Site icon Vistara News

NZvsSL : ಟೆಸ್ಟ್​ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಕ್ಲೀನ್​ ಸ್ವೀಪ್​ ಮಾಡಿದ ನ್ಯೂಜಿಲ್ಯಾಂಡ್​

NZvsSL

#image_title

ವೆಲ್ಲಿಂಗ್ಟನ್​: ಪ್ರವಾಸಿ ಶ್ರೀಲಂಕಾ ತಂಡವನ್ನು ಎರಡನೇ ಟೆಸ್ಟ್​ (NZvsSL) ಪಂದ್ಯದಲ್ಲಿ ಇನಿಂಗ್ಸ್​ ಹಾಗೂ 58 ರನ್​ಗಳಿಂದ ಸೋಲಿಸಿ ನ್ಯೂಜಿಲ್ಯಾಂಡ್​ ತಂಡ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಬಳಗ 1 ರನ್ ವಿರೋಚಿತ ವಿಜಯ ದಾಖಲಿಸಿತ್ತು.

ಮೊದಲು ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್​ ತಂಡ ನಾಲ್ಕು ವಿಕೆಟ್​ ನಷ್ಟಕ್ಕೆ 580 ರನ್​ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್​ ಮಾಡಿದ್ದ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್​ನಲ್ಲಿ 164 ರನ್​ಗಳಿಗೆ ಆಲ್​ಔಟ್​ ಆಗಿತ್ತು. 416 ರನ್​ಗಳ ಹಿನ್ನಡೆಯೊಂದಿಗೆ ಫಾಲೊ ಆನ್ ಪಡೆದುಕೊಂಡಿದ್ದ 358 ರನ್​ಗಳಿಗೆ ಮತ್ತೆ ಆಲ್​ಔಟ್​ ಆಯಿತು. ಹೀಗಾಗಿ ನ್ಯೂಜಿಲ್ಯಾಂಡ್​ ತಂಡಕ್ಕೆ ಜಯ ಲಭಿಸಿತು. ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್​ ತಂಡ ಸತತ ಮೂರು ಟೆಸ್ಟ್​ ಪಂದ್ಯಗಳ ವಿಜಯ ಸಾಧನೆ ಮಾಡಿತು. ಲಂಕಾ ಪ್ರವಾಸಕ್ಕಿಂತ ಮೊದಲು ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೇ ಪಂದ್ಯದಲ್ಲಿ ಒಂದು ರನ್​ ಜಯ ದಾಖಲಿಸಿತ್ತು. ಆ ಪಂದ್ಯವೂ ವೆಲ್ಲಿಂಗ್ಟನ್​ನಲ್ಲಿಯೇ ನಡೆದಿತ್ತು.

ಇದನ್ನೂ ಓದಿ : ಹೊಸ ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ ಸ್ಪಿನ್ನರ್​ ವಾನಿಂದು ಹಸರಂಗ, ಐಪಿಎಲ್​ಗೆ ಬರುವುದು ತಡ?

ನ್ಯೂಜಿಲ್ಯಾಂಡ್​ ತಂಡದ ಪರವಾಗಿ ಮೊದಲ ಇನಿಂಗ್ಸ್​ನಲ್ಲಿ ಕೇನ್ ವಿಲಿಯಮ್ಸನ್​ (215) ಹಾಗೂ ಹೆನ್ರಿ ನಿಕೋಲ್ಸ್​ (200) ದ್ವಿಶತಕ ಬಾರಿಸಿದ್ದರು. ಆದರೆ, ಶ್ರೀಲಂಕಾ ತಂಡ ಮೊದಲ ಇನಿಂಗ್ಸ್​ನಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ದಿಮುತ್​ ಕರುಣಾರತ್ನೆ (89) ಅರ್ಧ ಶತಕ ಬಿಟ್ಟರೆ ಮಿಕ್ಕವರೆಲ್ಲರೂ ಪೆವಿಲಿಯನ್​ ಪರೇಡ್ ನಡೆಸಿದ್ದರು. ಎರಡನೇ ಇನಿಂಗ್ಸ್​ನಲ್ಲಿ ದಿಮುತ್ ಕರುಣಾರತ್ನೆ (51) ಮತ್ತೆ ಅರ್ಧ ಶತಕ ಬಾರಿಸಿದ್ದರು. ಉಳಿದಂತೆ ಕುಸಾಲ್ ಮೆಂಡಿಸ್​ (50), ದಿನೇಶ್​ ಚಂಡಿಮಾಲ್​ (62), ಧನಂಜಯ ಡಿಸಿಲ್ವಾ (98) ಹೋರಾಟ ಸಂಘಟಿಸಿದ್ದರು. ಆದರೆ ಮೊದಲ ಇನಿಂಗ್ಸ್​ ಹಿನ್ನಡೆಯ ಕಾರಣಕ್ಕೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.

