Site icon Vistara News

Nicholas Pooran: ಚೆಂಡಿನೇಟಿಗೆ ಚರ್ಮ ಕಿತ್ತು ಬಂದರೂ ತಂಡಕ್ಕೆ ಗೆಲುವು ತಂದುಕೊಟ್ಟ ಪೂರನ್​

Nicholas Pooran displays his injuries in a social media post, the southpaw in action during the fifth T20I

ಫ್ಲೋರಿಡಾ: ಭಾನುವಾರ ನಡೆದ ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ(West Indies vs India, 5th T20) ವಿಂಡೀಸ್​ 8 ವಿಕೆಟ್​ಗಳ ಗೆಲುವು ಸಾಧಿಸಿ ಸರಣಿ ಜಯಿಸಿ ಸಂಭ್ರಮಿಸಿತ್ತು. ಆದರೆ ಈ ಪಂದ್ಯದಲ್ಲಿ ಗಾಯದ ನಡುವೆಯೂ ಬ್ಯಾಟಿಂಗ್​ ನಡೆಸಿ ತಂಡಕ್ಕೆ ಗೆಲುವು ತಂದು ಕೊಟ್ಟ ನಿಕೋಲಸ್​ ಪೂರನ್(Nicholas Pooran)​ ಅವರು ತಮ್ಮ ಗಾಯದ ಫೋಟೊವನ್ನು ಪ್ರದರ್ಶಿಸಿದ್ದಾರೆ.

ನಿಕೋಲಸ್‌ ಪೂರನ್‌ ಅವರು ಈ ಪಂದ್ಯದಲ್ಲಿ ಎರಡು ಬಾರಿ ಬಲವಾದ ಚೆಂಡಿನಲ್ಲಿ ಪೆಟ್ಟು ತಿಂದರು(nicholas pooran injury). ಚೆಂಟಿನ ಏಟಿಗೆ ಅವರ ಚರ್ಮ ಕಿತ್ತುಬಂದಿದೆ. ಆದರೂ ಛಲ ಬಿಡದ ಅವರು 4 ಸಿಕ್ಸರ್​ ಬಾರಿಸಿ 47 ರನ್​ ಸಿಡಿಸಿದರು. ಅವರ ಗಾಯದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಿತ್ತು ಹೋದ ಚರ್ಮ

ಮೊದಲ ಚೆಂಡಿನೇಟು ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್(Arshdeep Singh)​ ಅವರ ಬೌಲಿಂಗ್​ನಲ್ಲಿ ಬಿದ್ದರೆ, ಮುಂದಿನ ಹೊಡೆದ ತನ್ನ ತಂಡದ ಸಹ ಆಟಗಾರ ಬ್ರಾಂಡನ್ ಕಿಂಗ್(brandon king) ಅವರಿಂದ ಬಿತ್ತು. ಬಲವಾಗಿ ಬೇಸಿದ ಚೆಂಡು ನಾನ್​ಸ್ಟ್ರೈಕ್​ನಲ್ಲಿದ್ದ ಪೂರನ್​ನ ಕೈಗೆ ಬಡಿದಿದೆ. ಅರ್ಶ್​ದೀಪ್​ ಸಿಂಗ್​ ಎಸೆತ ಹೊಡ್ಡೆಯ ಭಾಗಕ್ಕೆ ಬಡಿದು ಚರ್ಮ ಕಿತ್ತು ಬಂದಿದೆ.

ಈ ಎರಡೂ ಚೆಂಡುಗಳ ಗುರುತು ನಿಕೋಲಸ್‌ ಪೂರನ್‌ ಅವರ ಹೊಟ್ಟೆ ಹಾಗೂ ಕೈ ಮೇಲೆ ಕೆಂಪು ಬಣ್ಣದಿಂದ ಕಾಣುತ್ತಿದೆ. ಇದರ ಹೊರತಾಗಿಯೂ ಬ್ಯಾಟಿಂಗ್‌ ಮುಂದುವರಿಸಿದ ಅವರು 35 ಎಸೆತಗಳಲ್ಲಿ 47 ರನ್‌ ಸಿಡಿಸಿದರು. 5 ಪಂದ್ಯಗಳಲ್ಲಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರಿದ ಪೂರನ್​ ಒಟ್ಟು 176 ರನ್​ ಬಾರಿಸಿದ್ದಾರೆ.

