ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ನಾಲ್ಕು ಪಂದ್ಯಗಳ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್(Border-Gavaskar) ಟ್ರೋಫಿ ಟೆಸ್ಟ್ ಸರಣಿ ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಮುನ್ನ ಆಸೀಸ್ ಮಾಜಿ ಕ್ರಿಕೆಟ್ ದಿಗ್ಗಜ ಇಯಾನ್ ಚಾಪೆಲ್(IAN CHAPPELL) ಅವರು ಭಾರತ ತಂಡಕ್ಕೆ ರಿಷಭ್ ಪಂತ್(RISHABH PANT) ಅವರ ಕೊರಗು ಕಾಡಲಿದೆ ಎಂದು ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಆಯೋಜಿಸಿದ್ದ ವರ್ಚುವಲ್ ಸಂದರ್ಶನದಲ್ಲಿ ಮಾತನಾಡಿದ ಆಸೀಸ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್, ಈ ಹಿಂದೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗಳಲ್ಲಿ ಪಂತ್ ಅವರ ಆಟ ಅಮೋಘವಾಗಿತ್ತು. ಅವರು ಈ ಸರಣಿಯಲ್ಲಿ ಇದ್ದಿದ್ದರೆ ಆಸ್ಟ್ರೇಲಿಯಾ ಆಟಗಾರರಿಗೆ ನಿದ್ದೆಯೇ ಬರುತ್ತಿರಲಿಲ್ಲ. ಏಕೆಂದರೆ, ರಿಷಭ್ ಪಂತ್ ಒಮ್ಮೆ ಕ್ರೀಸ್‌ನಲ್ಲಿ ಹೊಂದಿಕೊಂಡರೆ ಅವರನ್ನು ನಿಯಂತ್ರಿಸುವುದು ಕಷ್ಟ ಎಂದು ಹೇಳಿದರು.
ಇದನ್ನೂ ಓದಿ IND vs AUS : ಶ್ರೀಲಂಕಾದ ಮಾಜಿ ಕ್ರಿಕೆಟಿಗ ಜಯವರ್ಧನೆ ಪ್ರಕಾರ ಟೆಸ್ಟ್ ಸರಣಿಯ ಟ್ರೋಫಿ ಗೆಲ್ಲುವವರು ಯಾರು?
ಭಾರತ ತಂಡವೇ ಫೇವರಿಟ್
ಕಾರು ಅಘಘಾತದಲ್ಲಿ ಗಾಯಕೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್ ಶೀಘ್ರ ಗುಣಮುಖರಾಗಿ ಮತ್ತೆ ಕ್ರಿಕೆಟ್ಆಡುವಂತಾಗಲಿ. ಅವರ ಆಟವನ್ನು ಕ್ರಿಕೆಟ್ ಜಗತ್ತು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅವರ ಅನುಪಸ್ಥಿತಿ ಇದ್ದರೂ ಭಾರತ ತಂಡವೇ ಫೇವರಿಟ್ ಆಗಿದೆ. ಏಕೆಂದರೆ ಸ್ಪಿನ್ ಪಿಚ್ಗಳಲ್ಲಿ ಆಸೀಸ್ ಆಟಗಾರರು ಈ ಹಿಂದಿನಿಂದಲೂ ಉತ್ತಮ ದಾಖಲೆ ಹೊಂದಿಲ್ಲ ಎಂದು ಚಾಪೆಲ್ ತಿಳಿಸಿದರು.