ಕರಾಚಿ: ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ(Sania Mirza) ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್(Shoaib Malik) ಇಬ್ಬರೂ ಕಾನೂನುಬದ್ಧವಾಗಿ ಬೇರ್ಪಡುತ್ತಿದ್ದಾರೆ, ಇದಕ್ಕೆ ಪಾಕಿಸ್ತಾನಿ ನಟಿ ಆಯೇಷಾ ಒಮರ್(Ayesha Omar) ಕಾರಣ ಎಂಬ ಸುದ್ದಿ ಕಳೆದ ವರ್ಷ ಬಾರಿ ಸಂಚಲನ ಮೂಡಿಸಿತ್ತು. ಇದೀಗ ಮತ್ತೆ ಇವರಿಬ್ಬರ ವಿಚ್ಛೇದನ(Shoaib Malik and Sania Mirza divorce) ಸುದ್ದಿ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣವಾದದ್ದು ಶೋಯೆಬ್ ಮಲಿಕ್ ಅವರು ಟ್ವಿಟರ್ನಲ್ಲಿ ಬದಲಾಯಿಸಿದ ಬಯೊ ಮಾಹಿತಿಯಾಗಿದೆ.
ಶೋಯೆಬ್ ಮಲಿಕ್ ಮತ್ತು ಆಯೇಷಾ ಒಮರ್ ಡೇಟಿಂಗ್ ಮಾಡುತ್ತಿದ್ದು, ಇದೇ ಕಾರಣಕ್ಕೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಇದು ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ನಡೆಸಿಕೊಡುವ ‘ದಿ ಮಿರ್ಜಾ ಮಲಿಖ್’ ಎಂಬ ಟಾಕ್ ಶೋ ಕಾರ್ಯಕ್ರಮದ ಪ್ರಚಾರಕ್ಕೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿತ್ತು. ಜತೆಗೆ ಇದು ಸುಳ್ಳು ಸುದ್ದಿ ಎಂದು ಶೋಯೆಬ್ ಹೇಳಿದ್ದರು. ಈ ಮೂಲಕ ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯಲಾಗಿತ್ತು. ಆದರೂ ಸಾಮಾಜಿಕ ಜಾಲತಾಣದಲ್ಲಿ ಆಯೇಷಾ ಒಮರ್ ಮತ್ತು ಶೋಯೆಬ್ ಮಲಿಕ್ ಕದ್ದು ಮುಚ್ಚಿ ಡೇಟಿಂಗ್ ನಡೆಸುತ್ತಿದ್ದು ಸಾನಿಯಾಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಕೂಗು ಕೇಳಿಬರುತ್ತಿತ್ತು. ಇದೀಗ ಈ ಸುದ್ದಿ ನಿಜವಾಗುವಂತೆ ತೋರುತ್ತಿದೆ.
ಪತ್ನಿಯ ಹೆಸರು ಮಾಯ
ಶೋಯೆಬ್ ಮಲಿಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ “ಈ ಜಗತ್ತಿನಲ್ಲಿ ತಂದೆಯ ಆಶೀರ್ವಾದಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ” ಎಂದು ಬರೆದುಕೊಂಡಿದ್ದಾರೆ. ಜತೆಗೆ ಇನ್‌ಸ್ಟಾಗ್ರಾಮ್ ಬಯೋದಿಂದ ‘ಸಾನಿಯಾ ಮಿರ್ಜಾ ಅವರ ಪತಿ’ ಎಂಬುದನ್ನು ಕೂಡ ಅಳಿಸಿ ಹಾಕಿದ್ದಾರೆ. ಈ ಹಿಂದೆ ಮಲಿಕ್ ಇನ್‌ಸ್ಟಾಗ್ರಾಮ್ ಬಯೋದಲ್ಲಿ ‘ಸೂಪರ್ ಮಹಿಳೆ ಸಾನಿಯಾ ಮಿರ್ಜಾ ಅವರ ಪತಿ’ ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಬಯೋವನ್ನು ಮಲಿಕ್ ಎಡಿಟ್ ಮಾಡಿ ಸಾನಿಯಾ ಮಿರ್ಜಾ ಅವರಿಂದ ದೂರವಾಗುತ್ತಿರುವ ಸುಳಿವನ್ನು ನೀಡಿದ್ದಾರೆ ಎನ್ನಲಾಗಿದೆ. ಸಾನಿಯ ಮಿರ್ಜಾ ಮತ್ತು ಮಲಿಕ್ ಕೆಲ ವರ್ಷಗಳಿಂದ ಪ್ರತೇಕ್ಯವಾಗಿ ವಾಸಿಸುತ್ತಿದ್ದಾರೆ. ಆದರೆ ಇಬ್ಬರು ತಮ್ಮ ವಿಚ್ಛೇದನದ ಬಗ್ಗೆ ಎಲ್ಲಿಯೂ ಇದುವರೆಗೆ ಅಧಿಕೃತವಾಗಿ ಹೇಳಿಲ್ಲ.
ಇದನ್ನೂ ಓದಿ Sania Mirza: ಸಾನಿಯಾ ಮಿರ್ಜಾ ಭಾರತದ ಚಾಂಪಿಯನ್; ಪ್ರಧಾನಿ ಮೋದಿ ಪ್ರಶಂಸೆ
ಶೋಯೆಬ್ ಜತೆಗಿನ ಸಂಬಂಧ ಸುಳ್ಳು
ಆಯೇಶಾ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಪತ್ರಕರ್ತರೊಬ್ಬರು ಮಲಿಕ್ ಅವರನ್ನು ಮದುವೆಯಾಗಲು ಯೋಜಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿದ್ದ ಅವರು, ಖಂಡಿತವಾಗಿಯೂ ಇಲ್ಲ. ಶೋಯೆಬ್ ನನ್ನ ಒಳ್ಳೆಯ ಸ್ನೇಹಿತ. ನಾನು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಅವರಿಗೆ ಅಪಾರ ಗೌರವ ಕೊಡುತ್ತೇನೆ. ಮಲಿಕ್ ಅವರ ಪತ್ನಿಯ ಜತೆ ಸಂತೋಷವಾಗಿಯೇ ಇದ್ದಾರೆ ಎಂದು ಉತ್ತರಿಸಿದ್ದರು. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು.