ಮುಂಬೈ: ಭಾರತ ತಂಡದ ಮಾಜಿ ಕ್ರಿಕೆಟಿಗ, ರನ್ ಮೆಷಿನ್ ಸಚಿನ್ ತೆಂಡೂಲ್ಕರ್ (Sachin Tendulkar) ಭಾರತೀ ಕ್ರಿಕೆಟ್ ತಂಡದಲ್ಲಿ 24 ವರ್ಷ ಕಾಯಂ ಸದಸ್ಯರಾಗಿದ್ದರು. ಹಲವಾರು ರೆಕಾರ್ಡ್ಗಳನ್ನು ಬ್ರೇಕ್ ಮಾಡುವ ಜತೆಗೆ ವಿಶ್ವ ಕ್ರಿಕೆಟ್ನ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡವರು. ಆದರೆ, ಅವರ ಪುತ್ರ ಅರ್ಜುನ್ ತೆಂಡೂಲ್ಕರ್ಗೆ ಆ ಭಾಗ್ಯ ಸಿಗುತ್ತಿಲ್ಲ. ಆಲ್ರೌಂಡರ್ ಆಗಿರುವ ಅವರಿಗೆ ಭಾರತ ತಂಡವನ್ನು ಪ್ರವೇಶಿಸುವ ಮಾತಿರಲಿ, ದೇಶೀಯ ಕ್ರಿಕೆಟ್ ತಂಡದಲ್ಲೂ ಸ್ಥಾನ ಸಿಗುತ್ತಿಲ್ಲ. ಹೀಗಾಗಿ ಅವರು ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ಕಡೆಗೆ ಹೋಗಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಉತ್ತಮ ಕ್ರಿಕೆಟಿಗ. ಎಡಗೈ ಬೌಲರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್. ಆದರೆ, ಅವರಿಗೆ ಪ್ರಮುಖ ತಂಡಗಳನ್ನು ಪ್ರತಿನಿಧಿಸುವ ಅವಕಾಶ ದೊರೆಯುತ್ತಿಲ್ಲ. ಹೀಗಾಗಿ ಇಂಗ್ಲೆಂಡ್ನ ಮಿಡ್ಲ್ಸೆಕ್ಸ್ ಕೌಂಟಿ ಕ್ಲಬ್ ತಂಡ ಸೇರಿಕೊಂಡಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಅವರನ್ನು ಎರಡು ವರ್ಷಗಳಿಂದ ಮುಂಬಯಿ ಇಂಡಿಯನ್ಸ್ ಫ್ರಾಂಚೈಸಿ 20 ಲಕ್ಷ ರೂಪಾಯಿ ಮೂಲ ಬೆಲೆಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ, ಅವರಿಗೆ ಆಡುವ ಬಳಗದಲ್ಲಿ ಆಡುವ ಅವಕಾಶ ಕೊಟ್ಟಿರಲಿಲ್ಲ. ಎರಡು ವರ್ಷಗಳಿಂದಲೂ ಅವರು ಬೆಂಚು ಕಾಯಿಸುವ ಮತ್ತು ನೆಟ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ಮಾತ್ರ ಪಡೆದುಕೊಂಡಿದ್ದಾರೆ. ಹೀಗಾಗಿ ಅವರು ಕ್ರಿಕೆಟ್ ಕೆರಿಯರ್ ಉತ್ತಮ ಮಾಡಿಕೊಳ್ಳುವುದಕ್ಕೆ ಕೌಂಟಿ ಕ್ಲಬ್ ಕಡೆಗೆ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಯಾವ ಪಂದ್ಯ?
ಇಂಗ್ಲೆಂಡ್ನಲ್ಲಿ ಮಿಡ್ಲ್ಸೆಕ್ಸ್ ಸೆಕೆಂಡ್ ಇಲೆವೆನ್ ಹಾಗೂ ಕಾನ್ಫರೆನ್ಸ್ ಇಲೆವೆನ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಇದೊಂದೂ ಸೌಹಾರ್ದ ಏಕದಿನ ಪಂದ್ಯ. ಎಡಗೈ ಮಧ್ಯಮ ಕ್ರಮಾಂಕದ ಬೌಲರ್ ಆಗಿರುವ ಅರ್ಜುನ್ 4 ಓವರ್ ಎಸೆದು 16 ರನ್ ಮಾತ್ರ ನೀಡಿದ 1 ವಿಕೆಟ್ ಕಬಳಿಸಿದ್ದಾರೆ.
ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ಗೆ ಬ್ಯಾಟಿಂಗ್ ಮಾಡುವ ಅವಕಾಶ ದೊರಕಿಲ್ಲ. ಯಾಕೆಂದರೆ ಅವರ ಮಿಡ್ಲ್ಸೆಕ್ಸ್ ತಂಡ ಆರಂಭಿಕ ಬ್ಯಾಟರ್ಗಳೇ ಪಂದ್ಯವನ್ನು ಗೆಲ್ಲಿಸಿದ್ದರು.
ಅವಕಾಶಗಳೇ ದೊರಕದೇ ಇರುವ ಅವರು ಕೌಂಟಿ ಕ್ರಿಕೆಟ್ ಮೂಲಕ ತಮ್ಮ ಕ್ರಿಕೆಟಿಂಗ್ ತಂತ್ರಗಳಿಗೆ ಇನ್ನಷ್ಟು ಸಾಣೆ ಹಿಡಿದು ಮುಂದಿನ ಆವೃತ್ತಿ ಐಪಿಎಲ್ನಲ್ಲಿ ತಂಡವೊಂದರ ಪರ ಕಣಕ್ಕೆ ಇಳಿಯುವುದೇ ಅವರ ಗುರಿಯಾಗಿದೆ.
ಇದನ್ನೂ ಓದಿ | ಸಚಿನ್ sixer ದಾಖಲೆ ಮೀರಿದ ರಿಷಭ್ ಪಂತ್