ಇಂದೋರ್: ಪ್ರವಾಸಿ ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿರುವ ಭಾರತ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದಿದೆ. ಕಿವೀಸ್ ಮೊದಲು ಬೌಲಿಂಗ್ ನಡೆಸಲಿದೆ. ಭಾರತ ಈ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿದೆ, ಶಮಿ ಮತ್ತು ಸಿರಾಜ್ ಬದಲಿಗೆ ಉಮ್ರಾನ್ ಮಲಿಕ್ ಹಾಗೂ ಯಜುವೇಂದ್ರ ಚಹಲ್ಗೆ ಅವಕಾಶ ನೀಡಲಾಗಿದೆ.
ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಲಿದೆ. ಅತ್ತ ನ್ಯೂಜಿಲ್ಯಾಂಡ್ಗೆ ಈ ಪಂದ್ಯ ವೈಟ್ ವಾಶ್ ಮುಖಭಂಗದಿಂದ ಪಾರಾಗಲು ಮಸ್ಟ್ ವಿನ್ ಗೇಮ್ ಆಗಿದೆ. ಹೀಗಾಗಿ ಉಭಯ ತಂಡಗಳ ಈ ಹೋರಾಟವನ್ನು ಹೈವೋಲ್ಟೇಜ್ ಪಂದ್ಯ ಎಂದು ನಿರೀಕ್ಷಿಸಬಹುದು. ಇನ್ನೊಂದೆಡೆ ಭಾರತ ಇಲ್ಲಿ ಆಡಿದ 5 ಪಂದ್ಯಗಳಲ್ಲಿ ಗೆಲುವು ಕಾಣುವ ಅಜೇಯ ದಾಖಲೆ ಹೊಂದಿದೆ.
ಪಿಚ್ ರಿಪೋರ್ಟ್
ಇಂದೋರ್ನ ಹೋಳ್ಕರ್ ಸ್ಟೇಡಿಯಂನ ಪಿಚ್ ಹೆಚ್ಚು ಸ್ಪಿನ್ ಬೌಲರ್ಗಳಿಗೆ ನೆರವು ನೀಡಿದರೂ ಇದು ಬ್ಯಾಟಿಂಗ್ ಟ್ರ್ಯಾಕ್ ಆಗಿದೆ. ಏಕೆಂದರೆ ಈ ಮೈದಾನದ ಚಿಕ್ಕದಾಗಿದೆ. ಆದ್ದರಿಂದ ಬ್ಯಾಟರ್ಗಳು ಇಲ್ಲಿ ಸುಲಭವಾಗಿ ಬೌಂಡರಿ, ಸಿಕ್ಸರ್ ಬಾರಿಸಬಹುದು. ಹೀಗಾಗಿ ಬೌಲರ್ಗಳು ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮ (ನಾಯಕ), ಶುಭ್‌ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್.
ನ್ಯೂಜಿಲ್ಯಾಂಡ್: ಟಾಮ್ ಲಾಥಮ್ (ನಾಯಕ), ಫಿನ್ ಅಲೆನ್, ಡೆವೋನ್ ಕಾನ್ವೆ, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಡೌಗ್ ಬ್ರೇಸ್‌ವೆಲ್, ಲ್ಯಾಕಿ ಫರ್ಗ್ಯುಸನ್, ಬ್ಲೇರ್ ಟಿಕ್ನರ್.
ಇದನ್ನೂ ಓದಿ | IND VS NZ: ಅಂತಿಮ ಏಕದಿನ; ವೈಟ್ ವಾಶ್ ಭೀತಿಯಲ್ಲಿ ಕಿವೀಸ್