Site icon Vistara News

Team India | ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಹೊಸ ಚಿಂತೆ, ಜಸ್‌ಪ್ರಿತ್‌ ಬುಮ್ರಾ ಕಳಪೆ ಫಾರ್ಮ್‌

ಹೈದರಾಬಾದ್‌ : ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ೨೦ ವಿಶ್ವ ಕಪ್‌ಗೆ ಸಜ್ಜಾಗುತ್ತಿರುವ ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಹೊಸ ತಲೆನೋವು ಶುರುವಾಗಿದೆ. ತಂಡದ ಪ್ರಮುಖ ಬೌಲರ್‌ ಎನಿಸಿಕೊಂಡಿರುವ ಜಸ್‌ಪ್ರಿತ್‌ ಬುಮ್ರಾ ಅವರ ಬೌಲಿಂಗ್‌ನಲ್ಲಿ ವಿಕೆಟ್‌ ಬೀಳುತ್ತಿಲ್ಲ ಹಾಗೂ ಹೆಚ್ಚು ರನ್‌ ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ವಿಶ್ವ ಕಪ್‌ಗೆ ಮೊದಲು ಭಾರತ ತಂಡದ ಬೌಲಿಂಗ್‌ ವಿಭಾಗದ ಬಗ್ಗೆ ಆತಂಕ ಹೆಚ್ಚಾಗಿದೆ.

ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಟಿ೨೦ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಒಟ್ಟು ೫೦ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದು ಬುಮ್ರಾ ಅವರ ಟಿ೨೦ ಮಾದರಿಯ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಒಂದೇ ಒಂದು ವಿಕೆಟ್‌ ಕೂಡ ಪಡೆದಿಲ್ಲ. ಈಗಾಗಲೇ ಭಾರತದ ಬೌಲಿಂಗ್‌ ವಿಭಾಗದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆ ಬುಮ್ರಾ ಅವರ ಕಳಪೆ ಫಾರ್ಮ್‌ ಟೀಮ್‌ ಇಂಡಿಯಾಗೆ ಆತಂಕ ತಂದೊಡ್ಡಿದೆ.

ಬುಮ್ರಾ ಅವರು ೨೦೧೬ರಲ್ಲಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ೪ ಓವರ್‌ಗಳಲ್ಲಿ ೪೭ ರನ್ ನೀಡಿದ್ದರು. ಅದು ಭಾನುವಾರದವರೆಗಿನ ಅವರ ಕಳಪೆ ಫಾರ್ಮ್‌ ಆಗಿತ್ತು. ಆದರೆ, ಅಂದಿನ ಪಂದ್ಯದಲ್ಲಿ ಅವರು ೨ ವಿಕೆಟ್‌ ಬಳಿಸಿದ್ದರು. ಆದೆರ, ಭಾನುವಾರ ವಿಕೆಟ್‌ ಪಡೆಯಲೂ ವಿಫಲಗೊಂಡಿದ್ದರು.

ಭುವನೇಶ್ವರ್‌ ಕುಮಾರ್ ಹಾಗೂ ಹರ್ಷಲ್‌ ಪಟೇಲ್‌ ಬೌಲಿಂಗ್‌ನಲ್ಲಿ ಸತತ ವೈಫಲ್ಯ ಕಂಡಿದ್ದರು. ಹೀಗಾಗಿ ಬುಮ್ರಾ ತಂಡಕ್ಕೆ ಆಧಾರವಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ, ಬುಮ್ರಾ ಕೂಡ ವೈಫಲ್ಯ ಕಾಣುತ್ತಿರುವುದು ಆತಂಕ ಉಂಟುಮಾಡಿದೆ.

ಇದನ್ನೂ ಓದಿ | Team India | ಜಸ್‌ಪ್ರಿತ್‌ ಬುಮ್ರಾ ರೆಡಿ, ಟೆನ್ಷನ್‌ ಬೇಡ ಎಂದು ಸೂರ್ಯಕುಮಾರ್ ಯಾದವ್‌

Exit mobile version