ನವದೆಹಲಿ: ಅಕ್ಟೋಬರ್ನಲ್ಲಿ ಆರಂಭವಾಗುವ ಟಿ-೨೦ ವಿಶ್ವಕಪ್ಗೂ ಮುನ್ನವೇ ಭಾರತ ಕ್ರಿಕೆಟ್ ತಂಡದ ಆಟಗಾರರ ಜೆರ್ಸಿಗೆ ಹೊಸ ರೂಪ (New Jersey) ನೀಡಲಾಗಿದೆ. ಟೀಮ್ ಇಂಡಿಯಾದ ಅಫಿಶಿಯಲ್ ಕಿಟ್ ಪಾರ್ಟ್ನರ್ ಆದ ಎಂಪಿಎಲ್ ಸ್ಪೋರ್ಟ್ಸ್ ಹೊಸ ಜೆರ್ಸಿಯ ವಿಡಿಯೊ ಹಂಚಿಕೊಂಡಿದೆ.
ಹೊಸ ಜೆರ್ಸಿಯ ವಿನ್ಯಾಸ, ಬದಲಾವಣೆಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗದಿದ್ದರೂ, ಜೆರ್ಸಿಯಲ್ಲಿ ಮಾಡಲಾದ ಬದಲಾವಣೆಯು ವಿಡಿಯೊದಲ್ಲಿ ಕಾಣಲಿದೆ. ಸದ್ಯ, ಭಾರತ ತಂಡದ ಆಟಗಾರರ ಜೆರ್ಸಿಯು ಗಾಢ ನೀಲಿಯಾಗಿದ್ದು, ಇದನ್ನು ಆಕಾಶ ನೀಲಿಗೆ ಪರಿವರ್ತನೆ ಮಾಡಲಾಗಿದೆ. ಅಕ್ಟೋಬರ್ನಲ್ಲಿ ಆರಂಭವಾಗುವ ಟಿ-೨೦ ವರ್ಲ್ಡ್ಕಪ್ ಹಿನ್ನೆಲೆಯಲ್ಲಿ ಜೆರ್ಸಿಯಲ್ಲಿ ಮಾರ್ಪಾಡು ಮಾಡಲಾಗಿದೆ.
ಶೀಘ್ರದಲ್ಲೇ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗುತ್ತದೆ. ಟ್ರೈಲರ್ ವಿಡಿಯೊದಲ್ಲಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಅವರು ಹೊಸ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷವೂ ಟಿ-೨೦ ವರ್ಲ್ಡ್ಕಪ್ ಸಮಯದಲ್ಲಿ ಭಾರತ ತಂಡದ ಜೆರ್ಸಿಯಲ್ಲಿ ಬದಲಾವಣೆ ಮಾಡಲಾಗಿತ್ತು.
ಇದನ್ನೂ ಓದಿ | Amrit Mahotsav | ಅಮೃತ ಮಹೋತ್ಸವಕ್ಕೆ ಬಿಸಿಸಿಐ ನೂತನ ಜೆರ್ಸಿ ಹೀಗಿದೆ ನೋಡಿ