Site icon Vistara News

Team India | ಟೀಮ್​ ಇಂಡಿಯಾ ಕ್ರಿಕೆಟ್‌ ಜೆರ್ಸಿಗೆ ಕಿಲ್ಲರ್‌ ಜೀನ್ಸ್ ನೂತನ ಪ್ರಾಯೋಜಕರು

team india

ನವದೆಹಲಿ: ನೂತನ ವರ್ಷದಲ್ಲಿ ಟೀಮ್​ ಇಂಡಿಯಾ(Team India) ಕ್ರಿಕೆಟಿಗರ ಜೆರ್ಸಿಗೆ ನೂತನ ಪ್ರಾಯೋಜಕರು ಲಭಿಸಿದ್ದಾರೆ. ಎಂಪಿಎಲ್‌ ಬದಲು “ಕಿಲ್ಲರ್‌ ಜೀನ್ಸ್​” ಬ್ರ್ಯಾಂಡ್‌ ಲೋಗೊ ಇನ್ನು ಮುಂದೆ ಆಟಗಾರರ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಈ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ನೂತನ ಪ್ರಾಯೋಜತ್ವದ ಜೆರ್ಸಿಯನ್ನು ತೊಟ್ಟ ಫೋಟೊವನ್ನು ಯಜುವೇಂದ್ರ ಚಹಲ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೂತನ ಪ್ರಾಯೋಜಕತ್ವದ ಲಭಿಸಿದರೂ ಕಳೆದ ಟಿ20 ವಿಶ್ವಕಪ್‌ ವೇಳೆ ಧರಿಸಿದ ಜೆರ್ಸಿಯನ್ನೇ ಮುಂದುವರಿಸಲಾಗಿದೆ. ಅದರಂತೆ ಎಂಪಿಎಲ್‌ ಬದಲು ​ಕಿಲ್ಲರ್‌ ಜೀನ್ಸ್ ಲೋಗೊ ಕಾಣಿಸಿಕೊಂಡಿದೆ. ಉಳಿದಂತೆ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಇನ್ನೊಂದು ವರ್ಷದ ಒಪ್ಪಂದದ ಅವಧಿ ಬಾಕಿ ಇರುವಂತೆಯೇ “ಎಂಪಿಎಲ್‌’ ನಷ್ಟದ ಕಾರಣ ನೀಡಿ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಇದೀಗ “ಕಿಲ್ಲರ್‌ ಬ್ರ್ಯಾಂಡ್‌’ ಕಂಪೆನಿಯ ಸ್ಪಾನ್ಸರ್‌ಶಿಪ್‌ ಲಭಿಸಿದೆ.

Exit mobile version