ನವ ದೆಹಲಿ: ಸ್ವೀಡನ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ೮೯.೯೪ ಮೀಟರ್ ದೂರಕ್ಕೆ ಜಾವೆಲಿಸ್ ಎಸೆದು ರಾಷ್ಟ್ರೀಯ ದಾಖಲೆ ಸೃಷ್ಟಿಸಿದ javelin Throw ಚಾಂಪಿಯನ್ ಸ್ಪರ್ಧೆಯ ಬಳಿಕ ಎದುರಾದ ಹಿರಿಯ ವಯಸ್ಸಿನ ಅಭಿಮಾನಿಯೊಬ್ಬರ ಕಾಲು ಮುಟ್ಟಿ ನಮಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಪರ್ಧೆ ಮುಗಿಸಿ ವಾಪಸ್ ಬರುತ್ತಿದ್ದ ನೀರಜ್ ಅವರಿಗೆ ಹಲವಾರು ಅಭಿಮಾನಿಗಳು ಎದುರಾಗಿದ್ದಾರೆ. ಹಲವರು ಅವರಿಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸೂಚಿಸಿದ್ದಾರೆ. ಇನ್ನಲವರು ಹಸ್ತಲಾಘವ ಕೊಟ್ಟಿದ್ದಾರೆ. ಅಂತೆಯೆ ಇನ್ನೂ ಕೆಲವರು ನೀರಜ್ ಜತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ಅಂತೆಯೆ ಹಿರಿಯ ಅಭಿಮಾನಿಯೊಬ್ಬರು ನೀರಜ್ ಅವರನ್ನು ಮಾತನಾಡಿಸಲು ಬಂದಿದ್ದು, ತಕ್ಷಣ ಅವರು ಕಾಲು ಮುಟ್ಟಿ ಎದೆಗೊತ್ತಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಅಗಿದ್ದು, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದಿರುವ ಹೊರತಾಗಿಯೂ ಅವರ ವಿಧೇಯತೆ ಎಲ್ಲರಿಗೂ ಮಾದರಿ ಎಂಬ ಹೊಗಳಿಕೆ ಬರುತ್ತಿವೆ.
ಇನ್ನೂ ಕೆಲವರು ಇದು ಭಾರತೀಯ ಸಂಸ್ಕೃತಿ ಹಾಗೂ ಸೇನೆಯ ಶಿಸ್ತಿನ ಪ್ರಭಾವ ಎಂದು ಹೇಳಿದ್ದಾರೆ. ನೀರಜ್ ಟ್ರ್ಯಾಕ್‌ನಲ್ಲಿ ಮಾತ್ರವಲ್ಲ, ಹೊರಗೂ ಭಾರತೀಯರು ಹೆಮ್ಮೆ ಪಡುವಂಥ ಕೆಲಸ ಮಾಡುತ್ತಿದ್ದಾರೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
ಇನ್ನೂ ಓದಿ: Javelin Throw : ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದ ನೀರಜ್ ಚೋಪ್ರಾ