Site icon Vistara News

Colin De Grandhomme | ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನ್ಯೂಜಿಲೆಂಡ್‌ ಆಲ್ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ವಿದಾಯ!

Cricket

ವೆಲ್ಲಿಂಗ್ಟನ್: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನ್ಯೂಜಿಲೆಂಡ್‌ ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ (Colin De Grandhomme) ನಿವೃತ್ತಿ ಘೋಷಿಸಿದ್ದಾರೆ. ನ್ಯೂಜಿಲೆಂಡ್‌ ಕ್ರಿಕೆಟ್‌ ಬೋರ್ಡ್‌ ಈ ಕುರಿತು ಟ್ವಿಟರ್‌ನಲ್ಲಿ ದೃಢಪಡಿಸಿದೆ. ಕ್ರಿಕೆಟ್‌ ಆಡಳಿತ ಮಂಡಳಿ ಜತೆ ಚರ್ಚಿಸಿದ ಬಳಿಕ ಗ್ರ್ಯಾಂಡ್‌ಹೋಮ್‌ ವಿದಾಯ ಘೋಷಿಸುತ್ತಿದ್ದು, ಅವರನ್ನು ಸೆಂಟ್ರಲ್‌ ಕಾಂಟ್ರ್ಯಾಕ್ಟ್‌ನಿಂದ ಬಿಡುಗಡೆ ಮಾಡಲು ಮಂಡಳಿ ಒಪ್ಪಿಗೆ ಸೂಚಿಸಿದೆ.

“ನ್ಯೂಜಿಲೆಂಡ್‌ ತಂಡದ ಪರ ಆಡಲು ಅವಕಾಶ ನೀಡಿದ ಮಂಡಳಿಗೆ ಧನ್ಯವಾದಗಳು” ಎಂದು ೩೬ ವರ್ಷದ ಆಲ್‌ರೌಂಡರ್‌ ಹೇಳಿದ್ದಾರೆ. “ನನಗೆ ವಯಸ್ಸಾಗುತ್ತಿದೆ ಹಾಗೂ ನಾನಿನ್ನೂ ಯುವಕ ಅಲ್ಲ ಎಂಬುದು ಮನವರಿಕೆಯಾಗಿದೆ. ಗಾಯಗಳಿಂದಾಗಿ ನನಗೆ ತರಬೇತಿ ಪಡೆಯಲು ಕಷ್ಟವಾಗುತ್ತಿದೆ” ಎಂದು ನಿವೃತ್ತಿಯ ಕಾರಣವನ್ನೂ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ಪರ ೨೯ ಟೆಸ್ಟ್‌ ಪಂದ್ಯಗಳನ್ನಾಡಿರುವ ಗ್ರ್ಯಾಂಡ್‌ಹೋಮ್‌, ಎರಡು ಶತಕ ಸೇರಿ ೧,೪೩೨ ರನ್‌ ಗಳಿಸಿದ್ದಾರೆ. ಹಾಗೆಯೇ ೪೯ ವಿಕೆಟ್‌ ವಿಕೆಟ್‌ ಪಡೆದಿದ್ದಾರೆ. ೪೫ ಏಕದಿನ ಹಾಗೂ ೪೧ ಟಿ-೨೦ ಪಂದ್ಯಗಳನ್ನೂ ಆಡಿದ ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಮಿಂಚಿ ಉತ್ತಮ ಆಲ್‌ರೌಂಡರ್‌ ಎನಿಸಿದ್ದರು.

ಇದನ್ನೂ ಓದಿ | ODI CRICKET | ಏಕದಿನ ಮಾದರಿಗೆ ವಿದಾಯ ಹೇಳಿದ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​

Exit mobile version