ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ (Paris Olympics 2024) ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅಂತಿಮ ಸ್ಪರ್ಧೆಯಲ್ಲಿ ಏಷ್ಯಾದ ಇಬ್ಬರು ಜಾವೆಲಿನ್ ಎಸೆತಗಾರರು ಪರಸ್ಪರ ಮುಖಾಮುಖಿಯಾಗಲಿದ್ದಾರೆ. ನೀರಜ್ ಚೋಪ್ರಾ (Neeraj Chopra) ಈ ಸ್ಪರ್ಧೆಯಲ್ಲಿ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಆಗಿ ಟ್ರ್ಯಾಕ್ ಗೆ ಬರಲಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಅರ್ಷದ್ ನದೀಮ್ ತಮ್ಮ ದೇಶಕ್ಕಾಗಿ 1992ರ ಬಳಿಕ ಒಲಿಂಪಿಕ್ ಮೊದಲ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಪಾಕಿಸ್ತಾನ ತಂಡದ ಸ್ಟಾರ್ ಕ್ರಿಕೆಟಿಗರನ್ನು ಒಳಗೊಂಡ ವಿಶೇಷ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಅರ್ಷದ್ಗೆ ಶುಭ ಹಾರೈಸಿದೆ. ಅದರಲ್ಲಿ ಅವರು ಈ ಬಾರಿ ನಾವೇ ಚಿನ್ನ ಗೆಲ್ಲೋದು ಎಂದು ಹೇಳಿದ್ದಾರೆ.
Supporting our star Arshad Nadeem 🌟
— Pakistan Cricket (@TheRealPCB) August 8, 2024
Pakistan team wishes Arshad all the best ahead of the Men’s Javelin Throw final at the Paris Olympics tonight 👏 pic.twitter.com/qOqvewkRkp
“ಮೊದಲನೆಯದಾಗಿ, ಅರ್ಷದ್ ನದೀಮ್, ಫೈನಲ್ಗೆ ಅರ್ಹತೆ ಪಡೆದಿರುವುದಕ್ಕೆ ಅಭಿನಂದನೆಗಳು” ಎಂದು ಪಾಕಿಸ್ತಾನದ ಟೆಸ್ಟ್ ನಾಯಕ ಶಾನ್ ಮಸೂದ್ ಹೇಳಿದ್ದಾರೆ. “ನಮ್ಮ ಶುಭ ಹಾರೈಕೆಗಳು ಮತ್ತು ಪ್ರಾರ್ಥನೆಗಳು ನಿಮ್ಮೊಂದಿಗಿವೆ. ನೀವು ಪಾಕಿಸ್ತಾನಕ್ಕಾಗಿ ಪದಕ ಗೆಲ್ಲುತ್ತೀರಿ ಎಂದು ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಮತ್ತು ಆಶಿಸುತ್ತೇವೆ. ಪಾಕಿಸ್ತಾನಕ್ಕಾಗಿ ನೀವು ಏನು ಮಾಡಿದ್ದೀರಿ ಮತ್ತು ಸಾಧಿಸಿದ್ದೀರಿ ಎಂಬುದನ್ನು ಪದಗಳಲ್ಲಿ ವಿವರಿಸಲಾಗದು ನೀವು ರೋಲ್ ಮಾಡೆಲ್ ಮತ್ತು ಆಗಸ್ಟ್ 8 ರಂದು ನೀವು ವೇದಿಕೆಯಲ್ಲಿರುತ್ತೀರಿ ಎಂದು ನಾವು ಭಾವಿಸುತ್ತೇವೆ. ಆಲ್ ದಿ ಬೆಸ್ಟ್, ಸಹೋದರ, ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Gautam Gambhir: 27 ವರ್ಷದ ಬಳಿಕ ಲಂಕಾ ವಿರುದ್ಧ ಸೋಲು; ಗಂಭೀರ್ ಫುಲ್ ಟ್ರೋಲ್
ಬಾಬರ್ ಅಜಮ್, ನಸೀಮ್ ಶಾ, ಸರ್ಫರಾಜ್ ಅಹ್ಮದ್, ಶಾಹೀನ್ ಶಾ ಅಫ್ರಿದಿ ಮತ್ತು ಉಮರ್ ಗುಲ್ ಸೇರಿದಂತೆ ನದೀಮ್ ಉತ್ತಮ ಪ್ರದರ್ಶನ ನೀಡಿ ಪದಕ ತರಲಿ ಎಂದು ಇತರ ಹಾಲಿ ಮತ್ತು ಮಾಜಿ ಆಟಗಾರರು ಹಾರೈಸಿದ್ದಾರೆ.
ಅರ್ಷದ್ ನದೀಮ್ ವಿರುದ್ಧ ನೀರಜ್ ಚೋಪ್ರಾ
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಪಾಕಿಸ್ತಾನದ ಏಕೈಕ ಭರವಸೆ ಅರ್ಷದ್ ನದೀಮ್. ಬುಡಾಪೆಸ್ಟ್ನಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ನೀರಜ್ ಚಿನ್ನದ ಪದಕ ಗೆದ್ದಾಗ ನದೀಮ್ ಬೆಳ್ಳಿ ಗೆದ್ದಿದ್ದರು. ಅವರು ತಮ್ಮ ಮೊದಲ ಪ್ರಯತ್ನದಲ್ಲೇ 86.59 ಮೀಟರ್ ಎಸೆದು 84 ಮೀಟರ್ ನೇರ ಅರ್ಹತಾ ಅಂಕವನ್ನು ದಾಟಿದ್ದಾರೆ. ಟೋಕಿಯೊ ಒಲಿಂಪಿಕ್ಸ್ 2020 ಚಿನ್ನದ ಪದಕ ವಿಜೇತ ನೀರಜ್ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ಎಸೆಯುವ ಮೂಲಕ 32 ಎಸೆತಗಾರರನ್ನು ಒಳಗೊಂಡ ಎರಡೂ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಪುರುಷರ ಜಾವೆಲಿನ್ ಥ್ರೋ ಫೈನಲ್ ಆಗಸ್ಟ್ 8 ರಂದು ಪ್ಯಾರಿಸ್ನ ಸ್ಟೇಡ್ ಡಿ ಫ್ರಾನ್ಸ್ನಲ್ಲಿ ನಡೆಯಲಿದೆ. ಟೋಕಿಯೊ 2020 ರಲ್ಲಿ ನೀರಜ್ 87.58 ಮೀಟರ್ ಎಸೆಯುವ ಮೂಲಕ ಒಲಿಂಪಿಕ್ ಚಾಂಪಿಯನ್ ಆಗಿ ಕಿರೀಟ ಧರಿಸಿದರು. 27ರ ಹರೆಯದ ಅರ್ಷದ್ ನದೀಮ್ 84.62 ಮೀಟರ್ ಎಸೆದು ಐದನೇ ಸ್ಥಾನ ಪಡೆದಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಯಾವುದೇ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯ ಫೈನಲ್ಗೆ ಅರ್ಹತೆ ಪಡೆದ ಮೊದಲ ಪಾಕಿಸ್ತಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.