ಬೆಂಗಳೂರು : ಕ್ರಿಕೆಟ್ ಆಡುವ ದೇಶಗಳಲ್ಲಿ ಈಗ ಲೀಗ್ಗಳ ಮಹಿಮೆ. ಎಲ್ಲರೂ ಟಿ20 ಲೀಗ್ನ ಮೋಡಿಗೆ ಒಳಗಾಗಿ ತಮ್ಮದೇ ಹೊಸ ಯೋಜನೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲಿ ನೇಪಾಳ ಕ್ರಿಕೆಟ್ ಲೀಗ್ ಕೂಡ ನಡೆಯುತ್ತಿದೆ. ಆದರೆ ಆ ದೇಶದಲ್ಲಿ ಕ್ರಿಕೆಟ್ ಲೀಗ್ ಅರ್ಧಕ್ಕೆ ನಿಲ್ಲುವ ಸೂಚನೆ ಲಭಿಸಿದ್ದು, ಆಯೋಜಕರು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಹಣ ಸಿಗದೇ ಆಡುವುದಿಲ್ಲ ಎಂಬುದಾಗಿ ಆಟಗಾರರು ಹೇಳಿದ್ದಾರೆ.
ಸೆವೆನ್3 ಸ್ಪೋರ್ಟ್ಸ್ ಸಂಸ್ಥೆಯು ನೇಪಾಳ ಕ್ರಿಕೆಟ್ ಲೀಗ್ ಆಯೋಜಿಸಿದೆ. ಅದರ ಸಂಸ್ಥಾಪಕ ಜತಿನ್ ಅಹ್ಲುವಾಲಿಯಾ ಅವರು ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಟಗಾರರು ಮೈದಾನಕ್ಕೆ ಇಳಿಯುತ್ತಿಲ್ಲ ಎಂದು ವರದಿಯಾಗಿದೆ.
ನೇಪಾಳ ಕ್ರಿಕೆಟ್ ಸಂಸ್ಥೆಯ ಸಹಯೋಗದೊಂದಿಗೆ ಈ ಲೀಗ್ ಅನ್ನು ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಹಣವನ್ನು ನೀಡಲಾಗಿರುವ ಹೊರತಾಗಿಯೂ ಎರಡನೇ ಹಂತದಲ್ಲಿ 4.5 ಕೋಟಿ ರೂಪಾಯಿ ನೇಪಾಳದ ಹಣವನ್ನು ಪಾವತಿ ಮಾಡಲು ಬಾಕಿ ಉಳಿದಿದೆ. ಹೀಗಾಗಿ ಪಂದ್ಯದ ನೇರ ಪ್ರಸಾರದ ಹಕ್ಕು ಪಡೆದುಕೊಂಡಿರುವ ಸಂಸ್ಥೆಗಳು, ಕಾಮೆಂಟೇಟರ್ಗಳು ಕೂಡ ತಮ್ಮ ಪಾಲ್ಗೊಳ್ಳುವಿಕೆಯನ್ನು ಮುಂದುವರಿಸುವುದಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ | IPL 2023 | ಐಪಿಎಲ್‍ನಲ್ಲಿ ಕಡೆಗಣಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪಂಜಾಬ್ ವೇಗಿ ಸಂದೀಪ್ ಶರ್ಮ!