ಬೆಂಗಳೂರು: ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್- ಉಲ್-ಹಕ್ ಐಪಿಎಲ್ 2023 ಋತುವಿನಲ್ಲಿ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆದ ಮತ್ತು ಕೊಹ್ಲಿಯ (Virat kohli) ಅಭಿಮಾನಿಗಳ ಕೋಪಕ್ಕೆ ಕಾರಣವಾದ ‘ಸಿಹಿ ಮಾವಿನಹಣ್ಣು’ ಪೋಸ್ಟ್ ಹಿಂದಿನ ಕಥೆಯನ್ನು ಬಹಿರಂಗಗೊಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ವೀಕ್ಷಿಸುವಾಗ ನವೀನ್ ಹೋಟೆಲ್ ಕೋಣೆಯಿಂದ ಮಾವಿನಹಣ್ಣುಗಳನ್ನು ಆನಂದಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಇದು ಕೊಹ್ಲಿ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಕೊಹ್ಲಿ ಔಟ್ ಆದಾಗ ಅವರನ್ನು ಅಪಹಾಸ್ಯ ಮಾಡಲೆಂದೇ ಅವರು ಈ ಪೋಸ್ಟ್ ಹಾಕಿದ್ದಾರೆ ಎಂದು ಅಂದುಕೊಂಡು ಹಿಗ್ಗಾಮುಗ್ಗಾ ಜಾಡಿಸಿದ್ದರು.
ಪ್ರಾಸಂಗಿಕವಾಗಿ, ಅವರ ಪೋಸ್ಟ್ ಹಾಕಿದ ಸಮಯವು ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ರನ್ಗೆ ವಿಕೆಟ್ ಒಪ್ಪಿಸಿದ ಸಮಯಕ್ಕೆ ಹೊಂದಿಕೆಯಾಯಿತು. ಇದರ ಪರಿಣಾಮವಾಗಿ, ಲಕ್ನೋ ಸೂಪರ್ ಜೈಂಟ್ಸ್ ವೇಗಿ ಆರ್ಸಿಬಿ ಸ್ಟಾರ್ ಬ್ಯಾಟರ್ ಬೇಗನೆ ಔಟ್ ಆಗಿರುವುದನ್ನು ಸಂಭ್ರಮಿಸುತ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ವಿಶೇಷವೆಂದರೆ, ಐಪಿಎಲ್ 2023 ಋತುವಿನ ಆರಂಭದಲ್ಲಿ ನವೀನ್ ಉಲ್ ಹಕ್ ಕೊಹ್ಲಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಅದಕ್ಕೆ ಗೌತಮ್ ಗಂಭೀರ್ ತುಪ್ಪ ಸುರಿದಿದ್ದರು. ಹೀಗಾಗಿ ಅಭಿಮಾಣಿಗಳು ಆ ರೀತಿ ಅಂದುಕೊಂಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
Who said "sweet mangoes"? 🫣😂
— Lucknow Super Giants (@LucknowIPL) December 2, 2023
Full interview on YouTube! 💙#LucknowSuperGiants | #LSG | #DurbansSuperGiants | #DSG | pic.twitter.com/SKGzZv4HQ2
ಕೊಹ್ಲಿಗೆ ಅಲ್ಲ ಎಂದ ನವಿನ್
