ಮುಂಬಯಿ : ಭಾರತ ಪ್ರವಾಸದಲ್ಲಿನ ಮೂರು ಪಂದ್ಯಗಳ ಟಿ20 ಸರಣಿಗೆ ನ್ಯೂಜಿಲ್ಯಾಂಡ್ ತಂಡವನ್ನು ಗುರುವಾರ (ಜನವರಿ 12) ನ್ಯೂಜಿಲ್ಯಾಂಡ್ ಕ್ರಿಕೆಟ್ ಸಮಿತಿ ಪ್ರಕಟಿಸಿದ್ದು, ವೇಗದ ಬೌಲರ್ ಬೆನ್ ಲಿಸ್ಟರ್ಗೆ ಅವಕಾಶ ಕಲ್ಪಿಸಲಾಗಿದೆ. 27 ವರ್ಷದ ವೇಗಿಗೆ ಇದೇ ಮೊದಲ ಬಾರಿಗೆ ನ್ಯೂಜಿಲ್ಯಾಂಡ್ ತಂಡದಿಂದ ಕರೆ ಬಂದಿದ್ದು, ಭಾರತದ ಪಿಚ್ನಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಜನವರಿ 27ರಂದು ರಾಂಚಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, 29ರಂದು ಲಖನೌನಲ್ಲಿ ಹಾಗೂ ಫೆಬ್ರವರಿ 1ರಂದು ಅಹಮದಾಬಾದ್ನಲ್ಲಿ ಪಂದ್ಯ ಆಯೋಜನೆಗೊಂಡಿದೆ. ಪಾಕಿಸ್ತಾನ ಪ್ರವಾಸ ಮುಗಿಸುವ ನ್ಯೂಜಿಲ್ಯಾಂಡ್ ತಂಡ ಭಾರತಕ್ಕೆ ಬರಲಿದೆ. ಆದರೆ, ಕೇನ್ ವಿಲಿಯಮ್ಸನ್ ಹಾಗೂ ಟಿಮ್ ಸೌಥೀ ವಾಪಸ್ ತವರಿಗೆ ತೆರಳಲಿದ್ದಾರೆ. ಹೀಗಾಗಿ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಡೆವೊನ್ ಕಾನ್ವೆ, ಜಾಕೋಬ್ ಡಫಿ, ಲಾಕಿ ಫರ್ಗ್ಯೂಸನ್, ಬೆನ್ ಲಿಸ್ಟರ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್.
ಇದನ್ನೂ ಓದಿ | IND VS NZ | ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಿಂದ ಕೊಹ್ಲಿ, ರೋಹಿತ್ಗೆ ಕೊಕ್?