Site icon Vistara News

WTC Final 2023: ಡ್ಯೂಕ್ಸ್‌ ಚೆಂಡಿನಲ್ಲೇ ಫೈನಲ್​ ಪಂದ್ಯ; ಬಿಸಿಸಿಐ

Dukes ball

#image_title

ಮುಂಬಯಿ: ಕೆಲ ದಿನಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುವ ಮಹತ್ವದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್(WTC Final 2023)ನಲ್ಲಿ ಡ್ಯೂಕ್ಸ್‌(Dukes Ball) ಸಂಸ್ಥೆಯ ಚೆಂಡಿನ ಬದಲು ಕೂಕಾಬುರಾ ಚೆಂಡು(Kookaburra balls) ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಈ ಬಗ್ಗೆ ಬಿಸಿಸಿಐ ಉನ್ನತ ಮೂಲಗಳು ಮಾಹಿತಿ ನೀಡಿದ್ದು ಯಾವುದೇ ಕಾರಣಕ್ಕೂ ಡ್ಯೂಕ್ಸ್‌ ಚೆಂಡಿನ ಬದಲು ಇತರ ಚೆಂಡಿನಲ್ಲಿ ನಾವು ಪಂದ್ಯ ಆಡುವುದಿಲ್ಲ ಎಂದು ಹೇಳಿರುವುದಾಗಿ ಇನ್​ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ.

ಉಭಯ ತಂಡಗಳ ಈ ಪ್ರಶಸ್ತಿ ಸಮರ ಜೂನ್‌ 7 ರಿಂದ 11ರವರೆಗೆ ಲಂಡನ್​ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಭಾರತ ತಂಡ ಮೊದಲ ಹಂತದಲ್ಲಿ ಲಂಡನ್​ಗೆ ಪ್ರಯಾಣ ಬೆಳೆಸಿದೆ ಎಂದು ತಿಳಿದುಬಂದಿದೆ. ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಸಿರಾಜ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಶಾರ್ದೂಲ್ ಠಾಕೂರ್‌, ಉಮೇಶ್‌ ಯಾದವ್‌, ಜೈದೇವ್‌ ಉನಾದ್ಕತ್‌ ಅವರೆಲ್ಲ ಮಂಗಳವಾರ ವಿಮಾನ ಏರಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ ಉನಾದ್ಕತ್‌ ಭುಜದ ನೋವಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ಪ್ರಶಸ್ತಿಗಾಗಿ ಕಾದಾಟ ನಡೆಸಿತ್ತು. ಇಲ್ಲಿ ಕಿವೀಸ್​ ಚೊಚ್ಚಲ ಟ್ರೋಫಿ ಎತ್ತಿ ಸಂಭ್ರಮಿಸಿತ್ತು. ಈ ಪಂದ್ಯದಲ್ಲಿ ಡ್ಯೂಕ್ಸ್‌ ಸಂಸ್ಥೆಯ ಚೆಂಡನ್ನು ಬಳಸಲಾಗಿತ್ತು. ಆದರೆ ಈ ಬಾರಿ ಕೂಕಾಬುರಾ ಚೆಂಡು ಬಳಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಬಿಸಿಸಿಐ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಈ ಬಾರಿಯೂ ಡ್ಯೂಕ್ಸ್‌ ಸಂಸ್ಥೆಯ ಚೆಂಡನ್ನೇ ಬಳಸುವ ಸಾಧ್ಯತೆ ಇದೆ.

ಫೈನಲ್​ ಪಂದ್ಯಕ್ಕೆ ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್​ದೇವ್​ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​). ಸ್ಟ್ಯಾಂಡ್‌ ಬೈ ಆಟಗಾರರು: ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

ಇದನ್ನೂ ಓದಿ WTC Final 2023 : ಇಂಗ್ಲೆಂಡ್​ನಲ್ಲಿ ಬೇಗ ಅಭ್ಯಾಸ ಆರಂಭಿಸಲಿರುವ ಕೊಹ್ಲಿ ಮತ್ತು ಬಳಗ

ಆಸ್ಟ್ರೇಲಿಯಾ ಟೆಸ್ಟ್‌ ತಂಡ: ಪ್ಯಾಟ್‌ ಕಮಿನ್ಸ್‌ (ನಾಯಕ), ಸ್ಕಾಟ್‌ ಬೊಲೆಂಡ್‌, ಅಲೆಕ್ಸ್‌ ಕೇರಿ, ಕ್ಯಾಮರೂನ್​ ಗ್ರೀನ್‌, ಮಾರ್ಕಸ್‌ ಹ್ಯಾರಿಸ್‌, ಜೋಶ್​ ಹ್ಯಾಝಲ್​ವುಡ್​, ಟ್ರಾವಿಸ್‌ ಹೆಡ್‌, ಜೋಶ್​ ಇಂಗ್ಲಿಸ್‌, ಉಸ್ಮಾನ್‌ ಖವಾಜ, ಮಾರ್ನಸ್‌ ಲಾಬುಶೇನ್‌, ನಥಾನ್‌ ಲಿಯೋನ್‌, ಮಿಚೆಲ್‌ ಮಾರ್ಷ್‌, ಟಾಡ್‌ ಮರ್ಫಿ, ಮ್ಯಾಟ್‌ ರೆನ್‌ಶಾ, ಸ್ಟೀವನ್ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಡೇವಿಡ್‌ ವಾರ್ನರ್‌

Exit mobile version