Site icon Vistara News

Cryptocurrency : ಬಿಟ್​ ಕಾಯಿನ್​, ಬೆಟ್ಟಿಂಗ್​, ತಂಬಾಕಿನ ಜಾಹೀರಾತು ಬೇಡ; ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚನೆ

WPL Auction

#image_title

ಮುಂಬಯಿ : ಮಹಿಳೆಯರ ಸೂಪರ್​ ಲೀಗ್​ನ (WPL 203) ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸೋಮವಾರ (ಫೆಬ್ರವರಿ 13) ನಡೆದಿದ್ದು ಸ್ಟಾರ್​ ಕ್ರಿಕೆಟಿಗರು ನಾನಾ ಫ್ರಾಂಚೈಸಿಗಳನ್ನು ಸೇರಿಕೊಂಡಿದ್ದಾರೆ. ಅವರೆಲ್ಲರೂ ಕೋಟಿಕೋಟಿ ಹಣ ಜೇಬಿಗೆ ಇಳಿಸಿಕೊಂಡಿದ್ದಾರೆ. ಇದೇ ವೇಳೆ ಬಿಸಿಸಿಐ ಫ್ರಾಂಚೈಸಿಗಳಿಗೆ ಸೂಚನೆಯೊಂದನ್ನು ಹೊರಡಿಸಿದ್ದು, ಕ್ರಿಪ್ಟೋಕರೆನ್ಸಿ, ಬೆಟ್ಟಿಂಗ್​, ಜೂಜು ಹಾಗೂ ತಂಬಾಕು ಕಂಪನಿಗಳ ಜತೆ ಜಾಹೀರಾತು ಒಪ್ಪಂದ ಮಾಡಿಕೊಳ್ಳದಂತೆ ಹೇಳಿದೆ ಎಂದು ಕ್ರಿಕ್​ಬಜ್​ ವರದಿ ಮಾಡಿದೆ.

ಎಲ್ಲ ಫ್ರಾಂಚೈಸಿಗಳು ಟೂರ್ನಿ ಆರಂಭಗೊಳ್ಳುವ 10 ದಿನ ಮೊದಲು ಪ್ರಾಯೋಜಕರ ಹಾಗೂ ಜಾಹೀರಾತುದಾರರ ಪಟ್ಟಿಯನ್ನು ಬಿಸಿಸಿಐ ಸಲ್ಲಿಸಬೇಕು. ಅದರಲ್ಲಿ ಬೆಟ್ಟಿಂಗ್​ ಸೇರಿದಂತೆ ಪಟ್ಟಿ ಮಾಡಲಾಗಿರುವ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಹೇಳಲಾಗಿದೆ. ಮಹಿಳೆಯರ ಸೂಪರ್ ಲೀಗ್ ಮಾರ್ಚ್​ 4ರಂದು ಆರಂಭಗೊಂಡು 26ರವರೆಗೆ ನಡೆಯಲಿದೆ. ಹೀಗಾಗಿ ಫೆಬ್ರವರಿ 22ಕ್ಕೆ ಮೊದಲು ಫ್ರಾಂಚೈಸಿಗಳಿಗೆ ಬಿಸಿಸಿಐ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

ಇದನ್ನೂ ಓದಿ : WPL Auction : ಆರ್​ಸಿಬಿ ಬಳಗ ಸೇರಿದ ಸ್ಟಾರ್​ ಕ್ರಿಕೆಟರ್​ ಸ್ಮೃತಿ ಮಂಧಾನಾ, ಅವರು ಪಡೆದ ಮೊತ್ತವೆಷ್ಟು ಗೊತ್ತೇ?

ಸುಪ್ರೀಂ ಕೋರ್ಟ್​​ ಆದೇಶದ ಪ್ರಕಾರ ಬೆಟ್ಟಿಂಗ್ ಹಾಗೂ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಬಳಸುವಂತೆ ಉತ್ತೇಜಿಸುವುದನ್ನು ನಿಷೇಧ ಮಾಡಲಾಗಿದೆ. ಸರಕಾರದ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದಾಗಿ ಬಿಸಿಸಿಐ ಪ್ರಾಂಚೈಸಿಗಳಿಗೆ ಸೂಚಿಸಿದೆ.

Exit mobile version