Site icon Vistara News

Neeraj Chopra: ಫೈನಲ್​ ವೇಳೆ ನೀರಜ್​ ಚೋಪ್ರಾ ಧರಿಸಿದ್ದ ವಾಚ್​ ಕಂಪನಿ ಯಾವುದು?, ಇದರ ಬೆಲೆ ಎಷ್ಟು?

Neeraj Chopra

Neeraj Chopra: Why Neeraj Chopra's luxurious Omega watch is the talk of Paris Olympics? Check price and features

ಬೆಂಗಳೂರು: ನೀರಜ್​ ಚೋಪ್ರಾ(Neeraj Chopra) ಅವರು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ವಿಚಾರಕ್ಕಿಂತ ಅವರು ಫೈನಲ್​ನಲ್ಲಿ ಧರಿಸಿದ್ದ ವಾಚ್​(neeraj chopra watch) ಬಗ್ಗೆಯೇ ಭಾರಿ ಕುತೂಹಲ ಮತ್ತು ಚರ್ಚೆಗಳು ಆರಂಭವಾಗಿದೆ. ಹೌದು, ನೀರಜ್​ ಧರಿಸಿದ್ದ ವಾಚ್​ನ ಬೆಲೆ ಬರೋಬ್ಬರಿ 52 ಲಕ್ಷ ರೂ. ಈ ವಾಚ್​ನ ಹೆಸರು ಒಮೆಗಾ(luxurious Omega watch) ಸೀಮಾಸ್ಟರ್​ ಆ್ಯಕ್ವಾಟೆರ್ರಾ 159 ಎಂ.

ಸ್ವಿಜರ್​ಲ್ಯಾಂಡ್​ನ ಖ್ಯಾತ ವಾಚ್​ ತಯಾರಕರ ಸಂಸ್ಥೆಗಳಲ್ಲಿ ಒಂದಾದ, ಪ್ಯಾರಿಸ್​ ಒಲಿಂಪಿಕ್ಸ್​ನ ಅಧಿಕೃತ ಟೈಂ ಕೀಪಿಂಗ್​ ಪ್ರಾಯೋಜಕರಾದ ಒಮೆಗಾ ಸಂಸ್ಥೆ ಈ ಬಾರಿ ಆಯ್ದ ಕ್ರೀಡಾಪಟುಗಳಿಗೆ ತನ್ನ ಸಂಸ್ಥೆಯ ಅತ್ಯಂತ ದುಬಾರಿ ಮೊತ್ತದ ವಾಚ್​ಗಳನ್ನು ಪ್ರಚಾರದ ಉದ್ದೇಶದಲ್ಲಿ ಉಚಿತವಾಗಿ ನೀಡಿತ್ತು. ಕಳೆದ ಬಾರಿ ಚಿನ್ನ ಗೆದ್ದಿದ್ದ ನೀರಜ್​ ಚೋಪ್ರಾ ಈ ಬಾರಿಯ ಸ್ಟಾರ್​ ಅಥ್ಲೀಟ್​ಗಳಲ್ಲಿ ಒಬ್ಬರಾಗಿದ್ದರು. ಹೀಗಾಗಿ ಅವರಿಗೆ ಸಂಸ್ಥೆ ಈ ವಾಚ್​ ನೀಡಿತ್ತು.

ಶೀಘ್ರದಲ್ಲೇ ನೀರಜ್​ ತೊಡೆಯ ಸ್ನಾಯುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಪ್ಯಾರಿಸ್ ಗೇಮ್ಸ್‌ ನಡೆಯುತ್ತಿರುವಾಗಲೇ ಚೋಪ್ರಾ ಅವರು ತೊಡೆಯ ಸ್ನಾಯುಗಳಿಗೆ ಸಂಬಂಧಿಸಿದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ನೋವಿನ ಮಧ್ಯೆಯೂ ಕೂಡ ಅವರು ಬೆಳ್ಳಿ ಗೆದ್ದಿರುವುದು ನಿಜಕ್ಕೂ ಮೆಚ್ಚಲೇ ಬೇಕು.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಚೋಪ್ರಾ ಅವರು ಚಿನ್ನ ಗೆದ್ದು ಭಾರೀ ಸುದ್ದಿಯಾಗಿದ್ದರು. ಈ ಬಾರಿ ನೋವಿನಲ್ಲೂ ಹೋರಾಟ ನಡೆಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಒಲಿಂಪಿಕ್ ಪದಕಗಳನ್ನು ಪಡೆದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹಿರಿಮೆಗೆ ಭಾಜನರಾದರು.

