ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 2023ರ ಪ್ರಶಸ್ತಿ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಜೂನ್ 7ರಿಂದ ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ಈ ಪಂದ್ಯ ನಡೆಯಲಿದೆ. ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ ಬಳಗ ಈ ಕ್ರೀಡಾಂಗಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಮತ್ತು ಬಹು ನಿರೀಕ್ಷಿತ ಟ್ರೋಫಿ ಗೆಲ್ಲಲು ಬಯಸಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಪಾಲಿಗೆ ಇದು ತಟಸ್ಥ ತಾಣ. ಎರಡೂ ತಂಡಗಳಿಗೆ ಇಲ್ಲಿನ ಪಿಚ್ನ ವರ್ತನೆ ಬಗ್ಗೆ ಹೆಚ್ಚಿನ ಅರಿವಿಲ್ಲ. ಆಯಾ ತಂಡಗಳ ಪ್ರವಾಸದ ಅವಧಿಯಲ್ಲಿ ಆತಿಥೇಯ ತಂಡಗಳ ಜತೆ ಆಡಿರುವ ಕಾರಣ ಬದಲಾದ ಪರಿಸ್ಥಿತಿಯೊಂದಿಗೆ ಇಲ್ಲಿ ಸೆಣಸಾಡಬೇಕಾಗಿದೆ. ಹಾಗಾದರೆ ಈ ಪಿಚ್ನಲ್ಲಿ ಭಾರತ ತಂಡದ ಗೆಲುವಿಗೆ ಎಷ್ಟು ಅನುಕೂಲಗಳು ಇವೆ ಎಂಬುದನ್ನು ನೋಡೋಣ.
Hello 👋 from the Oval.#WTC23 #TeamIndia pic.twitter.com/FsDL6tm2aI
— BCCI (@BCCI) June 4, 2023
ಓವಲ್ನಲ್ಲಿ ಈ ಹಿಂದೆ ಆಡಿರುವ ತನ್ನ ಕೊನೆಯ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತ 157 ರನ್ಗಳ ಭರ್ಜರಿ ಗೆಲುವು ದಾಖಲಿಸಿತ್ತಯ. ಈ ತಾಣದಲ್ಲಿ ಟೀಮ್ ಇಂಡಿಯಾದ ಒಟ್ಟಾರೆ ದಾಖಲೆಯ ಬಗ್ಗೆ ಹೇಳುವುದಾದರೆ, ಒಟ್ಟು 14 ಟೆಸ್ಟ್ ಪಂದ್ಯಗಳಲ್ಲಿ ಕೇವಲ ಎರಡೇ ಎರಡು ವಿಜಯ ಸಾಧಿಸಿದೆ. 1936ರಿಂದ ಹಿಡಿದು ಹಿಂದಿನ ಬಾರಿಗೆ ಜಯ ಸಾಧಿಸುವ ತನಕ 5 ಸೋಲುಗಳನ್ನು ಅನುಭವಿಸಿತ್ತು. 7 ಟೆಸ್ಟ್ ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದೆ.
ಇದನ್ನೂ ಓದಿ : WTC Final 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯವೇ ಸರಿಯಿಲ್ಲ ಎಂದ ಡೇವಿಡ್ ವಾರ್ನರ್!
ಓವರ್ನಲ್ಲಿ ಭಾರತ ತಂಡದ ಸಾಧನೆಗಳ ಅಂಕಿ ಅಂಶ ಇಲ್ಲಿದೆ
- ಒಟ್ಟು ಆಡಿರುವ ಪಂದ್ಯಗಳು: 14
- ಭಾರತ ಗೆದ್ದದ್ದು: 2
- ಭಾರತಕ್ಕೆ ಸೋಲು- 5
- ಡ್ರಾಆಗಿರುವ ಪಂದ್ಯಗಳು : 7
- ಮೊದಲು ಬ್ಯಾಟ್ ಮಾಡಿದಾಗ ಭಾರತಕ್ಕೆ ಗೆಲುವು : 1
- 2ನೇ ಬ್ಯಾಟಿಂಗ್ನಲ್ಲಿ ಭಾರತಕ್ಕೆ ಜಯ : 1
- ಭಾರತ ತಂಡದ ಗರಿಷ್ಠ ಮೊತ್ತ: 2007ರಲ್ಲಿ ಇಂಗ್ಲೆಂಡ್ ವಿರುದ್ಧ 664 ಆಲ್ ಔಟ್ (ಮೊದಲ ಇನ್ನಿಂಗ್ಸ್)
- ಟೀಮ್ ಇಂಡಿಯಾದ ಕನಿಷ್ಠ ಮೊತ್ತ: 2014ರಲ್ಲಿ ಇಂಗ್ಲೆಂಡ್ ವಿರುದ್ಧ 94 ಆಲ್ ಔಟ್ (3ನೇ ಇನ್ನಿಂಗ್ಸ್)
- ಅತಿ ಹೆಚ್ಚು ರನ್ ಬಾರಿಸಿದವರು: ರಾಹುಲ್ ದ್ರಾವಿಡ್ – 5 ಇನಿಂಗ್ಸ್ಗಳಲ್ಲಿ 443 ರನ್
- ಗರಿಷ್ಠ ವೈಯಕ್ತಿಕ ಸ್ಕೋರ್: ಸುನಿಲ್ ಗವಾಸ್ಕರ್ – 1979ರಲ್ಲಿ ಇಂಗ್ಲೆಂಡ್ ವಿರುದ್ಧ 443 ಎಸೆತಗಳಲ್ಲಿ 221 ರನ್
- ಅತಿ ಹೆಚ್ಚು ಅರ್ಧಶತಕಗಳು: ಜಿ ಆರ್ ವಿಶ್ವನಾಥ್ ಮತ್ತು ಸಚಿನ್ ತೆಂಡೂಲ್ಕರ್- ತಲಾ 3 ಅರ್ಧಶತಕಗಳು
- ಅತಿ ಹೆಚ್ಚು ಶತಕ: ರಾಹುಲ್ ದ್ರಾವಿಡ್ ಅವರಿಂದ 2 ಶತಕ
- ಅತಿ ಹೆಚ್ಚು ದ್ವಿಶತಕ: ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್- ತಲಾ 1 ದ್ವಿಶತಕ
- ಅತಿ ಹೆಚ್ಚು ವಿಕೆಟ್ ಪಡೆದವರು: ರವೀಂದ್ರ ಜಡೇಜಾ – 4 ಇನ್ನಿಂಗ್ಸ್ಗಳಲ್ಲಿ 11 ವಿಕೆಟ್