ಮುಂಬಯಿ: ಹಂಗೇರಿಯ ಬುಡಾಪೆಸ್ಟ್ನಲ್ಲಿ(Budapest) ಶನಿವಾರದಿಂದ ಆರಂಭಗೊಳ್ಳಲಿರುವ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ(World Athletics Championships) 90 ಮೀ. ದೂರ ಜಾವೆಲಿನ್ ಎಸೆಯುವುದು ನನ್ನ ಪ್ರಮುಖ ಗುರಿ ಎಂದು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Olympic champion Neeraj Chopra) ಹೇಳಿದ್ದಾರೆ. ಆಗಸ್ಟ್ 19ರಿಂದ 27ರ ತನಕ ನಡೆಯುವ ಈ ಟೂರ್ನಿ ಭಾರತದ 28 ಸದಸ್ಯರ ತಂಡಕ್ಕೆ ನೀರಜ್ ಚೋಪ್ರಾ(Olympic champion Neeraj Chopra) ಸಾರಥ್ಯ ವಹಿಸಿಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದ ಗೆದ್ದ ನೀರಜ್ ಆ ಬಳಿಕ ಹಲವು ಟೂರ್ನಿಗಳಲ್ಲಿ ಶ್ರೇಷ್ಠ ಸಾಧನೆ ತೋರಿದ್ದರು. ಡೈಮಂಡ್ ಲೀಗ್ ಚಾಂಪಿಯನ್ ಆಗಿರುವ ಅವರ ಮೇಲೆ ಬುಡಾಪೆಸ್ಟ್ ಕೂಟದಲ್ಲೂ ಚಿನ್ನದ ಪದಕ ನಿರೀಕ್ಷೆಯೊಂದನ್ನು ಮಾಡಲಾಗಿದೆ. 2022ರ ಯೂಜೀನ್ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಬೆಳ್ಳಿ ಜಯಿಸಿದ್ದರು. ಈ ಬಾರಿ ಚಿನ್ನಕ್ಕೆ ಗುರಿ ಇಡುವುದು ಮಾತ್ರವಲ್ಲದೆ ತನ್ನ ಎಸೆತವನ್ನು 90 ಮೀ. ದಾಟಿಸುವ ವಿಶ್ವಾಸದಲ್ಲಿದ್ದಾರೆ.
ಲಾಸನ್ನಲ್ಲಿ ಕಳೆದ ವರ್ಷ ನಡೆದ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ 89.04 ದೂರ ಜಾವೆಲಿನ್ ಎಸೆದಿದ್ದರು. ಇದು ಅವರ ಇದುವರೆಗೆ ಅತ್ಯುತ್ತಮ ಸಾಧನೆಯಾಗಿದೆ. ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ಗೆ ಸಿದ್ಧತೆ ಮಾಡಿಕೊಳ್ಳುವುದು ಅವರ ಯೋಜನೆಯಾಗಿದೆ.
ಗಾಯದಿಂದ ಚೇತರಿಕೆ
ನೀರಜ್ ಚೋಪ್ರಾ ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಮೇ 29ರಂದು ನೆದರ್ಲೆಂರ್ಡ್ಸ್ನಲ್ಲಿ ನಡೆದಿದ್ದ ಎಫ್ಬಿಕೆ ಗೇಮ್ಸ್ ಮತ್ತು ಜೂನ್ 13ರಂದು ಫಿನ್ಲೆಂಡ್ನಲ್ಲಿ ನಡೆದ ಪಾವೋ ನುರ್ಮಿ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ ಜುಲೈನಲ್ಲಿ ನಡೆದ ಲೌಸನ್ನೆ ಚರಣರದ ಡೈಮಂಡ್ ಲೀಗ್‌ನಲ್ಲಿ(Lausanne Diamond League) ಚಿನ್ನ ಗೆದ್ದಿದ್ದರು.
ಇದನ್ನೂ ಓದಿ Neeraj Chopra : ಚಿನ್ನದ ಹುಡುಗ ನೀರಜ್ಗೆ ಗಾಯದ ಬಾಧೆ, ಏನಾಯಿತು ಅವರಿಗೆ?
ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಭಾರತ ತಂಡ
ಪುರುಷರ ತಂಡ
ಕೃಷ್ಣ ಕುಮಾರ್ (800 ಮೀ.), ಅಜಯ್ ಕುಮಾರ್ ಸರೋಜ್ (1,500 ಮೀ.), ಸಂತೋಷ್ ಕುಮಾರ್ ತಮಿಳರಸನ್ (400 ಮೀ. ಹರ್ಡಲ್ಸ್), ಅವಿನಾಶ್ ಮುಕುಂದ್ ಸಬ್ಲೆ (3,000 ಮೀ. ಸ್ಟೀಪಲ್‌ಚೇಸ್), ಸರ್ವೇಶ್ ಅನಿಲ್ ಕುಶಾರೆ (ಹೈಜಂಪ್), ಜೆಸ್ವಿನ್ ಅಲ್ಡಿನ್, ಮುರಳಿ ಶ್ರೀಶಂಕರ್ (ಲಾಂಗ್‌ಜಂಪ್), ಪ್ರವೀಣ್ ಚಿತ್ರವೇಲ್ (ಟ್ರಿಪಲ್ ಜಂಪ್), ಅಬ್ದುಲ್ಲ ಅಬೂಬಕರ್ (ಟ್ರಿಪಲ್ ಜಂಪ್), ಎಲೊಸ್ ಪೌಲ್ (ಟ್ರಿಪಲ್ ಜಂಪ್), ನೀರಜ್ ಚೋಪ್ರಾ, ಡಿ.ಪಿ. ಮನು, ಕಿಶೋರ್ ಕುಮಾರ್ ಜೀನ (ಜಾವೆಲಿನ್ ತ್ರೊ), ಆಕಾಶ್‌ದೀಪ್ ಸಿಂಗ್, ವಿಕಾಸ್ ಸಿಂಗ್, ಪರಮ್‌ಜೀತ್ ಸಿಂಗ್ (20 ಕಿ.ಮೀ. ರೇಸ್ ವಾಕ್), ರಾಮ್‌ಬಾಬು (35 ಕಿ.ಮೀ. ರೇಸ್‌ವಾಕ್), ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್, ಮುಹಮ್ಮದ್ ಅನಾಸ್, ರಾಜೇಶ್ ರಮೇಶ್, ಅನಿಲ್ ರಾಜಲಿಂಗಂ, ಮಿಜೊ ಚಾಕೊ ಕುರಿಯನ್ (4×400 ಮೀ. ರಿಲೇ).
ಮಹಿಳಾ ತಂಡ
ಜ್ಯೋತಿ ಯರ್ರಾಜಿ (100 ಮೀ. ಹರ್ಡಲ್ಸ್), ಪಾರುಲ್ ಚೌಧರಿ (3,000 ಮೀ. ಸ್ಟೀಪಲ್‌ಚೇಸ್), ಶೈಲಿ ಸಿಂಗ್ (ಲಾಂಗ್‌ಜಂಪ್), ಅನ್ನು ರಾಣಿ (ಜಾವೆಲಿನ್ ತ್ರೊ), ಭಾವನಾ ಜಾಟ್ (20 ಕಿ.ಮೀ. ರೇಸ್‌ವಾಕ್).