Site icon Vistara News

IPL 2024 : 18 ಸಾವಿರ ಮಕ್ಕಳಿಗೆ ಉಚಿತವಾಗಿ ಐಪಿಎಲ್ ಪಂದ್ಯ​ ತೋರಿಸಿದ ನೀತಾ ಅಂಬಾನಿ

IPL 2024

ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನ (IPL 2024) ಈ ಋತುವಿನ ಮೊದಲ ಗೆಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್‌ನ ಈ ಗೆಲುವು ವಿಶೇಷವಾಗಿತ್ತು. ಯಾಕೆಂದರೆ ಮುಂಬೈನ ಮೂಲೆ ಮೂಲೆಯಿಂದ 18,000 ಮಕ್ಕಳು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ ತಂಡವನ್ನು ಹುರಿದುಂಬಿಸಲು ವಾಖೆಂಡೆ ಸ್ಟೇಡಿಯಮ್​ನಲ್ಲಿ ಸೇರಿದ್ದರು. ಇದು ರಿಲಯನ್ಸ್ ಫೌಂಡೇಷನ್‌ನ ಉಪಕ್ರಮವಾಗಿದ್ದು ‘ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ’ (ಎಜುಕೇಷನ್ ಆ್ಯಂಡ್​ ಸ್ಪೋರ್ಟ್ಸ್ ಫಾರ್ ಆಲ್) ಯೋಜನೆಯಡಿ ಮಕ್ಕಳನ್ನು ಈ ಕ್ರಿಕೆಟ್ ಪಂದ್ಯ ವೀಕ್ಷಿಸಲು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಈ ರೋಚಕ ಗೆಲುವಿನ ನಂತರ ಮುಂಬೈ ಇಂಡಿಯನ್ಸ್ ಮಾಲೀಕರಾದಂಥ ನೀತಾ ಅಂಬಾನಿ ಮತ್ತು ಸಚಿನ್ ತೆಂಡೂಲ್ಕರ್ ಜತೆಗೆ ಈ ಕುರಿತು ಮಾತನಾಡಿದರು.

“ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ” ಎಂಬ ಅಭಿಯಾನದ ಕುರಿತು ಮಾತನಾಡಿದ ನೀತಾ ಅಂಬಾನಿ, “ವಿವಿಧ ಎನ್‌ಜಿಒಗಳಿಂದ 18,000 ಮಕ್ಕಳು ಸ್ಟ್ಯಾಂಡ್‌ನಲ್ಲಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಕ್ರೀಡೆಯಲ್ಲಿ ತಾರತಮ್ಯವಿಲ್ಲ ಮತ್ತು ಪ್ರತಿಭೆ ಎಲ್ಲಿಂದಾದರೂ ಬರಬಹುದು ಎಂದು ನಾನು ನಂಬುತ್ತೇನೆ. ಈ ಮಕ್ಕಳಲ್ಲಿ ಒಬ್ಬರು ಆಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಸಾಧ್ಯತೆಗಳಿವೆ. ಅವರು ಅನೇಕ ನೆನಪುಗಳು ಮತ್ತು ಅವರ ಕನಸುಗಳೊಂದಿಗೆ ವಾಪಸಾಗುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದರು.

ಸಚಿನ್ ತೆಂಡೂಲ್ಕರ್ ವಾಂಖೆಡೆ ಸ್ಟೇಡಿಯಂನ ಮೊದಲ ನೆನಪುಗಳ ಬಗ್ಗೆ ಮಾತನಾಡಿದರು. ನಾವು ಉತ್ತಮ ನಾಳೆಯನ್ನು ಬಯಸಿದರೆ ಇಂದು ಕೆಲಸ ಮಾಡಬೇಕು. ನೀತಾ ಅಂಬಾನಿ ಅವರ ಮಾರ್ಗದರ್ಶನದಲ್ಲಿ ರಿಲಯನ್ಸ್ ಫೌಂಡೇಷನ್ ಪ್ರಪಂಚದಾದ್ಯಂತ ಅನೇಕ ಮಕ್ಕಳಿಗೆ ಅವಕಾಶಗಳನ್ನು ಒದಗಿಸಿದೆ. ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಅವರು ಇದನ್ನು ಮುಂದುವರಿಸಲಿ ಎಂದು ಹಾರೈಸುತ್ತೇನೆ ಎಂಬುದಾಗಿ ಹೇಳಿದರು.