ಚೆಂಡಿನೇಟು ನೀಡಿದ ಆಟಗಾರರಿಗೆ ಧನ್ಯವಾದ

ಪಂದ್ಯದ ಬಳಿಕ ತಮ್ಮ ದೇಹದ ಮೇಲಿದ್ದ ಚೆಂಡಿನ ಏಟುಗಳನ್ನು ಪ್ರದರ್ಶಿಸಿದ ಪೂರನ್​, ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿ ‘ಧನ್ಯದಾವ ಕಿಂಗ್‌ ಹಾಗೂ ಅರ್ಶದೀಪ್​ ಸಿಂಗ್‌ ಎಂದು ಶೀರ್ಷಿಕೆ ಬರೆದಿದ್ದಾರೆ.

ಪಂದ್ಯ ಸೋತ ಭಾರತ

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 165 ರನ್‌ ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಗುರಿ ಬೆನ್ನಟ್ಟಿದ ವಿಂಡೀಸ್‌ ಬ್ರಾಂಡನ್ ಕಿಂಗ್ ಮತ್ತು ನಿಕೋಲಸ್​ ಪೂರನ್​ ಅವರ ಅತ್ಯಮೋಘ ಆಟದ ನೆರವಿನಿಂದ 18 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 171 ರನ್ ಗಳಿಸುವ ಮೂಲಕ ಭರ್ಜರಿ ಜಯ ಒಲಿಸಿಕೊಂಡಿತು.

ಚೇಸಿಂಗ್​ ವೇಳೆ ಬ್ರಾಂಡನ್ ಕಿಂಗ್ ಔಟಾಗದೆ 85 ರನ್ ಬಾರಿಸಿದರು .55 ಎಸೆತಗಳಲ್ಲಿ5 ಬೌಂಡರಿ ಮತ್ತು 6ಆಕರ್ಷಕ ಸಿಕ್ಸರ್ ಸಿಡಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ನಿಕೋಲಸ್ ಪೂರನ್ 47 ರನ್ ಗಳಿಸಿ ಔಟಾದರು. ಕೈಲ್ ಮೇಯರ್ಸ್ 10, ಶಾಯ್ ಹೋಪ್ ಔಟಾಗದೆ 22 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಲ್ಕು ವಿಕೆಟ್ ಕಿತ್ತ ರೊಮಾರಿಯೋ ಶೆಫರ್ಡ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ನಿಕೋಲಸ್ ಪೂರನ್ ಪಾಲಾಯಿತು.

ಇದನ್ನೂ ಓದಿ ind vs wi : ವಿಂಡೀಸ್ ವಿರುದ್ಧ ಸೋಲಿನ ಬಳಿಕ ಟೀಮ್ ಇಂಡಿಯಾ ಬೆಂಡೆತ್ತಿದ ವೆಂಕಟೇಶ್​ ಪ್ರಸಾದ್​

ಭಾರತ ಪರ ಸೂರ್ಯಕುಮಾರ್​ ಯಾದವ್​ 61 ರನ್​ಗಳಿಸಿ ತಂಡವನ್ನು ನೂರರ ಗಡಿ ದಾಟಿಸಿದರು. ಇವರನ್ನು ಹೊರತುಪಡಿಸಿದರೆ 27 ರನ್​ಗಳಿಸಿದ ತಿಲಕ್​ ವರ್ಮ ಅವರದ್ದೇ ಹೆಚ್ಚಿನ ಗಳಿಕೆಯಾಗಿದೆ. ಉಳಿದಂತೆ ಎಲ್ಲ ಆಟಗಾರರು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು.

Exit mobile version