Site icon Vistara News

Neymar Fined: ಪರಿಸರ ನಿಯಮ ಉಲ್ಲಂಘನೆ; ನೇಮರ್​ಗೆ ಭಾರಿ ದಂಡದ ಬಿಸಿ

Neymar

ಬ್ರಸಿಲ್ಲ: ಬ್ರೆಜಿಲ್‌ ಫುಟ್ಬಾಲ್​ ತಂಡದ ಸ್ಟಾರ್‌ ಆಟಗಾರ ನೇಮರ್(Neymar Fined)​ ಅವರು ಮನೆ ನಿರ್ಮಾಣ ವೇಳೆ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ 3.33 ಮಿಲಿಯನ್‌ ಡಾಲರ್‌ ದಂಡ ವಿಧಿಸಲಾಗಿದೆ. ಈ ವಿಚಾರವನ್ನು ಬ್ರೆಜಿಲ್‌ನ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಬ್ರೆಜಿಲ್‌ನ ಕರಾವಳಿ ಪ್ರದೇಶದಲ್ಲಿ ಮನೆ ನಿರ್ಮಾಣದ ವೇಳೆ ನೇಮರ್(Neymar)​ ಕೆಲ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರು.

ನೇಮರ್ ಅವರು ಶುದ್ಧ ನೀರಿನ ಮೂಲಗಳ ಬಳಕೆ ಹಾಗೂ ಹರಿವು ಸೇರಿದಂತೆ ಇನ್ನೂ ಕೆಲ ಪರಿಸರ ಹಾನಿಯಾಗುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಇಲ್ಲಿನ ಸ್ಥಳೀಯ ಅಧಿಕಾರಿಗಳು ಆರೋಪಿಸಿದ್ದರು. ಇದೇ ವಿವಾರವಾಗಿ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಈ ವೇಳೆ ಪರಿಸರ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಹೀಗಾಗಿ ನೇಮರ್​ಗೆ ದಂಡ ವಿಧಿಸಲಾಗಿದೆ. ನೇಮರ್ ಅವರ ಐಷಾರಾಮಿ ನಿವಾಸವು ರಿಯೊ ಡಿ ಜನೈರೊ(Rio de Janeiro) ರಾಜ್ಯದ ಮಂಗರಟಿಬ ಪಟ್ಟಣದಲ್ಲಿ ಇದೆ.

“ನೇಮರ್​ ಅವರ ಅವರ ನಿವಾಸದಲ್ಲಿ ನಿರ್ಮಿತವಾಗಿರುವ ಕೃತಕ ಕೊಳ ಪರಿಸರಕ್ಕೆ ಹಾನಿ ಉಂಟುಮಾಡುವ ಎಲ್ಲ ಲಕ್ಷಣಗಳು ಕಂಡುಬಂದಿದೆ. ಹೀಗಾಗಿ ನಾವು ಅವರಿಗೆ ದಂಡ ವಿಧಿಸಿದ್ದೇವೆ” ಎಂದು ಮಂಗರಟಿಬದ ಪರಿಸರ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ Fifa World Cup| ಫಿಫಾ ವಿಶ್ವಕಪ್​ ಸೋಲಿನ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ನೇಮರ್​

ತೆರಿಗೆ ವಂಚನೆ ಆರೋಪದಲ್ಲಿಯೂ ದಂಡಕ್ಕೆ ಗುರಿಯಾಗಿದ್ದ ನೇಮರ್​

ಈ ಹಿಂದೆ 2016ರಲ್ಲಿ ನೇಮರ್​ ಅವರು ತೆರಿಗೆ ವಂಚನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರ ಅಂದಾಜು 342 ಕೋಟಿ ರೂ. ಅಧಿಕ ಮೌಲ್ಯದ ಆಸ್ತಿಯನ್ನು ಬ್ರೆಜಿಲ್ ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಜತೆಗೆ 7.7 ಕೋಟಿ ರೂ. ದಂಡವನ್ನು ವಿಧಿಸಲಾಗಿತ್ತು. ಜಪ್ತಿಯಾದ ವಸ್ತುಗಳಲ್ಲಿ ಬೃಹದಾಕಾರದ ದೋಣಿ , ವಿಮಾನ ಹಾಗೂ ಹಲವು ಬೆಲೆಬಾಳುವ ವಸ್ತುಗಳು ಸೇರಿದ್ದವು. ಇದಕ್ಕೂ ಮುನ್ನ ಅವರ ಕುಟುಂಬ ಉದ್ಯಮದಲ್ಲಿ ಸುಮಾರು 63 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ತೆರಿಗೆ ವಂಚಿಸಿರುವ ಕುರಿತು ಆರೋಪ ಕೇಳಿ ಬಂದಿತ್ತು. 2011 ಮತ್ತು 2013ರ ಅವಧಿಯಲ್ಲಿ ಬ್ರೆಜಿಲ್‌ನ ಸ್ಯಾಂಟೋಸ್ ಕ್ಲಬ್ ಪ್ರತಿನಿಧಿಸುತ್ತಿದ್ದ ನೆಯ್ಮಾರ್ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳನ್ನು ಅಲ್ಲಗಳೆದಿದ್ದರು.

Exit mobile version