮುರಳೀಧರನ್ಶ್ರೀಲಂಕಾ800
ಶೇನ್ ವಾರ್ನ್ ಆಸ್ಟ್ರೇಲಿಯಾ708
ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್​696*
ಅನಿಲ್ ಕುಂಬ್ಳೆಭಾರತ619
ಸ್ಟುವರ್ಟ್ ಬ್ರಾಡ್ಇಂಗ್ಲೆಂಡ್​604
ಗ್ಲೆನ್ ಮೆಕ್‌ಗ್ರಾತ್ಆಸ್ಟ್ರೇಲಿಯಾ563
ನಥಾನ್​ ಲಿಯೊನ್​ಆಸ್ಟ್ರೇಲಿಯಾ527*
ಕರ್ಟ್ನಿ ವಾಲ್ಷ್ ವೆಸ್ಟ್​ ಇಂಡೀಸ್​519
ರವಿಚಂದ್ರನ್ ಅಶ್ವಿನ್ಭಾರತ501*
ಡೇಲ್ ಸ್ಟೈನ್ದಕ್ಷಿಣ ಆಫ್ರಿಕಾ439

Exit mobile version