ಮುಂಬಯಿ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಬುಧವಾರ ನಡೆದ ವಿಶ್ವಕಪ್ನ ಸೆಮಿಫೈನಲ್ ಪಂದ್ಯ ಡಿಜಿಟಲ್ ಲೋಕದಲ್ಲಿ ದಾಖಲೆಯೊಂದನ್ನು ಬರೆದಿದೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ(Disney+ Hotstar) ಈ ಪಂದ್ಯವನ್ನು ಏಕಕಾಲಕ್ಕೆ 5.5 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ಬ್ಯಾಟಿಂಗ್ ಸರದಿಯ ಮಧ್ಯಮ ಹಂತದಲ್ಲಿ ಈ ದಾಖಲೆ ನಿರ್ಮಾಣವಾಯಿತು. ಇದಕ್ಕೂ ಮುನ್ನ ಭಾರತದ ಅಂತಿಮ ಹಂತದ ಬ್ಯಾಟಿಂಗ್ ಅವಧಿಯಲ್ಲಿ 5.1 ಮಂದಿ ವೀಕ್ಷಿಸಿದ್ದು ದಾಖಲೆ ಎನಿಸಿತ್ತು. ಬಳಿಕ ಪಂದ್ಯ ರೋಚಕವಾಗಿ ಸಾಗಿದ ಪರಿಣಾಮ ವೀಕ್ಷಕರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಾ ಸಾಗಿತು.
ಅಕ್ಟೋಬರ್ 14ರಂದು ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಏಕಕಾಲಕ್ಕೆ 3.5 ಕೋಟಿ ಮಂದಿ ವೀಕ್ಷಿಸಿದ್ದರು. ಆದರೆ ಆ ಬಳಿಕ ನಡೆದ ನ್ಯೂಜಿಲ್ಯಾಂಡ್ ನಡುವಣ ಲೀಗ್ ಪಂದ್ಯ 4.3ಕೋಟಿ ವೀಕ್ಷಿಸಿ ದಾಖಲೆ ನಿಮಾರ್ಣವಾಗಿತ್ತು. ಆದರೆ ಇದೀಗ ಈ ದಾಖಲೆಯೂ ಪತನಗೊಂಡಿದೆ. ಫೈನಲ್ ಪಂದ್ಯದ ವೀಕ್ಷಣೆ ಇನ್ನೂ ಹೆಚ್ಚು ಕೋಟಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ.
ಇದನ್ನೂ ಓದಿ IND vs NZ: ಸೋತರೂ ಭಾರತ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ವಿಲಿಯಮ್ಸನ್
ಪಂದ್ಯ ಗೆದ್ದ ಭಾರತ
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 397 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ 48.5 ಓವರ್ಗಳ ಮುಕ್ತಾಯಗೊಂಡಾಗ 327 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಅಂದ ಹಾಗೆ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಯಾವುದೇ ತಂಡಕ್ಕೆ 50 ಓವರ್ಗಳನ್ನು ಪೂರ್ತಿಯಾಗಿ ಆಡಲು ಬಿಡಲಿಲ್ಲ. ಇದು ಕೂಡ ಭಾರತ ತಂಡದ ಪಾಲಿಗೆ ದಾಖಲೆಯಾಗಿದೆ.
ಇದನ್ನೂ ಓದಿ Virat Kohli : ಸಚಿನ್ ದಾಖಲೆ ಮುರಿದ ಬಳಿಕ ವಿರಾಟ್ ಕೊಹ್ಲಿ ತಲೆಬಾಗಿ ನಮಿಸಿದ್ದು ಯಾರಿಗೆ?
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ನ್ಯೂಜಿಲ್ಯಾಂಡ್ ತಂಡಕ್ಕೆ ನಿಜವಾಗಿಯೂ ಕಾಡಿದ್ದು ಮೊಹಮ್ಮದ್ ಶಮಿ. 9.5 ಓವರ್ಗಳನ್ನು ಎಸೆದ ಶಮಿ 57 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ನ್ಯೂಜಿಲ್ಯಾಂಡ್ ಪರ ಡ್ಯಾರಿಲ್ ಮಿಚೆಲ್ 134 ರನ್ ಬಾರಿಸಿ ಮಿಂಚಿದರು. ಕೇನ್ ವಿಲಿಯಮ್ಸನ್ 69 ರನ್ ಬಾರಿಸಿದರು. ಇವರಿಬ್ಬರೂ 181 ರನ್ಗಳ ಜತೆಯಾಟವಾಡಿದರು. ಈ ವೇಳೆ ಭಾರತಕ್ಕೆ ಆತಂಕ ಎದುರಾಯಿತು. ಆದರೆ, ಶಮಿ ಅವರಿಬ್ಬರನ್ನೂ ಔಟ್ ಮಾಡುವ ಮೂಲಕ ಭಾರತಕ್ಕೆ ನೆಮ್ಮದಿ ತಂದರು. ನ್ಯೂಜಿಲ್ಯಾಂಡ್ ತಂಡದ ಗ್ಲೆನ್ ಫಿಲಿಫ್ಸ್ 41 ರನ್ ಬಾರಿಸಿದರು. ಉಳಿದವರಿಗೆ ದೊಡ್ಡ ಮೊತ್ತಕ್ಕೆ ಸವಾಲಾಗಲು ಸಾಧ್ಯವಾಗಲಿಲ್ಲ.
ದಾಖಲೆ ಬರೆದ ಶಮಿ
ಈ ಪಂದ್ಯದಲ್ಲಿ 7 ವಿಕೆಟ್ ಪಡೆದ ಮೊಹಮ್ಮದ್ ಶಮಿ ಅವರು ಹಲವು ದಾಖಲೆ ಬರೆದರು. 9.5 ಓವರ್ ಎಸೆದ ಶಮಿ 57 ರನ್ ನೀಡಿ 7 ವಿಕೆಟ್ ಉಡಾಯಿಸಿದರು.
ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಎಸೆತದಲ್ಲಿ 50 ವಿಕೆಟ್ ಸಾಧನೆ
ಮೊಹಮ್ಮದ್ ಶಮಿ: 795 ಎಸೆತ
ಮಿಚೆಲ್ ಸ್ಟಾರ್ಕ್ : 941 ಎಸೆತ
ಲಸಿತ್ ಮಲಿಂಗ: 1187 ಎಸೆತ
ಗ್ಲೆನ್ ಮೆಗ್ರಾಥ್ : 1540 ಎಸೆತ
ಟ್ರೆಂಟ್ ಬೋಲ್ಟ್ : 1543 ಎಸೆತ