ಬೆಂಗಳೂರು : ಜನವರಿಯಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ತಂಡ ಪ್ರವಾಸ ಬರಲಿದ್ದು, ಆ ಸರಣಿಗೆ ಕಾಯಂ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆರಂಭಿಕ ಬ್ಯಾಟರ್ ಅವರು ಟಾಮ್ ಲೇಥಮ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಪಾಕಿಸ್ತಾನ ಪ್ರವಾಸ ಮುಗಿಸಿ ನೇರವಾಗಿ ಭಾರತಕ್ಕೆ ಬರಲಿರುವ ಕಿವೀಸ್ ತಂಡದಲ್ಲಿ ಹಲವು ಬದಲಾವಣೆಗಳಾಗಲಿವೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸೋಮವಾರ ಪಾಕಿಸ್ತಾನ ಹಾಗೂ ಭಾರತಕ್ಕೆ ಪ್ರವಾಸ ಮಾಡಲಿರುವ ತಂಡವನ್ನು ಪ್ರಕಟಿಸಿದೆ. ಪಾಕಿಸ್ತಾನದಲ್ಲಿ ಟೆಸ್ಟ್ ಹಾಗೂ ಏಕ ದಿನ ಸರಣಿಯಲ್ಲಿ ಆಡಲಿರುವ ನ್ಯೂಜಿಲೆಂಡ್ ಬಳಗ ಬಳಿಕ ಭಾರತಕ್ಕೆ ಬರಲಿದೆ. ಜನವರಿ 18ರಂದು ಭಾರತದಲ್ಲಿ ಸರಣಿ ಆರಂಭವಾಗಲಿದೆ.
ಭಾರತಕ್ಕೆ ಬರುವ ತಂಡದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ವೇಗದ ಬೌಲರ್ ಟಿಮ್ ಸೌಥೀಗೂ ವಿಶ್ರಾಂತಿ ನೀಡಲಾಗಿದೆ. ಪಾಕಿಸ್ತಾನ ವಿರುದ್ಧದ ಸರಣಿ ಮುಗಿಸಲಿರುವ ಕೇನ್ ವಿಲಿಯಮ್ಸನ್ ನೇರವಾಗಿ ತವರಿಗೆ ಮರಳಲಿದ್ದಾರೆ. ಉಳಿದ ಆಟಗಾರರು ಭಾರತದ ವಿಮಾನ ಏರಲಿದ್ದಾರೆ. ಸೌಥಿ ಬದಲಿಗೆ ಮಾರ್ಕ್ ಚಾಪ್ಮನ್ ಹಾಗೂ ಜಾಕೊಬ್ ಡೆಫಿಯನ್ನು ಆಯ್ಕೆ ಮಾಡಲಾಗಿದೆ. ಏಕ ದಿನ ತಂಡದಲ್ಲಿ ಸ್ಪಿನ್ನರ್ ಇಶ್ ಸೋಧಿ ಹಾಗೂ ಎಡಗೈ ಬ್ಯಾಟರ್ ಮಾರ್ಕ್ ನಿಕೋಲ್ಸ್ಗೂ ಅವಕಾಶ ನೀಡಲಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಏಕ ದಿನ ಸರಣಿ ಆಯೋಜನೆಗೊಂಡಿದೆ. ಬಳಿಕ ಟಿ20 ಸರಣಿ ನಡೆಯಲಿದೆ. ನ್ಯೂಜಿಲೆಂಡ್ನ ಕೋಚ್ ಗ್ಯಾರಿ ಸ್ಟಡ್ಗೂ ವಿಶ್ರಾಂತಿ ನೀಡಲಾಗಿದ್ದು, ಲೂಕ್ ರೋಂಚಿ ತರಬೇತುದಾರರಾಗಿ ಇರುತ್ತಾರೆ.
ಭಾರತ, ಪಾಕಿಸ್ತಾನ ಪ್ರವಾಸಕ್ಕೆ ನ್ಯೂಜಿಲೆಂಡ್ ತಂಡ
ಕೇನ್ ವಿಲಿಯಮ್ಸನ್ (ನಾಯಕ) (ಪಾಕಿಸ್ತಾನ ಪ್ರವಾಸಕ್ಕೆ ಮಾತ್ರ), ಟಾಮ್ ಲೇಥಮ್ (ನಾಯಕ – ಭಾರತ ಪ್ರವಾಸಕ್ಕೆ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್ (ಭಾರತ ಪ್ರವಾಸಕ್ಕೆ ಮಾತ್ರ), ಡೆವೊನ್ ಕಾನ್ವೆ, ಜಾಕೋಬ್ ಡಫಿ (ಭಾರತ ಪ್ರವಾಸಕ್ಕೆ ಮಾತ್ರ), ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ , ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಟಿಮ್ ಸೌಥಿ (ಪಾಕಿಸ್ತಾನ ಪ್ರವಾಸಕ್ಕೆ ಮಾತ್ರ).
ಇದನ್ನೂ ಓದಿ | INDvsBAN | ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯ; ಶುಬ್ಮನ್ ಗಿಲ್ ನಿರಾಳ