ದುಬೈ: 2024ರ ಟಿ20 ವಿಶ್ವಕಪ್ ಟೂರ್ನಿಗೆ (ICC T20 World Cup) ನ್ಯೂಯಾರ್ಕ್ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದೆ. ವಿಶೇಷವೆಂದರೆ, ಬಹುನಿರೀಕ್ಷಿತ ಪಂದ್ಯಾವಳಿಯನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಲಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ದೊಡ್ಡ ಮಾರುಕಟ್ಟೆಯಾಗಿರುವ ಅಮೆರಿಕದಲ್ಲಿ ನಡೆಸಲು ಐಸಿಸಿ ಉದ್ದೇಶಿಸಿದೆ.
ನ್ಯೂಯಾರ್ಕ್ ನಗರದ ಪೂರ್ವಕ್ಕೆ 30 ಮೈಲಿ ದೂರದಲ್ಲಿರುವ 34,000 ಆಸನಗಳ ತಾತ್ಕಾಲಿಕ ಕಟ್ಟಡವಾಗಿ ಐಸಿಸಿ ಈ ಸ್ಥಳವನ್ನು ಘೋಷಿಸಲಿದೆ. ಲಾಂಗ್ ಐಲ್ಯಾಂಡ್ನ ಈಸ್ಟ್ ಮೆಡೋ ಎಂಬ ಕುಗ್ರಾಮದಲ್ಲಿ 930 ಎಕರೆ ಐಸೆನ್ಹೋವರ್ ಪಾರ್ಕ್ನಲ್ಲಿ ಈ ಸ್ಟೇಡಿಯಮ್ ನಿರ್ಮಿಸಲಾಗುವುದು. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯಕ್ಕೆ ಈ ಸ್ಥಳವು ಆತಿಥ್ಯ ವಹಿಸುವ ನಿರೀಕ್ಷೆಯಿದೆ. ಮಾತುಕತೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ.
ಬ್ರಾಂಕ್ಸ್ ವ್ಯಾನ್ ಕಾರ್ಟ್ಲ್ಯಾಂಡ್ ಪಾರ್ಕ್ನಲ್ಲಿ ಪಾಪ್ ಅಖಾಡವನ್ನು ನಿರ್ಮಿಸಲು ಐಸಿಸಿ ಮತ್ತು ನ್ಯೂಯಾರ್ಕ್ ನಗರದ ಅಧಿಕಾರಿಗಳ ನಡುವೆ ಮಾತುಕತೆಗಳು ನಡೆದಿದ್ದವು. ಅದು ವಿಫಲಗೊಂಡ ನಂತರ ಹೊಸ ಸ್ಥಳ ಅನ್ವೇಷಣೆ ಮಾಡಲಾಗಿದೆ. ಅಲ್ಲಿನ ನಿವಾಸಿಗಳು ಮತ್ತು ಅದೇ ಉದ್ಯಾನವನದಿಂದ ಹೊರಗಿರುವ ಕ್ರಿಕೆಟ್ ಲೀಗ್ಗಳ ವಿರೋಧದ ನಂತರ ಅಧಿಕಾರಿಗಳು ಬ್ರಾಂಕ್ಸ್ನ ಯೋಜನೆ ಕೈಬಿಡಬೇಕಾಯಿತು. ಆದಾಗ್ಯೂ, ಐಸಿಸಿ ನಸ್ಸೌ ಕೌಂಟಿ ಅಧಿಕಾರಿಗಳು ಮತ್ತು ಐಸೆನ್ಹೋವರ್ ಪಾರ್ಕ್ನ ಆಡಳಿತಗಾರರೊಂದಿಗೆ ಸಂಭಾಷಣೆ ನಡೆಸಿ ಮುಂದಿನ ಯೋಜನೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಕ್ರಿಕೆಟ್ಗೆ ಬೆಳೆಸಲು ಐಸಿಸಿ ಪ್ರಯತ್ನಿಸುತ್ತಿದೆ. ಅದೂ ಅಲ್ಲದೆ ಅಮೆರಿಕದ ಬಗ್ಗೆ ಐಸಿಸಿ ಎರಡು ಆಕರ್ಷಣೆಯನ್ನು ಹೊಂದಿದೆ. ಅದು ವಿಶ್ವದ ಅತಿದೊಡ್ಡ ಮಾಧ್ಯಮ ಮಾರುಕಟ್ಟೆ ಮತ್ತು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಕ್ರಿಕೆಟ್ ಮಾರುಕಟ್ಟೆ ಎಂಬ ನಿಟ್ಟಿನಲ್ಲಿ. ನಗದು ಮೌಲ್ಯದ ದೃಷ್ಟಿಯಿಂದ ಐಸಿಸಿ ಪಂದ್ಯಾವಳಿಗಳಿಗೆ ಯುಎಸ್ ದೊಡ್ಡ ಬೇಡಿಕೆ ಪಡೆಯಲಿದೆ. ಐಸಿಸಿ ಅಮೆರಿಕವನ್ನು ಸಹ-ಆತಿಥೇಯರಾಗಿ ಆಯ್ಕೆ ಮಾಡಿರುವುದು ಈ ಉದ್ದೇಶದಿಂದಲೇ
ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್ನ ಅಧಿಕೃತ ಗೀತೆ ಬಿಡುಗಡೆ; ಇಲ್ಲಿದೆ ಹಾಡಿನ ಸಂಪೂರ್ಣ ವಿವರ
ಐಸೆನ್ಹೋವರ್ ಪಾರ್ಕ್ ಒಪ್ಪಂದವು ಯುಎಸ್ನಲ್ಲಿ ಸ್ಥಳಗಳ ಆಯ್ಕೆ ಬಗ್ಗೆ ಐಸಿಸಿಯ ಅನೇಕ ಗೊಂದಲಗಳನ್ನು ನಿವಾರಿಸುವ ಸಾಧ್ಯತೆಗಳಿವೆ. ಯುನೈಟೆಡ್ ಸ್ಟೇಟ್ಸ್ ಸುಮಾರು 20 ಪಂದ್ಯಗಳಿಗೆ ಆತಿಥ್ಯ ನೀಡಲಿದೆ. ಅದನ್ನು ಈಗ ಮೂರು ಸೌಲಭ್ಯಗಳಾಗಿ ವಿಂಗಡಿಸಲಾಗುತ್ತದೆ. ಉತ್ತರ ಕೆರೊಲಿನಾದ ಮಾರಿಸ್ವಿಲ್ಲೆಯಲ್ಲಿರುವ ಚರ್ಚ್ ಸ್ಟ್ರೀಟ್ ಪಾರ್ಕ್ ಕೂಡ ಕೆಲವು ಪಂದ್ಯಗಳನ್ನು ಆಯೋಜಿಸಲು ಸ್ಪರ್ಧೆಯಲ್ಲಿದೆ. ಆದಾಗ್ಯೂ ಸೌಲಭ್ಯವು ಯಾವುದೇ ಶಾಶ್ವತ ರಚನೆ ಅಥವಾ ತರಬೇತಿ ಸೌಲಭ್ಯಗಳನ್ನು ಹೊಂದಿಲ್ಲ ಎಂಬುದು ಗಮನಾರ್ಹ.
ಕ್ರಿಕ್ಬಝ್ ವರದಿಯ ಪ್ರಕಾರ, ಈ ಸ್ಥಳವು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ಆಕ್ಟೇನ್ ಪಂದ್ಯಕ್ಕೆ ಉತ್ತಮ ತಾಣವಾಗಿದೆ. ಈಗಾಗಲೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರುವ ಫ್ಲೋರಿಡಾ ಮತ್ತು ಮೇಜರ್ ಲೀಗ್ ಕ್ರಿಕಟ್ನ ಉದ್ಘಾಟನಾ ಆವೃತ್ತಿಯಲ್ಲಿ ಎರಡು ಆತಿಥೇಯ ನಗರಗಳಾಗಿದ್ದ ಮಾರಿಸ್ವಿಲ್ಲೆ ಮತ್ತು ಡಲ್ಲಾಸ್ ಹೊರತುಪಡಿಸಿ ಬ್ರಾಂಕ್ಸ್ ಐಸಿಸಿ ಪಾಲಿಗೆ ಹೆಚ್ಚು ಆಕರ್ಷಕ ಸ್ಥಳವಾಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ನ 17 ನೇ ಆವೃತ್ತಿಯ ನಂತರ ಟಿ 20 ವಿಶ್ವಕಪ್ 2024 ಜೂನ್ 4 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಇಂಗ್ಲೆಂಡ್ನ ತವರಿನ ಬೇಸಿಗೆಯನ್ನು ವಿಳಂಬಗೊಳಿಸಬಹುದು. ಕೆರಿಬಿಯನ್ ಮತ್ತು ಅಮೆರಿಕದಲ್ಲಿ ಜಂಟಿಯಾಗಿ ಟೂರ್ನಿ ನಡೆಯಲಿದ್ದು, 20 ತಂಡಗಳು ಭಾಗವಹಿಸಲಿವೆ.