Site icon Vistara News

ICC World Cup 2023 : ನೆದರ್ಲ್ಯಾಂಡ್ಸ್​ ವಿರುದ್ಧ ನ್ಯೂಜಿಲ್ಯಾಂಡ್​ಗೆ 99 ರನ್​ ಸುಲಭ ಜಯ

Icc World Cup team

ಹೈದರಾಬಾದ್​: ವಿಶ್ವ ಕಪ್​ನ 2023 (ICC World Cup 2023) 6ನೇ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ನ್ಯೂಜಿಲ್ಯಾಂಡ್​ ತಂಡ 99 ರನ್​ ಭರ್ಜರಿ ವಿಜಯ ದಾಖಲಿಸಿದೆ. ಇದರೊಂದಿಗೆ ನ್ಯೂಜಿಲ್ಯಾಂಡ್​ ತಂಡ ಹಾಲಿ ವಿಶ್ವ ಕಪ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ನೆದರ್ಲೆಂಡ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್​ ಆಹ್ವಾನ ಪಡೆದ ನ್ಯೂಜಿಲ್ಯಾಂಡ್​ ಬಳಗ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 322 ರನ್ ಬಾರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ನೆದರ್ಲೆಂಡ್ಸ್​​ 46.3 ಓವರ್​ಗಳಲ್ಲಿ 223 ರನ್​ ಬಾರಿಸಿ ಆಲ್​ಔಟ್ ಆಯಿತು.

ಇದನ್ನೂ ಓದಿ :

ನ್ಯೂಜಿಲ್ಯಾಂಡ್ ಪರ ಬ್ಯಾಟಿಂಗ್​ನಲ್ಲಿ 17 ಎಸೆತಗಳಲ್ಲಿ 37 ರನ್ ಗಳಿಸಿದ ದೊಡ್ಡ ಮೊತ್ತ ಪೇರಿಸಲು ನೆರವಾದ ಮಿಚೆಲ್​ ಸ್ಯಾಂಟ್ನರ್​ ಬೌಲಿಂಗ್​ನಲ್ಲೂ ತಮ್ಮ ಪ್ರದರ್ಶನ ಮುಂದುವರಿಸಿದರು. ಅವರು 10 ಓವರ್​ ಮಾಡಿ 59 ರನ್​ ಬಿಟ್ಟುಕೊಟ್ಟು 5 ವಿಕೆಟ್​ ಉರುಳಿಸಿ ಮಿಂಚಿದರು. ಅದೇ ರೀತಿ ಮ್ಯಾಟ್ ಹೆನ್ರಿ ಮೂರು ಹಾಗೂ ರಚಿನ್​ ರವೀಂದ್ರ ಒಂದು ವಿಕೆಟ್​ ಉರುಳಿಸಿದರು.

ನ್ಯೂಜಿಲ್ಯಾಂಡ್​ ಉತ್ತಮ ಆರಂಭ

ಮೊದಲು ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್ ತಂಡ ಉತ್ತಮ ಅರಂಭ ಪಡೆಯಿತು. 67 ರನ್​ಗಳಿಗೆ 1 ವಿಕೆಟ್ ಕಳೆದುಕೊಂಡಿತು. ಕಾನ್ವೆ 32 ರನ್ ಬಾರಿಸಿದರೆ ವಿಲ್ ಯಂಗ್ 70 ರನ್​ ಬಾರಿಸಿದರು. ರಚಿನ್ ರವೀಂದ್ರ 51 ರನ್​ ಕೊಡುಗೆ ಕೊಟ್ಟರೆ ಡ್ಯಾರಿಲ್ ಮಿಚೆಲ್​ 48 ರನ್​ ಬಾರಿಸಿದ್ದಾರೆ. ಬಳಿಕ ಟಾಮ್ ಲೇಥಮ್​ 53 ರನ್ ಬಾರಿಸಿದರು. ಕೊನೆಯಲ್ಲಿ ಸ್ಯಾಂಟ್ನರ್ 36 ರನ್​ ಬಾರಿಸಿದರೆ, ಮ್ಯಾಟ್ ಹೆನ್ರಿ 10 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಇದನ್ನೂ ಓದಿ : Virat Kohli : ಅಪರೂಪಕ್ಕೆ ಕೊಹ್ಲಿಯನ್ನು ಹೊಗಳಿದ ಗೌತಮ್ ಗಂಭೀರ್​!

ದೊಡ್ಡ ಮೊತ್ತವನ್ನು ಪೇರಿಸಲು ಆರಂಭಿಸಿದ ನೆದರ್ಲೆಂಡ್ಸ್ ತಂಡ 21 ರನ್​ಗೆ ಮೊದಲು ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಮೂರನೇ ಕ್ರಮಾಂಕದಲ್ಲಿ 69 ರನ್ ಬಾರಿಸಿ ಮಿಂಚಿದರು. ಬಳಿಕ ಉಳಿದ ಬ್ಯಾಟರ್​ಗಳು ಅಲ್ಪಸ್ವಲ್ಪ ರನ್​ ಬಾರಿಸಿದ ಕಾರಣ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

Exit mobile version