Site icon Vistara News

ಏಷ್ಯನ್‌ ಗೇಮ್ಸ್‌; ಭಾರತದ ಬಾಕ್ಸಿಂಗ್​ ತಂಡ ಪ್ರಕಟ; ನಿಖತ್​ ಜರೀನ್​ ಸಾರಥ್ಯ

indian boxer nikhat zareen

ನವದೆಹಲಿ: ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ(Asian Games) ಭಾರತದ ಬಾಕ್ಸಿಂಗ್‌ ತಂಡ(Indian boxing team) ಪ್ರಕಟಗೊಂಡಿದೆ. 2 ಬಾರಿ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌(Nikhat Zareen) ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ಜತೆಗೆ ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗಹೈನ್‌(Lovlina Borgohain) ಕೂಡ ಕಣಕ್ಕಿಳಿಯಲಿದ್ದಾರೆ. ಉಭಯ ಆಟಗಾರ್ತಿಯ ಮೇಲೆ ಪದಕ ಬರವಸೆಯನ್ನು ಇಡಲಾಗಿದೆ. ಈ ಟೂರ್ನಿ ಚೀನಾದ ಹ್ಯಾಂಗ್ಝೂನಲ್ಲಿ(Hangzhou in China) ನಡೆಯಲಿದೆ.

ಮಹಿಳೆಯರ ವಿಭಾಗದಲ್ಲಿ ಜಾಸ್ಮೀನ್‌, ಅರುಂಧತಿ ಚೌಧರಿ, ಪ್ರೀತಿ ಪವಾರ್‌, ಪರ್ವೀನ್‌ ಹೂಡಾ ಕೂಡಾ ಕಣಕ್ಕಿಳಿಯಲಿದ್ದಾರೆ. ಅಚ್ಚರಿ ಎಂದರೆ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಅಮಿತ್‌ ಪಂಘಲ್‌, ವಿಶ್ವ ಚಾಂಪಿಯನ್‌ ನೀತು ಗಂಗಾಸ್‌ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಪುರುಷರ ವಿಭಾಗದಲ್ಲಿ ದೀಪಕ್‌ ಭೋರಿಯ ತಂಡ ಮುನ್ನಡೆಸಲಿದ್ದು, ಸಚಿನ್‌, ಶಿವ ಥಾಪ, ನಿಶಾಂತ್‌ ದೇವ್‌, ಲಕ್ಷ್ಯ ಚಹರ್‌, ಸಂಜೀತ್‌ ಹಾಗೂ ನರೇಂದರ್‌ ಬರ್ವಾಲ್‌ ಸಹ ಆಡಲಿದ್ದಾರೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಕೂಟವಾಗಿರುವ ಕಾರಣ ಏಷ್ಯಾದ ಬಾಕ್ಸರ್‌ಗಳಿಗೆ ಇದು ಮಹತ್ವದ ಟೂರ್ನಿಯಾಗಿದೆ.

ಇದನ್ನೂ ಓದಿ Mahindra Thar : ವಿಶ್ವ ಚಾಂಪಿಯನ್​ನಿಖತ್​ಗೆ ಥಾರ್​ ಕಾರು ಗಿಫ್ಟ್​ ಕೊಟ್ಟ ಮಹೀಂದ್ರಾ

ಹೊಸ ನೀತಿಯಿಂದ ಅವಕಾಶ ವಂಚಿತವಾದ ಅಮಿತ್‌

ಭಾರತ ಬಾಕ್ಸಿಂಗ್‌ ಫೆಡರೇಷನ್‌ ಹೊಸ ಆಯ್ಕೆ ನೀತಿಯ ಪ್ರಕಾರ ಬಾಕ್ಸರ್‌ ಒಬ್ಬರ ಸಾಮರ್ಥ್ಯವನ್ನು 2 ರಿಂದ 3 ವಾರಗಳ ಅವಧಿಯಲ್ಲಿ ವಿವಿಧ ಮಾನದಂಡಗಳಡಿ ಅಳೆಯಲಾಗುತ್ತದೆ. ಇದರಡಿ ದೀಪಕ್‌ ಅವರು ಮೇ ತಿಂಗಳಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ಆಯ್ಕೆಯಲ್ಲೂ, ಅಮಿತ್‌ ಪಂಘಲ್‌ ಅವರಿಗಿಂತ ಮುಂದಿದ್ದರು. ಹೀಗಾಗಿ ಅಮಿತ್‌ ಅವರು ಈ ಟೂರ್ನಿಗೆ ಆಯ್ಕೆಯಾಗುವಲ್ಲಿ ವಿಫಲರಾದರು.

ಭಾರತ ಬಾಕ್ಸಿಂಗ್​ ತಂಡ

ಮಹಿಳೆಯರ ತಂಡ: ನಿಖತ್‌ ಝರೀನ್‌ (51 ಕೆ.ಜಿ.), ಪ್ರೀತಿ ಪವಾರ್ (54 ಕೆ.ಜಿ), ಪರ್ವೀನ್‌ ಹೂಡ (57 ಕೆ.ಜಿ), ಜೈಸ್ಮಿನ್‌ ಲಂಬೋರಿಯಾ (60 ಕೆ.ಜಿ), ಅರುಂಧತಿ ಚೌಧರಿ (66 ಕೆ.ಜಿ), ಲವ್ಲಿನಾ ಬೊರ್ಗೊಹೈನ್‌ (75 ಕೆ.ಜಿ)

ಪುರುಷರ ತಂಡ: ದೀಪಕ್ ಭೋರಿಯಾ (51 ಕೆ.ಜಿ), ಸಚಿನ್‌ ಸಿವಾಚ್ (57 ಕೆ.ಜಿ), ಶಿವ್ ಥಾಪಾ (63.5 ಕೆ.ಜಿ), ನಿಶಾಂತ್ ದೇವ್ (71 ಕೆ.ಜಿ), ಲಕ್ಷ್ಯ ಚಾಹರ್ (80 ಕೆ.ಜಿ), ಸಂಜೀತ್‌ (92 ಕೆ.ಜಿ) ಮತ್ತು ನರೇಂದರ್‌ ಬೆರ್ವಾಲ್ (+92 ಕೆ.ಜಿ).

Exit mobile version