ಇದನ್ನೂ ಓದಿ: Virat kohli : ಕೊಹ್ಲಿಯ ಆಟದ ಕುರಿತ ಅಪ್​ಡೇಟ್​ ನೀಡಿದ ಆರ್​ಸಿಬಿ ಕೋಚ್​ ಫ್ಲವರ್​

ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ ಅಭಿಯಾನದ ಬಗ್ಗೆ ಮಾತನಾಡಿದ ನೀತಾ ಅಂಬಾನಿ, “ನಾವು 14 ವರ್ಷಗಳ ಹಿಂದೆ ಈ ಉಪಕ್ರಮ ಪ್ರಾರಂಭಿಸಿದ್ದೇವೆ. ಇದು ಭಾರತದಾದ್ಯಂತ 2 ಕೋಟಿ 20 ಲಕ್ಷ ಮಕ್ಕಳನ್ನು ತಲುಪಿದೆ. ಪ್ರತಿ ಮಗುವಿಗೆ ಆಟವಾಡುವ ಮತ್ತು ಶಿಕ್ಷಣದ ಹಕ್ಕು ಇರಬೇಕು ಎಂದು ಸಚಿನ್ ಅವರು ಹೇಳಿದಂತೆ, ನಾನು ಕೂಡ ನಂಬುತ್ತೇನೆ. ಮಕ್ಕಳು ತರಗತಿಗಳಲ್ಲಿ ಕಲಿಯುವಷ್ಟೇ ಆಟದ ಮೈದಾನದಲ್ಲಿ ಕಲಿಯುತ್ತಾರೆ. ಕ್ರೀಡೆಯು ಅವರಿಗೆ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಕಲಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ಗೆಲುವು ಮತ್ತು ಸೋಲುಗಳನ್ನು ಹೇಗೆ ಸ್ವೀಕರಿಸಬೇಕೆಂದು ಕಲಿಸುತ್ತದೆ ಎಂದರು.

ನೀತಾ ಅಂಬಾನಿ ಅವರ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಷನ್‌ನ ಎಜುಕೇಷನ್ ಆ್ಯಂಡ್​ ಸ್ಪೋರ್ಟ್ಸ್ ಫಾರ್ ಆಲ್ ಉಪಕ್ರಮ ವಾಸ್ತವವಾಗಿ ಪ್ರಾರಂಭಿಸಲಾಗಿದೆ. ರಿಲಯನ್ಸ್ ಫೌಂಡೇಷನ್ ತನ್ನ ವ್ಯಾಪಕವಾದ ‘ವಿ ಕೇರ್’ ದೃಷ್ಟಿಕೋನದಿಂದ ಪ್ರೇರಿತವಾಗಿದೆ. ರಿಲಯನ್ಸ್ ಫೌಂಡೇಷನ್ ವರ್ಷವಿಡೀ ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಫಾರ್ ಆಲ್ ಮೂಲಕ ಶಿಕ್ಷಣ ಮತ್ತು ಕ್ರೀಡಾ ವಲಯದಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ರಿಲಯನ್ಸ್ ಫೌಂಡೇಷನ್ ಭಾರತದಾದ್ಯಂತ 2 ಕೋಟಿ 20 ಲಕ್ಷಕ್ಕೂ ಹೆಚ್ಚು ಮಕ್ಕಳ ಜೀವನದ ಮೇಲೆ ಪ್ರಭಾವ ಬೀರಿದೆ

Exit mobile version