Site icon Vistara News

Neeraj Chopra | ಪದಕದ ಬೇಟೆಗೆ ಭರ್ಜಿ ಹಿಡಿದು ಸಜ್ಜಾದ ನೀರಜ್‌ ಚೋಪ್ರಾ

Neeraj Chopra

ಹೊಸದಿಲ್ಲಿ : ಗಾಯದ ಸಮಸ್ಯೆಯಿಂದಾಗಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಇದೀಗ ಸಂಪೂರ್ಣ ಫಿಟ್‌ ಅಗಿದ್ದಾರೆ. ಮಂಗಳವಾರ ತಾವು ಫಿಟ್‌ ಆಗಿರುವ ಸುದ್ದಿಯನ್ನು ಪ್ರಕಟಿಸಿದ್ದು, ಶುಕ್ರವಾರ ಆರಂಭವಾಗುವ ಲೂಸಾನ್‌ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಟ್ವಿಟರ್‌ ಮೂಲಕ ಮಾಹಿತಿ ಪ್ರಕಟಿಸಿರುವ ಭಾರತದ ಚಿನ್ನದ ಹುಡುಗ ನೀರಜ್‌, ನಾನು ಸಂಪೂರ್ಣ ಫಿಟ್‌ ಆಗಿದ್ದು ಮುಂದಿನ ಸ್ಪರ್ಧೆಗೆ ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಅಮೆರಿಕದ ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದ ನೀರಜ್‌, ಆ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದರು ಹೀಗಾಗಿ ಜುಲೈನಲ್ಲಿ ನಡೆದ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಿರಲಿಲ್ಲ. ಅದಕ್ಕಿಂತ ಹಿಂದೆ ಅವರು ಸ್ಟಾಕ್‌ಹೋಮ್‌ ಡೈಮೆಂಡ್‌ ಲೀಗ್‌ನಲ್ಲಿ ರಜತ ಪದಕ ಗೆದ್ದುಕೊಂಡಿದ್ದರು.

ಇದನ್ನೂ ಓದಿ | World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ

Exit mobile version