Site icon Vistara News

Nicholas Pooran: ಐಸಿಸಿ ನಿಯಮ ಉಲ್ಲಂಘನೆ; ಮೂರನೇ ಪಂದ್ಯಕ್ಕೆ ಪೂರನ್​ ಲಭ್ಯವೇ?

Nicholas Pooran (L) of the West Indies chats with umpires Leslie Reifer Jr

ಗಯಾನಾ: ಭಾರತ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ(IND vs WI T20) ಅಂಪೈರ್​ ಜತೆ ವಾಗ್ವಾದ ನಡೆಸಿ ಐಸಿಸಿ(ICC) ನೀತಿ ಸಂಹಿತೆಯ(Code Of Conduct) 1 ನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ವಿಂಡೀಸ್​ನ ನಿಕೋಲಸ್ ಪೂರನ್‌ಗೆ(Nicholas Pooran) ಪಂದ್ಯ ಶುಲ್ಕದ ಶೇ. 15 ಪ್ರತಿಶತ ದಂಡ ವಿಧಿಸಲಾಗಿದೆ. ಈ ಪಂದ್ಯದ ಗೆಲುವುವಿನ ರುವಾರಿ ಆಗಿದ್ದ ಅವರಿಗೆ ಇದೀಗ ದಂಡದ ಬಿಸಿ ತಟ್ಟಿದೆ.

ಭಾರತದ ಇನಿಂಗ್ಸ್​ನ 4ನೇ ಓವರ್‌ನಲ್ಲಿ ಪೂರನ್​ ಎಲ್‌ಬಿಡಬ್ಲ್ಯು ನಿರ್ಧಾರವನ್ನು ಪರಿಶೀಲಿಸಿದ ವೇಳೆ ಈ ಘಟನೆ ಸಂಭವಿಸಿದೆ. ಅಂಪೈರ್​ಗಳ ತೀರ್ಪಿಗೆ ಅಸಮಾದಾನಗೊಂಡ ಪೂರನ್​ ಸಿಟ್ಟಿನಲ್ಲಿ ಬೈದುದ್ದಾರೆ. ಈ ಕಾರಣಕ್ಕೆ ಅವರ ವಿರುದ್ಧ ಐಸಿಸಿ ಈ ಕ್ರಮ ಕೈಗೊಂಡಿದೆ. ಐಸಿಸಿ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ನಿಕೋಲಸ್ ಪೂರನ್​ಗೆ ಈ ದಂಡನೆ ವಿಧಿಸಲಾಗಿದ್ದು, ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವುದನ್ನು ಈ ಕಾನೂನು ಬಿಂಬಿಸುತ್ತದೆ.

ಸದ್ಯ ಪೂರನ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮತ್ತು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಪ್ರಸ್ತಾಪಿಸಿದ ವಾಗ್ದಂಡನೆಯ ಅನುಮತಿಯನ್ನು ಒಪ್ಪಿಕೊಂಡಿರುವ ಕಾರಣ ಔಪಚಾರಿಕ ವಿಚಾರಣೆಯಿಂದ ಹೊರಗುಳಿಸಿದಿದ್ದಾರೆ. ದಂಡದ ಜತೆಗೆ ದುರ್ವರ್ತನೆ ತೋರಿದಕ್ಕೆ ಒಂದು ಡಿಮೆರಿಟ್ ಅಂಕವನ್ನು ಕಡಿತಗೊಳಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಪೂರನ್​ ಅವರ ಮೊದಲ ಅಪರಾಧವಾಗಿದೆ. ಸದ್ಯ ಮೊದಲ ತಪ್ಪು ಇದಾದ ಕಾರಣದಿಂದ ಅವರು ಪಂದ್ಯ ನಿಷೇಧದ ಶಿಕ್ಷಿಯಿಂದ ಪಾರಾಗಿದ್ದಾರೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲು ಯಾವುದೇ ಅಡೆತಡೆಗಳಿಲ್ಲ.

