ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಅವರು ಟರ್ಕಿಯ ಗ್ಲೋರಿಯಾ ನ್ಪೋರ್ಟ್ಸ್ ಕೇಂದ್ರದಲ್ಲಿ 61 ದಿನಗಳ ಕಾಲ ತರಬೇತಿ ಪಡೆಯಲಿದ್ದಾರೆ. ಈ ವಿಚಾರವನ್ನು ಕೇಂದ್ರ ಕ್ರೀಡಾ ಸಚಿವಾಲಯ ಖಚಿತಪಡಿಸಿದೆ.
“ಪ್ಯಾರಿಸ್ ಒಲಿಂಪಿಕ್ಸ್(paris olympics 2024) ಕ್ರೀಡಾ ಕೂಟಕ್ಕೆ ಉನ್ನತ ಮಟ್ಟದ ತರಬೇತಿಗಾಗಿ ನೀರಜ್ ಚೋಪ್ರಾ ಅವರು ಎಪ್ರಿಲ್ ಒಂದರಂದು ಟರ್ಕಿಗೆ ತೆರಳಲಿದ್ದು ಮೇ 31ರ ವರಗೆ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ನೀರಜ್ ಚೋಪ್ರಾ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ ಕಳೆದ ವರ್ಷವೂ ಟರ್ಕಿಯಲ್ಲಿಯೇ ತರಬೇತಿ ಪಡೆದಿದ್ದರು. ಈ ಮೂಲಕ ಉತ್ತಮ ಪ್ರದರ್ಶನ ತೋರಿದ್ದರು. ಇದೀಗ ಮತ್ತೆ ಟರ್ಕಿಗೆ ತೆರಳಿದ್ದಾರೆ. ಅವರ ತರಬೇತಿ ಈ ಬಾರಿಯೂ ಈ ಯೋಜನೆಯಡಿ ನಡೆಯಲಿದೆ. ಎಲ್ಲ ಖರ್ಚುಗಳನ್ನು ಈ ಯೋಜನೆಯಡಿ ಭರಿಸಲಾಗುತ್ತದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಟರ್ಕಿಯಲ್ಲಿ ತರಬೇತಿ ಪಡೆಯುವ ನೀರಜ್ ಚೋಪ್ರಾ ಅವರ ಮನವಿಗೆ ಮಾ. 16ರಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯವದ ಮಿಷನ್ ಒಲಿಂಪಿಕ್ ಸೆಲ್ ಒಪ್ಪಿಗೆ ಸೂಚಿಸಿದೆ. ನೀರಜ್ ಅವರಲ್ಲದೇ ಅವರ ಕೋಚ್, ಫಿಸಿಯೋಥೆರಪಿಸ್ಟ್ ಎಲ್ಲರ ಖರ್ಚು ವೆಚ್ಚವೂ ಈ ಯೋಜನೆಯಡಿ ಬರಲಿದೆ ಎಂದು ಸಚಿವಾಲಯ ತಿಳಿಸಿದೆ.