ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್ನ(icc world cup 2023) ಉದ್ಘಾಟನ ಪಂದ್ಯವಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅಧಿಕೃತ ಫೀಲ್ಡ್ ಅಂಪೈರ್ಗಳನ್ನು ಆಯ್ಕೆ ಮಾಡಲಾಗಿದೆ. ಭಾರತದ ನಿತಿನ್ ಮೆನನ್(Nitin Menon) ಮತ್ತು ಶ್ರೀಲಂಕಾದ ಕುಮಾರ ಧರ್ಮಸೇನ(Kumar Dharmasena) ಅವರು ಈ ಪಂದ್ಯದಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜಾವಗಲ್ ಶ್ರೀನಾಥ್ ಪಂದ್ಯದ ರೆಫ್ರಿಯಾಗಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಿವೀಸ್ ವಿರುದ್ಧ ಈ ಪಂದ್ಯ ಅಕ್ಟೋಬರ್ 5ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಒಟ್ಟು 16 ಅಂಪೈರ್‌ಗಳು
ವಿಶ್ವಕಪ್ನಲ್ಲಿ ಒಟ್ಟು 16 ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಇದರಲ್ಲಿ 12 ಮಂದಿ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್‌ಗಳು ಉಳಿದ 4 ಮಂದಿ ಐಸಿಸಿ ಎಮರ್ಜಿಂಗ್ ಪ್ಯಾನಲ್ನ ಅಂಪೈರ್ಗಳಾಗಿದ್ದಾರೆ. ಅನುಭವಿ ಅಂಪೈರ್‌ಗಳ ಪಟ್ಟಿಯಲ್ಲಿ 2019ರ ವಿಶ್ವಕಪ್ ಫೈನಲ್‌ನಲ್ಲಿ ಕಾರ್ಯ ನಿರ್ವಹಿಸಿದ್ದ ನಾಲ್ಕು ಅಂಪೈರ್‌ಗಳ ಪೈಕಿ ಮೂವರಿಗೆ ಸ್ಥಾನ ಸಿಕ್ಕಿದೆ. ಇವರುಗಳೆಂದರೆ ಧರ್ಮಸೇನಾ, ಮರೈಸ್ ಎರಾಸ್ಮಸ್ ಮತ್ತು ರಾಡ್ ಟಕರ್. ಇದೇ ವರ್ಷದ ಮಾರ್ಚ್‌ನಲ್ಲಿ ಎಲೈಟ್ ಪ್ಯಾನೆಲ್‌ನಿಂದ ಕೆಳಗಿಳಿದ ಅಲೀಮ್ ದಾರ್ ಅವರನ್ನು ಕೈಬಿಡಲಾಗಿದೆ. ನಿತಿನ್ ಮೆನನ್ ಏಕೈಕ ಭಾರತೀಯ ಅಂಪೈರ್ ಆಗಿದ್ದಾರೆ.
ಇದನ್ನೂ ಓದಿ ICC World Cup 2023: ಭಾರತ ಬಿಟ್ಟು ವಿಶ್ವಕಪ್ ಗೆಲ್ಲುವ ತಂಡ ಹೆಸರಿಸಿದ ಗಂಭೀರ್
ಅಂಪೈರ್‌ಗಳು
ಕ್ರಿಸ್ ಬ್ರೌನ್, ಕುಮಾರ್ ಧರ್ಮಸೇನಾ, ಮರೈಸ್ ಎರಾಸ್ಮಸ್, ಕ್ರಿಸ್ ಗಫಾನಿ, ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋ, ನಿತಿನ್ ಮೆನನ್, ಅಹ್ಸಾನ್ ರಜಾ, ಪಾಲ್ ರೀಫೆಲ್, ಶರ್ಫುದ್ದೌಲಾ ಇಬ್ನೆ ಶೈದ್, ರಾಡ್ ಟ್ಯುಕರ್, ಪಾಲ್ ಅಲೆಕ್ಸ್ ವಾಲ್ಸನ್, ಜೋಯೆಲ್ ವಿಲ್ಸನ್, ಪಾಲ್ ವಿಲ್ಸನ್.
ಟೂರ್ನಿ ಆರಂಭ
ವಿಶ್ವಕಪ್ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.