ರಾಯ್ಪುರ: ಟೀಮ್ ಇಂಡಿಯಾ ಯುವ ಆಟಗಾರ ಶುಭಮನ್ ಗಿಲ್(Shubman Gill) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದು ತಂಡದ ಸೆನ್ಷೇಷನಲ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಬಳಿಕವಂತೂ ಗಿಲ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ಗಿಲ್ಗೆ ನಿಕ್ನೇಮ್ ಇಟ್ಟಿದ್ದಾರೆ.
ರಾಯ್ಪುರದಲ್ಲಿ ಶನಿವಾರ ನಡೆದ ದ್ವಿತೀಯ ಪಂದ್ಯದ ವೇಳೆ ಸುನೀಲ್ ಗವಾಸ್ಕರ್ ಅವರು ಗಿಲ್ ಜತೆ ಪಂದ್ಯದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಗವಾಸ್ಕರ್ “ನಾನು ನಿಮಗೆ ‘ಸ್ಮೂತ್ಮ್ಯಾನ್ ಗಿಲ್’ ಎಂಬ ಹೊಸ ಅಡ್ಡಹೆಸರನ್ನು ಇಟ್ಟಿದ್ದೇನೆ. ಇದು ನಿಮಗೆ ಇಷ್ಟವಾಗಬಹುದು ಎಂದು ಭಾವಿಸುತ್ತೇನೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶುಭಮನ್ ಗಿಲ್ “ನನಗೇನೂ ಅಭ್ಯಂತರವಿಲ್ಲ ಸರ್” ಎಂದು ನಗುತ್ತಲೇ ಹೇಳಿದ್ದಾರೆ.
ಸದ್ಯ ಶುಭಮನ್ ಗಿಲ್ಗೆ ಸುನೀಲ್ ಗವಾಸ್ಕರ್ ಅವರು ಇಟ್ಟಿರುವ ಈ ನಿಕ್ನೇಮ್ ಗಿಲ್ ಅವರ ಕ್ರಿಕೆಟ್ ವೃತ್ತಿ ಜೀವನದುದ್ದಕ್ಕೂ ಕಾಣಿಸಲಿದೆಯಾ ಎಂದು ಕಾದು ನೋಡಬೇಕಿದೆ. ಗಿಲ್ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಇದೇ ರೀತಿ ಮುಂದುವರಿಸಿದರೆ ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಬಹುದು.
ಇದನ್ನೂ ಓದಿ | IND VS NZ: ಟೀಮ್ ಇಂಡಿಯಾ ಆಟಗಾರರ ಫುಡ್ ಮೆನು ಪರಿಚಯಿಸಿದ ಯಜುವೇಂದ್ರ ಚಹಲ್