Site icon Vistara News

2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಬಿಡ್‌ ಸಲ್ಲಿಸಲ್ಲ; ಗುಜರಾತ್‌ ಸರ್ಕಾರ ಸ್ಪಷ್ಟನೆ

Commonwealth Games 2026

ಅಹಮದಾಬಾದ್​: ನಿಗದಿತ ಬಜೆಟ್​​ಗಿಂತ ಹೆಚ್ಚಿನ ಆದಾಯ ಬೇಕಿರುವ ಕಾರಣದಿಂದ 2026ರ ಕಾಮನ್‌ವೆಲ್ತ್‌ ಗೇಮ್ಸ್‌(Commonwealth Games 2026) ಆತಿಥ್ಯದಿಂದ ಆಸ್ಟ್ರೇಲಿಯಾ(Australia) ಹಿಂದೆ ಸರಿದ ಬೆನ್ನಲ್ಲೇ, ಗುಜರಾತ್‌ನ ಅಹಮದಾಬಾದ್‌(Ahmedabad) ಕ್ರೀಡಾಕೂಟದ ಆತಿಥ್ಯದ ಹಕ್ಕಿಗೆ ಬಿಡ್‌ ಸಲ್ಲಿಸುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಗುಜರಾತ್‌ ಸರ್ಕಾರ(gujarat government) ಸ್ಪಷ್ಟನೆ ನೀಡಿದ್ದು ಈ ವಿಚಾರವನ್ನು ಅಲ್ಲಗಳೆದಿದೆ.

“2026ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ಪಡೆಯುವ ಯಾವುದೇ ಚಿಂತನೆ ನಮಗೆ ಇಲ್ಲ. ಆದರೆ 2036ರ ಒಲಿಂಪಿಕ್ಸ್ ಆತಿಥ್ಯ ಹಕ್ಕು ಪಡೆಯುವುದು ನಮ್ಮ ಮುಂದಿರುವ ಗುರಿ ಎಂದು ಗುಜರಾತ್‌ ಸರ್ಕಾರ ಸ್ಪಷ್ಟಪಡಿಸಿದೆ”. ಒಲಿಂಪಿಕ್ಸ್‌ ಆತಿಥ್ಯಕ್ಕೂ ಮುನ್ನ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಿ ಇದಕ್ಕೆ ಬೇಕಾದ ಸಿದ್ಧತೆ ನಡೆಸಲು ಗುಜರಾತ್‌ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೆಲ ಮಾಧ್ಯಮಗಳು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಗುಜರಾತ್‌ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲವರು ಯಾರು?

ಸೋಮವಾರವಷ್ಟೇ ವಿಕ್ಟೋರಿಯಾ ಪ್ರಾಂತ್ಯದ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂ,(Daniel Andrews) ನಾಲ್ಕು ಪ್ರಾದೇಶಿಕ ಕೇಂದ್ರಗಳಲ್ಲಿ ನಡೆಯಬೇಕಾಗಿದ್ದ ಕ್ರೀಡಾಕೂಟದ ವೆಚ್ಚವು ಯೋಜನೆಯಂತೆ ನಡೆದರೆ 2.6 ಬಿಲಿಯನ್‌ ಆಸ್ಟ್ರೇಲಿಯನ್ ಡಾಲರ್‌ನಿಂದ 7 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಿಂತಲೂ (4.8 ಬಿಲಿಯನ್ ಡಾಲರ್) ಹೆಚ್ಚು ತಗಲಬಹುದು. ಕಳೆದ ವರ್ಷ ಅಂದಾಜು ಮಾಡಲಾದ ಬಜೆಟ್‌ಗಿಂತಲೂ ಮೂರು ಪಟ್ಟು ಹೆಚ್ಚು ವೆಚ್ಚ ತಗಲುವ ಕ್ರೀಡಾಕೂಟದ ಆಯೋಜನೆಗಾಗಿ ಆಸ್ಪತ್ರೆ ಹಾಗೂ ಶಾಲೆಗಳಿಂದ ಹಣವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಒಂದೊಮ್ಮೆ ಈ ಟೂರ್ನಿಯನ್ನು ನಡೆಸಿದ್ದೇ ಆದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಅಂತಿಮವಾಗಿ ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇವೆ” ಎಂದು ಹೇಳಿ ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿದ ವಿಚಾರವನ್ನು ತಿಳಿಸಿದ್ದರು.

2026ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ಪಡೆಯಲು ಯಾವುದೇ ರಾಷ್ಟ್ರ ಮುಂದಾಗದ ಕಾರಣ ಆಯೋಜನೆಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಬಿಡ್ ಸಲ್ಲಿಸಿತ್ತು. ಇದೀಗ ಆಸ್ಟ್ರೇಲಿಯಾ ಕೂಡ ಹಿಂದೆ ಸರಿದಿರುವ ಕಾರಣ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿದೆ.

ಆಸ್ಟ್ರೇಲಿಯಾ ಕಾಮನ್​ವೆಲ್ತ್​ ಗೇಮ್ಸ್​ ಅನ್ನು ಈಗಾಗಲೇ 5 ಬಾರಿ ಆಯೋಜಿಸಿದೆ 2006ರಲ್ಲಿ ವಿಕ್ಟೋರಿಯಾದ ಮೆಲ್ಬೋರ್ನ್​ನಲ್ಲಿ ಆಯೋಜಿಸಲಾಗಿತ್ತು 1938ರಲ್ಲಿ ಸಿಡ್ನಿಯಲ್ಲಿ 1962ರಲ್ಲಿ ಪರ್ತ್​​ನಲ್ಲಿ 1982ರಲ್ಲಿ ಬ್ರಿಸ್ಬೇನ್ ಮತ್ತು 2018ರ ಆವೃತ್ತಿ ಗೋಲ್ಡ್​ಕಾಸ್ಟ್​​ನಲ್ಲಿ ನಡೆದಿತ್ತು.

Exit mobile version