Site icon Vistara News

Nicholas Pooran | ಟಿ20 ವಿಶ್ವ ಕಪ್​ನಲ್ಲಿ ವಿಂಡೀಸ್​ ಕಳಪೆ ಪ್ರದರ್ಶನ; ನಾಯಕತ್ವ ತೊರೆದ ನಿಕೋಲಸ್​ ಪೂರನ್​

Nicholas Pooran steps down as West Indies' T20I and ODI captain

ಅಂಟಿಗುವಾ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ20 ವಿಶ್ವ ಕಪ್​ ಟೂರ್ನಿಯಲ್ಲಿ ತಂಡ ಕಳಪೆ ಪ್ರದರ್ಶನ ತೋರಿದ ಕಾರಣದಿಂದ ನಿಕೋಲಸ್​ ಪೂರನ್​(Nicholas Pooran) ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ವಿಚಾರವನ್ನು ಪೂರನ್ ಸಾಮಾಜಿಕ ಜಾಲತಾಣದಲ್ಲಿ​ ಖಚಿತ ಪಡಿಸಿದ್ದಾರೆ. ಟಿ20 ವಿಶ್ವ ಕಪ್​ನಲ್ಲಿ ವೆಸ್ಟ್​ ಇಂಡೀಸ್​ ತಂಡ ಅರ್ಹತಾ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ವೆಸ್ಟ್ ಇಂಡೀಸ್ ತಂಡದ ನಾಯಕನಾಗಿದ್ದ ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಪೂರನ್ ವೈಟ್‌ಬಾಲ್ ತಂಡದ ನಾಯಕನಾಗಿ ನೇಮಕಗೊಂಡಿದ್ದರು. ಜತೆಗೆ ಟಿ20 ವಿಶ್ವ ಕಪ್ ಹಾಗೂ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕ ದಿನ ಕ್ರಿಕೆಟ್ ವಿಶ್ವ ಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೆಸ್ಟ್​ ಇಂಡೀಸ್​ ಕ್ರಿಕೆಟ್ ಮಂಡಳಿ ಪೂರನ್ ಅವರನ್ನು ನಾಯಕನ್ನಾಗಿ ನೇಮಕಗೊಳಿಸಿತ್ತು. ಆದರೆ ನಾಯಕತ್ವ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಪೂರನ್ ಆ ಸ್ಥಾನವನ್ನು ತೊರೆಯುವಂತಾಗಿದೆ. ಇದೀಗ ಪೂರನ್​ ರಾಜಿನಾಮೆಯಿಂದ ವಿಂಡೀಸ್​ ನೂತನ ನಾಯಕನ ಹುಡುಕಾಟದಲ್ಲಿ ತೊಡಗಿದೆ.

ಇದನ್ನೂ ಓದಿ | INDvsNZ | ಭಾರತ- ನ್ಯೂಜಿಲೆಂಡ್ ಪಂದ್ಯದ ಪಿಚ್‌ ರಿಪೋರ್ಟ್‌, ಪಂದ್ಯದ ಸಮಯ ಇಲ್ಲಿದೆ

Exit mobile version