ಮುಂಬಯಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ನೀರಜ್ ಚೋಪ್ರಾ(Neeraj Chopra) ಇದೀಗ ತಮ್ಮ ಕೋಚ್ ಮೇಲೆ ಆರೋಪವೊಂದನ್ನು ಮಾಡಿದ್ದಾರೆ. ಒಂದು ಪರೋಟ ತಿಂದರೂ ಕೋಚ್ ದಂಡ ವಿಧಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ಹೇಳಿಕೆ ಅಸಲಿಗೆ ಆರೋಪವೇ ಅಲ್ಲ!
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನೀರಜ್ ಚೋಪ್ರಾ, ” ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಬಳಿಕ ನಾನು ನನ್ನ ಆಹಾರದ ಮೇಲೆ ನಿಯಂತ್ರಣ ಕಳೆದುಕೊಂಡೆ. ಅದರಂತೆ ಸಿಕ್ಕಾಪಟೆ ಕೊಲೆಸ್ಟ್ರಾಲ್ ಆಹಾರವನ್ನು ತಿನ್ನತೊಡಗಿದೆ. ಇದರಿಂದ ನನ್ನ ದೇಹದ ತೂಕ ಹೆಚ್ಚಾಯಿತು. ದೇಹದ ಬದಲಾವಣೆಯನ್ನು ಅರಿತ ತಕ್ಷಣ ಮತ್ತೆ ಆಹಾರ ಪದ್ಧತಿಯಲ್ಲಿ ನಿಯಂತ್ರಣ ಸಾಧಿಸಿದೆ. ಇದೀಗ ಫಿಟ್ ಆ್ಯಂಡ್ ಫೈನ್ ಆಗಿದ್ದೇನೆ” ಎಂದು ನೀರಜ್ ಹೇಳಿದ್ದಾರೆ.
ಮಾತು ಮುಂದುವರಿಸಿದ ನೀರಜ್, ಕೋಚ್ ನನಗೆ ದಂಡ ವಿಧಿಸುವುದು ಯಾವುದೇ ಸೇಡಿನಿಂದ ಅಲ್ಲ. ಹೊರತಾಗಿ ನನ್ನ ಆಹಾರ ಪದ್ಧತಿಯ ಮೇಲೆ ನಿಗಾ ಇರಿಸುವ ಕಾರಣದಿಂದ. ಒಂದೊಮ್ಮೆ ಕೋಚ್ ಈ ರೀತಿಯ ಉಪಾಯ ಮಾಡದೇ ಇದ್ದಲ್ಲಿ ನಾನು ಕೈಗೆ ಸಿಕ್ಕ ಆಹಾರವನ್ನು ತಿಂದು ಸಂಪೂರ್ಣ ಕಳಪೆ ಪ್ರದರ್ಶನ ತೋರುವ ಸ್ಥಿತಿ ಎದುರಾಗಬಹುದು. ಈ ನಿಟ್ಟಿನಲ್ಲಿ ಕೋಚ್ ಮುಂಜಾಗ್ರತಾ ಕ್ರಮವನ್ನು ಅನುಸರಿಸಿದ್ದಾರೆ ಎಂದು ನೀರಜ್ ತಿಳಿಸಿದರು.
ಇದನ್ನೂ ಓದಿ | T20 World Cup | ಅಫಘಾನಿಸ್ತಾನದ ವಿರುದ್ಧ 6 ವಿಕೆಟ್ ಗೆಲುವು; ಲಂಕಾ ಸೆಮಿ ಆಸೆ ಜೀವಂತ