ಮುಂಬಯಿ: ಆಸ್ಟ್ರೇಲಿಯಾದಲ್ಲಿ ಟಿ೨೦ ವಿಶ್ವ ಕಪ್ ಮುಗಿದ ತಕ್ಷಣದಲ್ಲೇ Team India ನ್ಯೂಜಿಲೆಂಡ್ ಪ್ರವಾಸ ಮಾಡಲಿದ್ದು, ಅಲ್ಲಿ ತಲಾ ಮೂರು ಟಿ೨೦ ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಸೀಮಿತ ಓವರ್‌ಗಳ ಪಂದ್ಯಗಳ ತವರಿನ ವೇಳಾಪಟ್ಟಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಮಂಗಳವಾರ ಪ್ರಕಟಿಸಿದೆ. ಇದೇ ವೇಳೆ ಕಿವೀಸ್ ತಂಡದ ತವರಿನ ಸರಣಿಯ ವೇಳಾಪಟ್ಟಿಯನ್ನೂ ಘೋಷಿಸಿದೆ. ಅದರಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧದ ತ್ರಿಕೋನ ಸರಣಿಯೂ ಸೇರಿಕೊಂಡಿದೆ. ಜತೆಗೆ ಫೆಬ್ರವರಿ ೨೦೨೩ರಲ್ಲಿ ಇಂಗ್ಲೆಂಡ್ ಹಾಗೂ ಮಾರ್ಚ್ ೨೦೨೩ರಲ್ಲಿ ಶ್ರೀಲಂಕಾ ತಂಡದ ವಿರುದ್ಧ ಸರಣಿಯೂ ಇದೆ.
ಆಸೀಸ್‌ನಿಂದ ಕಿವೀಸ್‌ಗೆ
ಅಕ್ಟೋಬರ್ ಹಾಗೂ ನವೆಂಬರ್ ನಡುವೆ ಆಸ್ಟ್ರೇಲಿಯಾದಲ್ಲಿ ಟಿ೨ಂ ವಿಶ್ವ ಕಪ್ ನಡೆಯಲಿದೆ. ಅದನ್ನು ಮುಗಿಸುವ ಭಾರತ ತಂಡ ನೇರವಾಗಿ ನ್ಯೂಜಿಲೆಂಡ್‌ಗೆ ತೆರಳಿದೆ. ನವೆಂಬರ್ ೧೮ರಂದು ಮೊದಲ ಟಿ೨೦ ಪಂದ್ಯಗಳ ಸರಣಿ ಆರಂಭವಾಗಲಿದ್ದು, ನವೆಂಬರ್ ೨೫ರಿಂದ ೩೦ರವರೆಗೆ ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಬಳಿಕ ಭಾರತ ತಂಡ ತವರಿಗೆ ಮರಳಲಿದ್ದು, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಬೇಕಾಗಿದೆ.
ಭಾರತ ತಂಡದ ವರ್ಷಾಂತ್ಯದ ತನಕ ಪಂದ್ಯಗಳು
ಜುಲೈ- ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯ, ೩ ಟಿ೨೦ ಹಾಗೂ ೩ ಏಕದಿನ ಪಂದ್ಯಗಳು
ಸೆಪ್ಟೆಂಬರ್- ಏಷ್ಯಾ ಕಪ್ ಟಿ೨೦
ಅಕ್ಟೋಬರ್- ನವೆಂಬರ್- ಆಸ್ಟ್ರೇಲಿಯಾದಲ್ಲಿ ಟಿ೨೦ ವಿಶ್ವ ಕಪ್
ನವೆಂಬರ್- ನ್ಯೂಜಿಲೆಂಡ್‌ನಲ್ಲಿ ೩ ಟಿ೨೦ ಹಾಗೂ ೩ ಏಕದಿನ ಪಂದ್ಯಗಳ ಸರಣಿ
ಡಿಸೆಂಬರ್- ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯಗಳ ಸರಣಿ
ಇದನ್ನೂ ಓದಿ: Team India ವಿರುದ್ಧದ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ: ಯಾರೆಲ್ಲ ಇದ್ದಾರೆ ತಂಡದಲ್ಲಿ