ನೀರಜ್​ಗೆ ಚಿನ್ನ ಕೈತಪ್ಪಿದ ಬಗ್ಗೆ ಅವರ ಆರಂಭಿಕ ಕೋಚ್​(Coach) ಕಾಶೀನಾಥ್ ನಾಯ್ಕ್ (Kashinath Naik) ಕಾರಣವನ್ನು ನೀಡಿದ್ದಾರೆ. ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

ಇದನ್ನೂ ಓದಿ Neeraj Chopra : ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಅವಕಾಶ ಶ್ರೀಜೇಶ್​ಗೆ ಬಿಟ್ಟುಕೊಟ್ಟ ನೀರಜ್​ ಚೋಪ್ರಾ

ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್‌ ತನ್ನ ಮೊದಲ ಎಸೆತದಲ್ಲಿ ಪೌಲ್‌ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್‌ ವಿವರಿಸಿದ್ದಾರೆ.


2022ರ ಕಾಮನ್ ವೇಲ್ತ್ ಗೇಮ್ಸ್ ಬಳಿಕ ಅರ್ಷದ್ ನದೀಮ್ ಗಾಯದ ಸಮಸ್ಯೆಗೊಳಗಾಗಿದ್ದರು. ಗಾಯದಿಂದ ವಾಪಸಾದ ಬಳಿಕವೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿಯೂ 88 ಮೀಟರ್ ಎಸೆದಿದ್ರು. ಆದ್ರೆ ನೀರಜ್ ತನ್ನ ಮೊದಲ ಎಸೆತದಲ್ಲಿ ಪೌಲ್ ಆಗಿದ್ದು ಅವರಿಗೆ ಧೈರ್ಯ ತುಂಬಿತು. ಒಂದು ವೇಳೆ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆದಿದ್ರೆ ಆತ ನರ್ವಸ್ ಆಗಿಬಿಡುತ್ತಿದ್ದ. ನೀರಜ್ ಮೊದಲ ಎಸೆತ ಫೌಲ್ ಆಗಿದ್ರಿಂದಲೇ ಆತನ ಆತ್ಮವಿಶ್ವಾಸ ಹೆಚ್ಚಾಯ್ತು ಎಂದು ಕಾಶೀನಾಥ್‌ ಹೇಳಿದ್ದಾರೆ.

ಯಾವಾಗಲೂ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆಯುತ್ತಿದ್ದ. ಆದರೆ ಈ ಬಾರಿ ಪೌಲ್ ಆಗಿದ್ದು ಅರ್ಷದ್ ನದೀಮ್‌ಗೆ ವರವಾಯ್ತು. ನದೀಮ್ ಒಲಿಂಪಿಕ್ಸ್ ರೆಕಾರ್ಡ್ಸ್ ಮಾಡುತ್ತಿದ್ದಂತೆ ನೀರಜ್ ನರ್ವಸ್ ಆಗಿಬಿಟ್ಟ. ಆದರೂ ನೀರಜ್ ತನ್ನ ಸಾಮರ್ಥ್ಯ ಮೀರಿ ಪ್ರಯತ್ನ ಮಾಡಿದ್ದಾನೆ. ಅಥ್ಲೆಟಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದು ಸಾಧನೆ ಮಾಡಿದ್ದಾನೆ. ಇದು ನಿಜಕ್ಕೂ ದೊಡ್ಡ ಸಾಧನೆ ಎಂದು ತಮ್ಮ ಶಿಷ್ಯನನ್ನು ಕಾಶೀನಾಥ್ ನಾಯ್ಕ ಶ್ಲಾಘಿಸಿದ್ದಾರೆ.

Exit mobile version