Site icon Vistara News

ಇಂದು ಡೈಮಂಡ್​ ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ ನೀರಜ್​ ಚೋಪ್ರಾ,ಶ್ರೀಶಂಕರ್‌

Neeraj Chopra and Murali Sreeshankar in Lausanne

ನವದೆಹಲಿ: ಒಂದು ತಿಂಗಳ ವಿಶ್ರಾಂತಿ ಬಳಿಕ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಲೌಸನ್ನೆ ಚರಣರದ ಡೈಮಂಡ್​ ಲೀಗ್​ನಲ್ಲಿ(Lausanne Diamond League) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇವರ ಜತೆಗೆ ಪ್ಯಾರಿಸ್​​ ಡೈಮಂಡ್​ ಲೀಗ್​ನಲ್ಲಿ ಭಾರತದ ನೂತನ ಚಾಂಪಿಯನ್​ ಎನಿಸಿರುವ ಲಾಂಗ್​ ಜಂಪರ್​ ಮುರಳಿ ಶ್ರೀಶಂಕರ್(Murali Sreeshankar)​ ಕೂಡ ಅದೃಷ್ಟ ಪರೀಕ್ಷೆ ಇಳಿಯಲಿದ್ದಾರೆ. ಉಭಯ ಆಟಗಾರರ ಮೇಲೆ ಭಾರತ ದೊಡ್ಡ ಬರವಸೆ ಇರಿಸಿದೆ.

ನೀರಜ್‌ ಚೋಪ್ರಾ ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಮೇ 29ರಂದು ನೆದರ್ಲೆಂರ್ಡ್ಸ್​ನಲ್ಲಿ ನಡೆದಿದ್ದ ಎಫ್ಬಿಕೆ ಗೇಮ್ಸ್‌ ಮತ್ತು ಜೂನ್​ 13ರಂದು ಫಿನ್​ಲೆಂಡ್‌ನ‌ಲ್ಲಿ ನಡೆದ ಪಾವೋ ನುರ್ಮಿ ಟೂರ್ನಿಯಿಂದ ಹೊರಗುಳಿದರು. ಇದೀಗ ಮತ್ತೆ ಡೈಮಂಡ್​ ಲೀಗ್​ನಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಶುಕ್ರವಾರ(ಇಂದು) ನಡೆಯುವ ಈ ಸ್ಪರ್ಧೆಯಲ್ಲಿ ಶ್ರೇಷ್ಠ ಪ್ರದರ್ಶನದೊಂದಿಗೆ ಮತ್ತೊಂದು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ದೋಹಾ ಚಾಂಪಿಯನ್‌ ಆಗಿರುವ ಕಾರಣ ನೀರಜ್‌ 8 ಅಂಕಗಳೊಂದಿಗೆ ಕೂಟದ ಅಗ್ರ ಶ್ರೇಯಾಂಕ ಹೊಂದಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್‌ ಗಣರಾಜ್ಯದ ಜಾಕುಬ್‌ ವಾಲೆಶ್‌, ಗ್ರೆನೆಡಾದ ವಿಶ್ವ ಚಾಂಪಿಯನ್‌ ಆ್ಯಂಡರ್ಸನ್‌ ಪೀಟರ್, ಫಿನ್ಲಂಡ್‌ನ‌ ಒಲಿವರ್‌ ಹೆಲಾಂಡರ್‌, 2012ರ ಒಲಿಂಪಿಕ್‌ ಚಾಂಪಿಯನ್‌-ಟ್ರಿನಿಡಾಡ್‌ ಆ್ಯಂಡ್‌ ಟೊಬೆಗೋದ ಕೆಶಾರ್ಟ್‌ ವಾಲ್ಕಾಟ್‌, ಜರ್ಮನಿಯ ಜೂಲಿಯನ್‌ ವೆಬ್ಬರ್‌ ಮೊದಲಾದವರು ನೀರಜ್​ ಚೋಪ್ರಾ ಅವರ ಎದುರಾಳಿಗಳಾಗಿದ್ದಾರೆ.

ಇದನ್ನೂ ಓದಿ Neeraj Chopra: ಲುಸಾನ್‌ ಡೈಮಂಡ್ ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ ನೀರಜ್​ ಚೋಪ್ರಾ

ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ ಲಾಂಗ್‌ಜಂಪ್‌ನಲ್ಲಿ 8.09 ಮೀ. ದೂರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾಗಿದ್ದ ಮುರಳಿ ಶ್ರೀಶಂಕರ್‌ ಮೇಲೂ ಪದಕದ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ನ್ಯಾಶನಲ್‌ ಇಂಟರ್‌ ಸ್ಟೇಟ್‌ ಆ್ಯತ್ಲೆಟಿಕ್ಸ್‌ನಲ್ಲಿ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ದಾಖಲಿಸಿ(8.42 ಮೀ.) ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಅವರು ಇಲ್ಲಿಯೂ ಉತ್ತಮ ಪ್ರದರ್ಶನ ತೋರುವ ನಂಬಿಕೆಯಲ್ಲಿದ್ದಾರೆ.

ಇದನ್ನೂ ಓದಿ CWG- 2022 | ಕಾಮನ್ವೆಲ್ತ್‌ನಲ್ಲಿ ಮೊದಲ ಬೆಳ್ಳಿ ಪದಕ ಗೆದ್ದ ಭಾರತದ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌

ಲೌಸನ್ನೆ ಬಳಿಕ ಡೈಮಂಡ್‌ ಲೀಗ್‌ ಸರಣಿ ಮೊನಾಕೊ (ಜುಲೈ 21), ಜ್ಯೂರಿಚ್‌ನಲ್ಲಿ (ಆಗಸ್ಟ್​ 31) ಮುಂದುವರಿಯುತ್ತದೆ. ಗ್ರ್ಯಾಂಡ್‌ ಫಿನಾಲೆ ಅಮೆರಿಕದ ಯೂಜಿನ್‌ನಲ್ಲಿ ಸೆಪ್ಟೆಂಬರ್​ 16, 17ರಂದು ನಡೆಯಲಿದೆ.

Exit mobile version