Site icon Vistara News

Cricket League : ಮೇಜರ್​ ಲೀಗ್​ ಕ್ರಿಕೆಟ್​ನಲ್ಲಿ ನ್ಯೂಯಾರ್ಕ್ ಫ್ರಾಂಚೈಸಿ ತನ್ನದಾಗಿಸಿಕೊಂಡ ಮುಂಬಯಿ ಇಂಡಿಯನ್ಸ್​

New York franchise in Major League Cricket, Mumbai Indians

#image_title

ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​ ಒಡೆತನದ ಮುಂಬಯಿ ಇಂಡಿಯನ್ಸ್, ತನ್ನ ಐದನೇ ಕ್ರಿಕೆಟ್​ ಫ್ರಾಂಚೈಸಿಯಾಗಿ ‘ಎಂಐ ನ್ಯೂಯಾರ್ಕ್​’ ತಂಡವನ್ನು ತನ್ನದಾಗಿಸಿಕೊಂಡಿದೆ. ನ್ಯೂಯಾರ್ಕ್​ ಮೂಲದ ಈ ತಂಡದಿಂದ ಎಮ್​ಐ ಕ್ರಿಕೆಟ್​ನ ವ್ಯಾಪ್ತಿ ವಿಸ್ತಾರಗೊಂಡಿದೆ. ಇದರೊಂದಿಗೆ ಮುಂಬಯಿ ಇಂಡಿಯನ್ಸ್​ ತಂಡ ಈಗ ಮೂರು ಖಂಡಗಳು, ನಾಲ್ಕು ದೇಶಗಳು, ಐದು ಕ್ರಿಕೆಟ್ ಲೀಗ್​ಗಳಲ್ಲಿ (Cricket League) ಕ್ರಿಕೆಟ್​ ತಂಡಗಳ ಒಡೆತನವನ್ನು ಹೊಂದಿದೆ. ‘ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್ ಕ್ರಿಕೆಟ್​ನಲ್ಲಿ​ (ಎಂಎಲ್​ಸಿ) ಆಡಲಿದೆ.

ಬೆಳೆಯುತ್ತಿರುವ ಎಂಐ ಕುಟುಂಬಕ್ಕೆ ನ್ಯೂಯಾರ್ಕ್​ ಫ್ರಾಂಚೈಸಿಯನ್ನು ಸ್ವಾಗತಿಸಲು ನಾನು ಉತ್ಸುಕಳಾಗಿದ್ದೇನೆ. ಅಮೆರಿಕದ ಕ್ರಿಕೆಟ್​ ಲೀಗ್​ಗೆ ಇದೇ ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿದ್ದೇವೆ. ಕ್ರಿಕೆಟ್​ ಆಟದ ಜಾಗತಿಕ ಬ್ರ್ಯಾಂಡ್​ ಆಗಿ ಮುಂಬಯಿ ಇಂಡಿಯನ್ಸ್​ ಅನ್ನು ರೂಪಿಸುವ ಭರವಸೆ ನನ್ನದು. ಎಂಐಗೆ ಇದು ಇನ್ನೊಂದು ಹೊಸ ಆರಂಭ. ನಾನು ಮುಂದಿನ ಉತ್ಸಾಹಿ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ ಎಂದು ನೀತಾ ಎಂ. ಅಂಬಾನಿ ಅವರು ಹೇಳಿದ್ದಾರೆ.

ರಿಲಯನ್ಸ್​ ಕಂಪನಿಯು ಐಪಿಎಲ್​ನಲ್ಲಿ ಮುಂಬಯಿ ಇಂಡಿಯನ್ಸ್ ), ಎಂಐ ಕೇಪ್​ಟೌನ್​ (ಎಸ್​ಎ20), ಎಂಐ ಎಮಿರೇಟ್ಸ್​ (ಐಎಲ್​ಟಿ20)ಮತ್ತು ಮುಂಬಯಿ ಇಂಡಿಯನ್ಸ್ (ಡಬ್ಲ್ಯುಪಿಎಲ್​) ತಂಡವನ್ನು ಹೊಂದಿದೆ. ‘ಎಂಐ ನ್ಯೂಯಾರ್ಕ್’​ 5ನೇ ಫ್ರಾಂಚೈಸಿಯಾಗಿದೆ.

‘ಮೇಜರ್​ ಲೀಗ್​ ಕ್ರಿಕೆಟ್​’ ಅಮೆರಿಕದಲ್ಲಿ ಆಡಲಾಗುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್​ ಚಾಂಪಿಯನ್​ಷಿಪ್​ ಆಗಿರುತ್ತದೆ. 2023ರ ಬೇಸಗೆ ಋತುವಿನಲ್ಲಿ ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್​ ಕ್ರಿಕೆಟ್​ ಟೂರ್ನಿಯು ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: www.majorleaguecricket.com

ವಿಶ್ವದ ಎಲ್ಲೆಡೆ ಸುಮಾರು 50 ದಶಲಕ್ಷ ಡಿಜಿಟಲ್​ ಅಭಿಮಾನಿಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಾಗತಿಕ ಕ್ರಿಕೆಟ್​ ಬ್ರ್ಯಾಂಡ್​ ಎನಿಸಿದೆ. ವಿಶ್ವ ಪ್ರಮುಖ ಫ್ರಾಂಚೈಸಿ ಲೀಗ್​ಗಳಲ್ಲಿ ವರ್ಷದಲ್ಲಿ ಸರಿಸುಮಾರು 6 ತಿಂಗಳ ಕಾಲ ಕ್ರಿಕೆಟ್​ ಆಡುವ ಎಂಐ ತಂಡಗಳನ್ನು ಅಭಿಮಾನಿಗಳು ಸತತವಾಗಿ ಬೆಂಬಲಿಸುತ್ತಿದ್ದಾರೆ. 2009ರಿಂದ ಮುಂಬಯಿ ಇಂಡಿಯನ್ಸ್ ಶೇ. 99ರಷ್ಟು ಬ್ರ್ಯಾಂಡ್​ ಮೌಲ್ಯದ (ಬ್ರ್ಯಾಂಡ್​ ಫೈನಾನ್ಸ್​) ಪ್ರಗತಿ ಕಂಡಿದೆ.

ಇದನ್ನೂ ಓದಿ : IPL 2023 : ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಮತ್ತೊಂದು ಆಘಾತ, ವೇಗದ ಬೌಲರ್​ ಅಲಭ್ಯ

ಐಪಿಎಲ್​ನಲ್ಲಿ ಮುಂಬಯ ಇಂಡಿಯನ್ಸ್ ತಂಡ ಅತಿ ಹೆಚ್ಚು ಯಶಸ್ಸು ಗಳಿಸಿದ ತಂಡವಾಗಿದೆ. ರೋಹಿತ್ ಶರ್ಮ ನೇತೃತ್ವದಲ್ಲಿ ಮುಂಬಯಿ ಇಂಡಿಯನ್ಸ್​ ಬಳಗ ಐದು ಟ್ರೋಫಿಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ. ಪ್ರಸ್ತುತ ನಡೆಯುತ್ತಿರುವ ಮಹಿಳೆಯ ಪ್ರೀಮಿಯರ್​ ಲೀಗ್​ನಲ್ಲೂ ಮುಂಬಯಿ ಇಂಡಿಯನ್ಸ್​ ತಂಡ ಹರ್ಮನ್​ಪ್ರೀತ್ ಕೌರ್ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

Exit mobile version