ಮುಂಬಯಿ : ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿದ್ದ ಯುವ ಬೌಲರ್ ನವದೀಪ್ ಸೈನಿ ಕೂಡ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ನಾಯಕ ರೋಹಿತ್ ಶರ್ಮ ಅವರ ಜತೆ ಇನ್ನೊಬ್ಬರ ಆಟಗಾರ ಟೀಮ್ ಇಂಡಿಯಾವನ್ನು ತೊರೆದಂತಾಗಿದೆ. ಅವರು ತಕ್ಷಣದಲ್ಲೇ ಭಾರತಕ್ಕೆ ವಾಪಸಾಗಲಿದ್ದಾರೆ.
ನವದೀಪ್ ಸೈನಿಗೆ ಹೊಟ್ಟೆಯ ಭಾಗದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಎರಡನೇ ಪಂದ್ಯಕ್ಕೆ ತಂಡದಲ್ಲಿ ಇರುವುದಿಲ್ಲ. ಅವರು ಬೆಂಗಳೂರಿಗೆ ಬಂದು ಎನ್ಸಿಎಯಲ್ಲಿ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ ಎಂಬುದಾಗಿ ಬಿಸಿಸಿಐ ಮೂಲಗಳು ತೀಳಿಸಿವೆ.
ರೋಹಿತ್ ಸುಧಾರಣೆ ಇನ್ನಷ್ಟು ದಿನ ಬೇಕು
ಇದೇ ವೇಳೆ ಬಿಸಿಸಿಐ ರೋಹಿತ್ ಶರ್ಮ ಅವರ ಬೆರಳು ನೋವಿನ ಸಮಸ್ಯೆ ಕುರಿತು ಮಾಹಿತಿ ಪ್ರಕಟಿಸಿದೆ. ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಲು ಇನ್ನಷ್ಟು ದಿನಗಳು ಬೇಕಾಗಬಹುದು ಎಂಬುದಾಗಿ ಬಿಸಿಸಿಐ ಟ್ವೀಟ್ ಮಾಡಿದೆ.
ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ಗೆ ಭಾರತ ತಂಡ
ಕೆ.ಎಲ್ ರಾಹುಲ್ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ಕಿಪರ್), ಕೆಎಸ್ ಭರತ್ (ವಿಕೆಟ್ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಜಯದೇವ್ ಉನಾದ್ಕಟ್.
ಇದನ್ನೂ ಓದಿ | Team India | ನೂತನ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ, ಯಾವುದು ಅದು?