Site icon Vistara News

IND VS NZ | ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲ್ಯಾಂಡ್​ ಬ್ಯಾಟಿಂಗ್​ ಆಯ್ಕೆ

New Zealand opt to bat

ನೇಪಿಯನರ್​: ಭಾರತ ಮತ್ತು ನ್ಯೂಜಿಲ್ಯಾಂಡ್(IND VS NZ)​ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಹಂಗಾಮಿ ನಾಯಕ ಟಿಮ್​ ಸೌಥಿ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯ ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಆರಂಭಗೊಂಡಿದೆ.

ನ್ಯೂಜಿಲ್ಯಾಂಡ್​ ತಂಡದ ಖಾಯಂ ನಾಯಕ ಕೇನ್​ ವಿಲಿಯಮ್ಸನ್​ ಅನುಪಸ್ಥಿತಿಯಲ್ಲಿ ಟಿಮ್​ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ವಿಲಿಯಮ್ಸನ್​ ಬದಲು ಮಾರ್ಕ್​ ಚಾಪ್​ಮನ್​ ಆಡುವ ಬಳಗದಲ್ಲಿ ಅವಕಾಶ ಪಡೆದರು.

ಭಾರತ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿತು. ವಾಷಿಂಗ್ಟನ್​ ಸುಂದರ್​ ಬದಲು ವೇಗಿ ಹರ್ಷಲ್ ಪಟೇಲ್​ಗೆ ಅವಕಾಶ ನೀಡಿತು. ಈಗಾಗಲೇ 1-0 ಮುನ್ನಡೆಯಲ್ಲಿರುವ ಭಾರತ ಈ ಪಂದ್ಯದಲ್ಲಿಯೂ ಗೆದ್ದು ಸರಣಿ ಕೈವಶ ಮಾಡುವ ಯೋಜನೆಯಲ್ಲಿದೆ. ಅತ್ತ ನ್ಯೂಜಿಲ್ಯಾಂಡ್​ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಸರಣಿಯನ್ನು ಸಮಬಲಕ್ಕೆ ತರುವ ಯೋಜನೆಯಲ್ಲಿದೆ.

ಪಂದ್ಯ ನಡೆಯುವ ಮೆಕ್‌ಲೀನ್‌ ಪಿಚ್‌ ಬ್ಯಾಟಿಂಗ್‌ಗೆ ಪೂರಕವಾಗಿದ್ದು ಇತ್ತಂಡಗಳೂ ಭರ್ಜರಿ ಬ್ಯಾಟ್‌ ಬೀಸಲು ಸಜ್ಜಾಗಿದೆ. ಪ್ರಮುಖವಾಗಿ ಹೊಡೆಬಡಿಯ ದಾಂಡಿಗರಿಗೆ ಈ ಸ್ಟೇಡಿಯಮ್‌ ಸಾಕಷ್ಟು ನೆರವಾಗಲಿದೆ.

ತಂಡಗಳು

ಭಾರತ

ಇಶಾನ್​ ಕಿಶನ್​, ಶ್ರೇಯಸ್​ ಅಯ್ಯರ್​, ದೀಪಕ್​ ಹೂಡಾ, ಸೂರ್ಯಕುಮಾರ್​ ಯಾದವ್​, ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ, ಹರ್ಷಲ್​ ಪಟೇಲ್​​, ಅರ್ಶ್​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​​, ಭುವನೇಶ್ವರ್​ ಕುಮಾರ್​. ಯಜುವೇಂದ್ರ ಚಹಲ್​.

ನ್ಯೂಜಿಲೆಂಡ್​

ಫಿನ್​ ಅಲೆನ್​, ಡೆವೋನ್ ಕಾನ್ವೆ, ಮಾರ್ಕ್​ ಚಾಪ್​ಮನ್​​, ಗ್ಲೆನ್​ ಫಿಲಿಪ್ಸ್​, ಡ್ಯಾರಿಲ್​ ಮಿಚೆಲ್​, ಜೇಮ್ಸ್​ ನೀಶಮ್​, ಮಿಚೆಲ್​ ಸ್ಯಾಂಟ್ನರ್​, ಟಿಮ್​ ಸೌಥಿ(ನಾಯಕ) , ಲಾಕಿ ಫರ್ಗ್ಯುಸನ್​, ಆಡಂ ಮಿಲ್ನೆ. ಐಶ್​ ಸೋಧಿ.

ಇದನ್ನೂ ಓದಿ | INDvsNZ | ಭಾರತ- ನ್ಯೂಜಿಲೆಂಡ್ ಪಂದ್ಯದ ಪಿಚ್‌ ರಿಪೋರ್ಟ್‌, ಪಂದ್ಯದ ಸಮಯ ಇಲ್ಲಿದೆ

Exit mobile version