ಸುಮಾರು ಆರು ತಿಂಗಳ ನಂತರ, ನವೀನ್-ಉಲ್-ಹಕ್ ಈಗ ತಮ್ಮ ಸಿಹಿ ಮಾವಿನಹಣ್ಣಿನ ಪೋಸ್ಟ್ ಕೊಹ್ಲಿಯನ್ನು ಗುರಿಯಾಗಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಮಾವಿನಹಣ್ಣುಗಳು ಬೇಕಾಗಿವೆ ಎಂದು ಎಲ್ಎಸ್ಜಿ ತಂಡದ ಲಾಜಿಸ್ಟಿಕ್ ವಿಭಾಗದ ಧವಳ್ ಅವರಿಗೆ ಹೇಳಿದ್ದೆ.. ಅವರು ರಾತ್ರಿಯೇ ಮಾವಿನಹಣ್ಣುಗಳನ್ನು ತಂದುಕೊಟ್ಟರು. ನಾವು ಗೋವಾಕ್ಕೆ ಹೋದಾಗ ಅವರು ಮಾವಿನಹಣ್ಣುಗಳನ್ನು ತಂದರು. ಆದ್ದರಿಂದ ನಾನು ಟಿವಿ ಮುಂದೆ ಕುಳಿತು ಮಾವಿನಹಣ್ಣುಗಳನ್ನು ತಿನ್ನುತ್ತಿದ್ದೆ. ಆ ಚಿತ್ರವನ್ನು ಇನ್ಸ್ಟಾಗದಲ್ಲಿ ಪೋಸ್ಟ್ ಮಾಡಿದೆ. ಎಲ್ಲರೂ ಅದನ್ನು ವಿಭಿನ್ನ ರೀತಿಯಲ್ಲಿ ತೆಗೆದುಕೊಂಡರು. ಆದ್ದರಿಂದ ನಾನು ಸಹ ಏನನ್ನೂ ಹೇಳಲಿಲ್ಲ ಎಂದು ನವೀನ್ ಎಲ್ಎಸ್ಜಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : Virat kohli : ಕೊಹ್ಲಿ ಟಿ20 ವಿಶ್ವ ಕಪ್ನಲ್ಲಿ ಪಾಲ್ಗೊಳ್ಳುವ ಕುರಿತು ಹೊಸ ಅಪ್ಡೇಟ್ ನೀಡಿದ ಬಿಸಿಸಿಐ
ಇತ್ತೀಚೆಗೆ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ ನವೀನ್ ಮತ್ತು ಕೊಹ್ಲಿ ತಮ್ಮ ನಡುವಿನ ಜಗಳವನ್ನು ಕೊನೆಗೊಳಿಸಿದ್ದರು. ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದ ಸಮಯದಲ್ಲಿ, ಇಬ್ಬರೂ ಆಟಗಾರರು ಆಟದ ನಡುವೆ ಕೈಕುಲುಕಿ ಅಪ್ಪಿಕೊಂಡಿದ್ದರು. , ಇದು ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿತ್ತು.
ಎಲ್ಎಸ್ಜಿಯಲ್ಲೇ ಉಳಿದ ನವಿನ್
ವೇಗದ ಬೌಲರ್ ನವಿನ್ ಉಲ್ ಹಕ್ ಅವರನ್ನು ಲಕ್ನೊ ಸೂಪರ್ ಜೈಂಟ್ಸ್ ತಂಡ ಮುಂದಿನ ಆವೃತ್ತಿಗೂ ತಮ್ಮಲ್ಲೇ ಉಳಿಸಿಕೊಂಡಿದೆ. ಆಟಗಾರರ ಬಿಡುಗಡೆ ಮಾಡುವ ಪಟ್ಟಿ ಪ್ರಕಟವಾದಾಗ ನವಿನ್ ತಂಡದಲ್ಲೇ ಉಳಿದುಕೊಂಡಿರುವುದು ಸಾಬೀತಾಯಿತು. ಮಧ್ಯಮ ವೇಗದ ಬೌಲರ್ ತಂಡದ ಪರ ಆಡುವ ಎಲ್ಲ ಅವಕಾಶಗಳನ್ನು ಹೊಂದಿದ್ದಾರೆ. ಎಕನಾಮಿಕಲ್ ಬೌಲಿಂಗ್ ಮೂಲಕ ತಂಡದ ಗೆಲುವಿನಲ್ಲಿ ಅವರು ತಮ್ಮ ಕೊಡುಗೆಗಳನ್ನು ನೀಡಿದ್ದರು. ಹೀಗಾಗಿ ಅವರ ಕೊಡುಗೆಯನ್ನು ಮುಂದುವರಿಸಲು ಫ್ರಾಂಚೈಸಿ ಬಯಸಿದೆ.