ಭಾರತದ ಗೆಲುವು ಕಸಿದ ಪೂರನ್​

ದ್ವಿತೀಯ ಪಂದ್ಯದಲ್ಲಿ ವಿಂಡೀಸ್​ ತಂಡ 2 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಗೆಲುವಿನಲ್ಲಿ ನಿಕೋಲಸ್​ ಪೂರನ್​ ಪ್ರಮುಖ ಪಾತ್ರವಹಿಸಿದ್ದರು. ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 20 ಓವರ್​ಗಳಲ್ಲಿ ಭಾರತ 7 ವಿಕೆಟಿಗೆ 152 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ 18.5 ಓವರ್‌ಗಳಲ್ಲಿ 8 ವಿಕೆಟಿಗೆ 155 ರನ್‌ ಬಾರಿಸಿತು. ತಿಲಕ್‌ ವರ್ಮ ಅವರ ಅರ್ಧ ಶತಕವೊಂದೇ ಭಾರತದ ಸರದಿಯ ಆಕರ್ಷಣೆ ಆಗಿತ್ತು. ಚೇಸಿಂಗ್​ ವೇಳೆ ಪೂರನ್​ ಅವರು ಬಿರುಸಿನ ಬ್ಯಾಟಿಂಗ್‌ ನಡೆಸಿ ವಿಂಡೀಸ್​ಗೆ ಗೆಲುವು ತಂದಿಟ್ಟರು. 40 ಎಸೆತಗಳಿಂದ 67 ರನ್‌ ಬಾರಿಸಿ ಪಂದ್ಯಕ್ಕೆ ತಿರುವು ಒದಗಿಸಿದರು. ಅವರ ಈ ಅರ್ಧಶತಕ ಇನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿದಿತ್ತು. ಇದೀಗ ಮಂಗಳವಾರ ನಡೆಯುವ ಮೂರನೇ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್​ ಪ್ರತಾಪ ಮುಂದುವರಿಯುವ ಸಾಧ್ಯತೆ ಇದೆ. ಅವರನ್ನು ಬೇಗನೇ ಔಟ್​ ಮಾಡದೇ ಹೋದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಬಹುದು.

ಇದನ್ನೂ ಓದಿ IND vs WI: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ; ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ!

ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ

ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಅಧಿಕವಾಗಿದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಕುಲ್​ದೀಪ್​ ಯಾದವ್​ ಅವರು ಮತ್ತೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರ ಬದಲಾಗಿ ದ್ವಿತೀಯ ಪಂದ್ಯದಲ್ಲಿ ಆಡಿದ ರವಿ ಬಿಷ್ಣೋಯಿ ಹೊರಗುಳಿಯುವುದು ಖಚಿತ. ಹಿಂದಿನ ಪಂದ್ಯದಲ್ಲಿ ಅವರು ದುಬಾರಿಯಾಗಿ ಪರಿಣಮಿಸಿದ್ದರು. ಮುಖೇಶ್​ ಕುಮಾರ್​ ಬದಲು ಅವೇಶ್​ ಖಾನ್​ ಆಡುವ ಸಾಧ್ಯತೆ ಇದೆ. ಬ್ಯಾಟಿಂಗ್​ ವಿಭಾಗದಲ್ಲಿ ಸಂಜು ಸ್ಯಾಮ್ಸನ್​ ಕೈ ಬಿಟ್ಟು ಯಶಸ್ವಿ ಜೈಸ್ವಾಲ್​ ಇನಿಂಗ್ಸ್​ ಆರಂಭಿಸುವ ಸೂಚನೆ ಇದೆ. ಏಕೆಂದರೆ ಸಂಜು ಆಡಿದ ಎರಡೂ ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಜತೆಗೆ ತಂಡದ ಸೋಲಿಗೆ ಬ್ಯಾಟಿಂಗ್​ ವೈಫಲ್ಯವೇ ಪ್ರಮುಖ ಕಾರಣ ಎಂದು ನಾಯಕ ಹಾರ್ದಿಕ್​ ಪಾಂಡ್ಯ ಈಗಾಗಲೆ ತಿಳಿಸಿದಿದ್ದಾರೆ. ಹೀಗಾಗಿ ಬ್ಯಾಟಿಂಗ್​ ವಿಭಾಗದಲ್ಲಿ ದೊಡ್ಡ ಮಟ್ಟದ ಬದಲಾವಣೆಯೊಂದನ್ನು ನಿರೀಕ್ಷೆ ಮಾಡಬಹುದು.

Exit mobile version