ಇಂಗ್ಲೆಂಡ್ ವಿರುದ್ಧದ ಸರಣಿಯೂ ರೋಚಕವಾಗಿತ್ತು

ನ್ಯೂಜಿಲ್ಯಾಂಡ್​ ಮತ್ತು ಇಂಗ್ಲೆಂಡ್(ENG VS NZ)​ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ವೆಲ್ಲಿಂಗ್ಟನ್​ನಲ್ಲಿಯೇ ನಡೆದಿತ್ತು. ಅದು ಕೂಡ ರೋಚಕವಾಗಿತ್ತು ಆ ಹಣಾಹಣಿಯಲ್ಲಿ ಒಂದು ರನ್​ ಅಂತರದಿಂದ ಜಯ ಸಾಧಿಸುವ ಮೂಲಕ ನ್ಯೂಜಿಲ್ಯಾಂಡ್​ ಐತಿಹಾಸಿಕ ಗೆಲುವೊಂದನ್ನು ದಾಖಲಿಸಿತ್ತು.

ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದ್ದ ಕಿವೀಸ್​ ಎರಡನೇ ಪಂದ್ಯದಲ್ಲಿ ಆಂಗ್ಲರನ್ನು ಮಣಿಸುವ ಮೂಲಕ ಸರಣಿಯನ್ನು 1-1 ಸಮಬಲದೊಂದಿಗೆ ಮುಕ್ತಾಯಗೊಳಿಸಿತು. ಗೆಲುವಿಗೆ 258 ರನ್‌ ಪಡೆದ ಬೆನ್​ ಸ್ಟೋಕ್ಸ್​ ಬಳಗ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 48 ರನ್‌ ಮಾಡಿತ್ತು.

ಅಂತಿಮ ದಿನವಾದ ಮಂಗಳವಾರ(ಫೆ.28) ಆಟ ಮುಂದುವರಿಸಿದ ಇಂಗ್ಲೆಂಡ್ ತಂಡಕ್ಕೆ ​ ಕಿವೀಸ್​ ವೇಗಿಗಳಾದ ನೀಲ್​ ವೆಗ್ನರ್​(4) ಮತ್ತು ಟಿಮ್ ಸೌಥಿ(3) ಘಾತಕ ಬೌಲಿಂಗ್​ ನಡೆಸಿ ಸೋಲಿನ ರುಚಿ ತೋರಿಸಿದರು. ಇಂಗ್ಲೆಂಡ್​ 256 ರನ್ ಗಳಿಗೆ ಸರ್ವಪತನ ಕಂಡು ಕೇವಲ ಒಂದು ರನ್​ ಅಂತರದ ಸೋಲು ಕಂಡಿತು.

ಕೊನೆಯ ವಿಕೆಟ್​ಗೆ ಇಂಗ್ಲೆಂಡ್ ತಂಡಕ್ಕೆ ಗೆಲುವಿಗೆ ಏಳು ರನ್ ಅಗತ್ಯವಿತ್ತು. ಇದೇ ವೇಳೆ ಜೇಮ್ಸ್ ಆ್ಯಂಡರ್ಸನ್ ಬೌಂಡರಿ ಬಾರಿಸಿ ಇನ್ನೇನು ಪಂದ್ಯಕ್ಕೆ ಗೆಲುವು ಸಾರಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ವ್ಯಾಗ್ನರ್ ಎಸೆತದಲ್ಲಿ ಕೀಪರ್ ಬ್ಲಂಡಲ್​ಗೆ ಆ್ಯಂಡರ್ಸನ್ ಕ್ಯಾಚಿ ನೀಡಿ ನಿರಾಸೆ ಮೂಡಿಸಿದರು. ಇದರೊಂದಿಗೆ ಆಂಗ್ಲರು ಸೋಲನುಭವಿಸಿದರು. ಇಂಗ್ಲೆಂಡ್​ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಜೋ ರೂಟ್ 95, ವಿಕೆಟ್ ಕೀಪರ್ ಬೆನ್ ಫೋಕ್ಸ್ 35, ನಾಯಕ ಬೆನ್ ಸ್ಟೋಕ್ಸ್ 33 ರನ್ ಮಾಡಿದರು.

ಇದನ್ನೂ ಓದಿ ENG VS NZ: ಕಿವೀಸ್​ನಲ್ಲಿ 15 ವರ್ಷಗಳ ಬಳಿಕ ಟೆಸ್ಟ್​ ಪಂದ್ಯ ಗೆದ್ದ ಇಂಗ್ಲೆಂಡ್​

ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನ 146 ವರ್ಷಗಳ ​ಇತಿಹಾಸದಲ್ಲಿ ಈವರೆಗೆ 2,494 ಪಂದ್ಯಗಳು ನಡೆದಿದ್ದು ಅದರಲ್ಲಿ ಫಾಲೋ ಆನ್​ ಹೇರಿದ ಮೇಲೆಯೂ ಗೆದ್ದ ಮೂರನೇ ತಂಡ ಎಂಬ ಹಿರಿಮೆಗೆ ನ್ಯೂಜಿಲ್ಯಾಂಡ್​ ಪಾತ್ರವಾಗಿದೆ.​ ಜತೆಗೆ ಈ ರೀತಿ ಗೆಲುವು ದಾಖಲಾದ ನಾಲ್ಕನೇ ಪಂದ್ಯ ಇದಾಗಿದೆ. ಇದಕ್ಕೂ ಮೊದಲು ಭಾರತ ಮ

Exit mobile version