ಚಂಡಿಗಢ: ರಾಷ್ಟ್ರಮಟ್ಟದ ಯುವ ಬಾಕ್ಸರ್ ಒಬ್ಬರ ಮೃತದೇಹ ಹೊಲದಲ್ಲಿ ಪತ್ತೆಯಾಗಿರುವ ಘಟನೆ ಪಂಜಾಬ್ನಲ್ಲಿ ನಡೆದಿದ್ದು, ಮಿತಿ ಮೀರಿ ಮಾದಕ ವಸ್ತುಗಳನ್ನು ಸೇವನೆ ಮಾಡಿರುವುದೇ ಸಾವಿಗೆ ಕಾರಣ ಎನ್ನಲಾಗಿದೆ.
೨೨ ವರ್ಷದ ಕುಲ್ದೀಪ್ ಸಿಂಗ್ ಮೃತಪಟ್ಟಿರುವ ಬಾಕ್ಸರ್. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಕುಲ್ದೀಪ್ ಸಿಂಗ್ ಗೆದ್ದಿದ್ದರು.
ತಲವಂಡಿ ಸಬೊ ಎಂಬ ಪ್ರದೇಶದ ಹೊಲದಲ್ಲಿ ಕುಲ್ದೀಪ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ಸಮೀಪದಲ್ಲಿ ಸಿರಿಂಜ್ ಕೂಡ ಪತ್ತೆಯಾಗಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಹೆರಾಯಿನ್ ಮಾದರಿಯ ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಲ್ದೀಪ್ ಸಿಂಗ್ ಒಟ್ಟಾರೆ ೫ ರಾಷ್ಟ್ರಮಟ್ಟದ ಪದಕಗಳನ್ನು ಗೆದ್ದಿದ್ದಾರೆ. ಅದರಲ್ಲಿ ಎರಡು ಸ್ವರ್ಣ ಪದಕ.