Site icon Vistara News

Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

nathan lyon

ಸಿಡ್ನಿ: ಗಾಯದ ಸಮಸ್ಯೆಯಿಂದಾಗಿ ಕೆಲವು ವರ್ಷ ಕ್ರಿಕೆಟ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಪಿನ್ನರ್​ ನಥಾನ್​ ಲಿಯೋನ್(Nathan Lyon)​ ಅವರು ವೆಸ್ಟ್​ ಇಂಡೀಸ್​ ದಿಗ್ಗಜ ಬೌಲರ್​ ಕೊರ್ಟ್ನಿ ವಾಲ್ಶ್(Courtney Walsh) ಅವರ ಟೆಸ್ಟ್ ವಿಕೆಟ್ ದಾಖಲೆನ್ನು ಮುರಿದಿದ್ದಾರೆ. ಈ ಮೂಲಕ ಅತ್ಯಧಿಕ ಟೆಸ್ಟ್​ ವಿಕೆಟ್ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ನಾಲ್ಕು ವಿಕೆಟ್ ಕೀಳುವ ಮೂಲಕ ಲಿಯೋನ್ ಈ ಸಾಧನೆ ಮಾಡಿದರು. ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಈ ಸಾಧಕರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಕ್ರಿಕೆಟ್​ ಆಡುತ್ತಿರುವ ಆಟಗಾರರ ಪೈಕಿ ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ದಾಖಲೆ ಕೂಡ ಜೇಮ್ಸ್ ಆಂಡರ್ಸನ್ ಹೆಸರಿನಲ್ಲಿದೆ.

ಕೊರ್ಟ್ನಿ ವಾಲ್ಶ್ ಅವರು 519 ವಿಕೆಟ್​ಗಳ ದಾಖಲೆಯೊಂದಿಗೆ ಇದುವರೆಗೆ 7ನೇ ಸ್ಥಾನದಲ್ಲಿದ್ದರು. ಆದರೆ ಇದೀಗ ನಥಾನ್​ ಲಿಯೋನ್ 521* ವಿಕೆಟ್​ ಪಡೆಯುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 36 ವರ್ಷದ ಲಿಯೋನ್ ಇದುವರೆಗೆ 128 ಟೆಸ್ಟ್ ಆಡಿದ್ದಾರೆ. ಅಚ್ಚರಿ ಎಂದರೆ 32440 ಎಸೆತ ಎಸೆದಿರುವ ಲಿಯಾನ್ 31608 ಎಸೆತಗಳವರೆಗೆ ಒಂದೇ ಒಂದು ನೋ ಬಾಲ್ ಎಸೆಯಲಿಲ್ಲ. 50 ರನ್​ಗೆ 8 ವಿಕೆಟ್​ ಉಡಾಯಿಸಿದ್ದು ಇವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. 23 ಬಾರಿ 5 ವಿಕೆಟ್​ ಗೊಂಚಲು ಪಡೆದಿದ್ದಾರೆ. 4 ಬಾರಿ 10 ವಿಕೆಟ್​ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ Nathan Lyon: ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ನಥಾನ್​ ಲಿಯೋನ್

ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ ಆ್ಯಂಡರ್ಸನ್​ಗೆ ಈ ಮೈಲುಗಲ್ಲು ನಿರ್ಮಿಸಲು ಇನ್ನು ಕೇವಲ 2 ವಿಕೆಟ್​ಗಳ ಅಗತ್ಯವಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ವಿರುದ್ಧದ ಅಂತಿಮ ಟೆಸ್ಟ್​ನಲ್ಲಿ(India vs England 5th Test) ಅವರು ಈ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ. ಭಾರತ ಪ್ರವಾಸದ ವೇಳೆಯೇ ಆ್ಯಂಡರ್ಸನ್ ಅವರು 700 ವಿಕೆಟ್​ ಸಾಧನೆ ಭಾರತದ ನೆಲದಲ್ಲೇ ಮಾಡುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಕಾಲ ಸನ್ನಿಹಿತವಾದಂತಿದೆ.

ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿ

ಆಟಗಾರದೇಶವಿಕೆಟ್​
ಮುತ್ತಯ್ಯ ಮುರಳೀಧರನ್ಶ್ರೀಲಂಕಾ800
ಶೇನ್ ವಾರ್ನ್ ಆಸ್ಟ್ರೇಲಿಯಾ708
ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್​696*
ಅನಿಲ್ ಕುಂಬ್ಳೆಭಾರತ619
ಸ್ಟುವರ್ಟ್ ಬ್ರಾಡ್ಇಂಗ್ಲೆಂಡ್​604
ಗ್ಲೆನ್ ಮೆಕ್‌ಗ್ರಾತ್ಆಸ್ಟ್ರೇಲಿಯಾ563
ನಥಾನ್​ ಲಿಯೊನ್​ಆಸ್ಟ್ರೇಲಿಯಾ521*
ಕರ್ಟ್ನಿ ವಾಲ್ಷ್ ವೆಸ್ಟ್​ ಇಂಡೀಸ್​519
ರವಿಚಂದ್ರನ್ ಅಶ್ವಿನ್ಭಾರತ501*
ಡೇಲ್ ಸ್ಟೈನ್ದಕ್ಷಿಣ ಆಫ್ರಿಕಾ439
Exit mobile version